ನಟಸಾರ್ವಭೌಮ ಡಾ. ರಾಜಕುಮಾರ್ ಮೊಮ್ಮಕ್ಕಳು ಅದಾಗಲೇ ಚಿತ್ರರಂಗಕ್ಕೆ ಎಂಟ್ರಿಕೊಂಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಚಿತ್ರರಂಗಕ್ಕೆ ಮೊಮ್ಮಗಳು ಎಂಟ್ರಿ ಕೊಡುತ್ತಿದ್ದಾಳೆ
ಚಂದನವನದ ನಟ ರಾಮ್ ಕುಮಾರ್ ಪುತ್ರಿ ಧನ್ಯಾ ರಾಮ್ ಕುಮಾರ್ ಬೆಳ್ಳಿತೆರೆಯ ಮೇಲೆ ಮಿನುಗಲು ರೆಡಿಯಾಗಿದ್ದು, ಮದುವೆಯ ಮಮತೆಯ ಕರೆಯೋಲೆ ಖ್ಯಾತಿಯ ನಾಯಕ ನಟ ಸೂರಜ್ ಗೌಡಗೆ ಜೋಡಿಯಾಗಿ ಧನ್ಯಾ ಅಭಿನಯಿಸುತ್ತಿದ್ದಾರೆ.
ಈ ಚಿತ್ರದ ಮೂಲಕ ಸುಮನ್ ಜಾದುಗಾರ್ ಚೊಚ್ಚಲ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈ ಚಿತ್ರಕ್ಕಾಗಿ ಫೋಟೋ ಶೂಟ್ ಅನ್ನು ಭರ್ಜರಿಯಾಗಿ ಮಾಡಿಸಿಕೊಳ್ಳಲಾಗಿದೆ. ಮಾಡಿದ್ದಾರೆ.
ಮೊದಲ ಹಂತವಾಗಿ ಚಿತ್ರದ ಟೈಟಲ್ ಕಾರ್ಡ್ ಪೋಸ್ಟರ್ಸ್ ಗಳಿಗಾಗಿ ಚಿತ್ರತಂಡ ಫೋಟೋ ಶೂಟ್ ಮುಗಿಸಿಕೊಂಡಿದೆ.
Discussion about this post