ಬೆಂಗಳೂರು : ರಾಜ್ಯದಲ್ಲಿ ಮೊದಲ ಡೆಲ್ಟಾ ಫ್ಲಸ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಇದೀಗ ರಾಜ್ಯದಲ್ಲಿ ಹೊಸ ಆತಂಕ ಶುರುವಾಗಿದೆ.
ಈಗಾಗಲೇ ಮಹಾರಷ್ಟ್ರ, ಕೇರಳ ರಾಜ್ಯಗಳಲ್ಲಿ ಡೆಲ್ಟಾ ಫ್ಲಸ್ ವೈರಸ್ ಪತ್ತೆಯಾಗಿತ್ತು. ಅದೀಗ ಮೈಸೂರು ಜಿಲ್ಲೆಯಲ್ಲಿ ಎನ್ ಸಿ ಬಿಎಸ್ ನಡೆಸಿದ ಜೀನೋಮಿಕ್ ಸ್ವೀಕ್ವೆನ್ಸಿಂಗ್ ನಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ತಳಿ ವೈರಸ್ ಪತ್ತೆಯಾಗಿದೆ. ಇದನ್ನು ಆರೋಗ್ಯ ಸಚಿವ ಸುಧಾಕರ್ ಅವರೇ ದೃಢಪಡಿಸಿದ್ದಾರೆ. ಮೈಸೂರಿನಲ್ಲಿ ಇನ್ನೂ 40 ಜನರ ವರದಿ ಬರಬೇಕಾಗಿದೆ.
ಇದು ಕೊರೊನಾದ ಹೊಸ ರೂಪಾಂತರವಾಗಿದ್ದು, ವೇಗವಾಗಿ ಹರಡುವುದಿಲ್ಲ ಆದರೆ ವ್ಯಾಕ್ಸಿನ್ ನೀಡುವ ರೋಗ ನಿರೋಧಕ ಶಕ್ತಿಯನ್ನು ಛೇಧಿಸುವ ಸಾಮರ್ಥ್ಯ ಈ ವೈರಸ್ ಗಿದೆ.
ಲಸಿಕೆ ಪಡೆದವರಿಗೂ, ಕೊರೋನಾ ಸೋಂಕು ಗುಣಮುಖರಾದವರಿಗೂ ಡೆಲ್ಟಾ ವೈರಸ್ ಅಟ್ಯಾಕ್ ಆಗುವ ಸಾಧ್ಯತೆಯಿದೆ. ಈ ಕಾರಣದಿಂದಲೇ ಆತಂಕ ಮನೆ ಮಾಡಿದೆ.
Discussion about this post