ಲಂಡನ್ : ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಕೊರೋನಾ ವೈರಸ್ ನ ಅಪಾಯಕಾರಿ ರೂಪಾಂತರಿ ವೈರಸ್ ಡೆಲ್ಟಾ ವೈರಸ್ ಇದೀಗ ಲಂಡನ್ ಹಾಗೂ ಅಮೆರಿಕಾದಲ್ಲಿ ಆತಂಕ ಹುಟ್ಟಿಸಿದೆ.
ಬ್ರಿಟನ್ ನಲ್ಲಿ ಈ ವೈರಸ್ 11 ದಿನಕ್ಕೊಮ್ಮೆ ದ್ವಿಗುಣವಾಗುತ್ತಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ಹೀಗಾಗಿ ಇದನ್ನು ಆತಂಕಕಾರಿ ರೂಪಾಂತರಿ ವರ್ಗಕ್ಕೆ ಸೇರಿಸಲಾಗಿದೆ. ಅತ್ಯಂತ ವೇಗವಾಗಿ ಹರಡುವ ಈ ವೈರಸ್ ಸೋಂಕಿತರ ಸಂಖ್ಯೆಯನ್ನು ಹೆಚ್ಚಿಸುತ್ತದೆ.ಆತಂಕ ಅಂದ್ರೆ ಲಸಿಕೆ ಪ್ರಭಾವದಿಂದಲೂ ನುಣುಚಿಕೊಳ್ಳುವ ತಾಕತ್ತು ಈ ವೈರಸ್ ಗಿದೆ. ಭಾರತದಲ್ಲಿ ಇದೇ ವೈರಸ್ ಕಾರಣದಿಂದ 2 ನೇ ಅಲೆ ಭಾರತಕ್ಕೆ ಕಂಟಕವಾಗಿ ಪರಿಣಮಿಸಿತ್ತು.
ಅಮೆರಿಕಾದಲ್ಲೂ ಡೆಲ್ಟಾ ವೈರಸ್ ಕಾಟ ಶುರುವಾಗಿದ್ದು, ಗಮನಿಸಬೇಕಾದ ರೂಪಾಂತರಿ ವೈರಸ್ ಪಟ್ಟಿಯಿಂದ, ಆತಂಕಕಾರಿ ರೂಪಾಂತರಿ ವೈರಸ್ ಪಟ್ಟಿಗೆ ಸೇರಿಸಿದೆ. ಈಗಾಗಲೇ ಈ ವೈರಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ ಅಪಾಯಕಾರಿ ವೈರಸ್ ಪಟ್ಟಿಗೆ ಸೇರಿಸಿದೆ.
ಭಾರತದಲ್ಲಿ ಇದೀಗ ಡೆಲ್ಟಾ ವೈರಸ್ ಅಬ್ಬರ ಕಡಿಮೆಯಾಗಿದೆ. ಆದರೆ ಡೆಲ್ಟಾ ಫ್ಲಸ್ ವೈರಸ್ ಪತ್ತೆಯಾಗಿದ್ದು, ಮೂರನೇ ಅಲೆ ಹೊತ್ತಿಗೆ ಡೆಲ್ಟಾ ಫ್ಲಸ್ ನಿಂದ ಅಪಾಯ ಕಾದಿದೆ ಎನ್ನಲಾಗಿದೆ.
Discussion about this post