ದಾರಿ ತಪ್ಪಿದ ಮಗ 1975ರಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಿನಿಮಾ. ಡಾ. ರಾಜ್ ಕುಮಾರ್ ಅಭಿನಯದ ಈ ಚಿತ್ರ ಕ್ಲಾಸಿಕ್ ಮೂವಿ ಎಂದೇ ಹೆಸರು ಮಾಡಿತ್ತು.
ಇದೇ ಟೈಟಲ್ ಇಟ್ಟುಕೊಂಡು ಡಾ. ರಾಜ್ ಕುಮಾರ್ ಅವರ ಮೊಮ್ಮಗ ಅಂದ್ರೆ ನಟ ರಾಮ್ ಕುಮಾರ್ ಪುತ್ರ ಧೀರನ್ ರಾಮ್ ಕುಮಾರ್ ಸಿನಿಮಾ ಮಾಡಲು ಮುಂದಾಗಿದ್ದರು.
ಜಯಣ್ಣ ಕಂಬೈನ್ಸ್ ನಲ್ಲಿ ನಿರ್ಮಾಣವಾಗುತ್ತಿದ್ದ ಈ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ಅನಿಲ್ ಕುಮಾರ್ ಹೊತ್ತುಕೊಂಡಿದ್ದರು. ನಟಿ ಮಾನ್ವಿತಾ ಕಾಮತ್ ಧೀರನ್ ಅವರಿಗೆ ನಾಯಕಿಯಾಗಿಯೂ ಆಯ್ಕೆಯಾಗಿದ್ದರು.
ಇದೀಗ ಚಿತ್ರದ ಟೈಟಲ್ ಬದಲಾಯಿಸಲು ನಿರ್ದೇಶಕರು ತೀರ್ಮಾನಿಸಿದ್ದಾರೆ. ಅದ್ಯಾಕೋ ಚಿತ್ರದ ಕಥೆಗೂ ಟೈಟಲ್ ಗೂ ಹೊಂದಾಣಿಕೆಯಾಗುತ್ತಿಲ್ಲ. ಶೀರ್ಷಿಕೆ ಪ್ರೇಕ್ಷಕರ ದಾರಿ ತಪ್ಪಿಸುವಂತಿದೆ ಎಂದು ನಿರ್ದೇಶಕರು ಈ ತೀರ್ಮಾನಕ್ಕೆ ಬಂದಿದ್ದಾರೆ.
ಸದ್ಯ ಚಿತ್ರದ ಪೋಸ್ಟ್ ಪ್ರೊಡೆಕ್ಷನ್ ಕೆಲಸಗಳು ನಡೆಯುತ್ತಿದ್ದು ಅಕ್ಟೋಬರ್ ಮೊದಲ ವಾರದಲ್ಲಿ ವಿಶೇಷ ಹಾಡಿನ ಚಿತ್ರೀಕರಣ ನಡೆಯಲಿದೆ. ನಂತರ ನವೆಂಬರ್ ನಲ್ಲಿ ಚಿತ್ರ ತೆರೆ ಕಾಣುವ ಸಾಧ್ಯತೆ ಇದೆ.
Discussion about this post