Saturday, February 27, 2021

ಮನೆಯಲ್ಲಿದ್ದ ಸೋಫಾ ಮಾರಲು ಹೋಗಿ 34 ಸಾವಿರ ಕಳೆದುಕೊಂಡ ಕೇಜ್ರಿವಾಲ್ ಪುತ್ರಿ

Must read

ನವದೆಹಲಿ : ಮಂದಿ ಅದಷ್ಟೇ ಬುದ್ಧಿವಂತರೇ ಆಗಿರಲಿ ಅನ್ ಲೈನ್ ಮೂಲಕ ವಂಚಿಸುವ ಖದೀಮರು ಅವರನ್ನು ಖೆಡ್ಡಾಗೆ ಬೀಳಿಸಿಯೇ ಬೀಳಿಸುತ್ತಾರೆ.

ಒಂದಿಷ್ಟು ಎಚ್ಚರ ತಪ್ಪಿದ್ರೆ ಸಾಕು, ಸದ್ದಿಲ್ಲದೆ ಖಾತೆಯ ಹಣವನ್ನು ದೋಚಿರುತ್ತಾರೆ.

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪುತ್ರಿಗೂ ಹೀಗೆ ಆಗಿದೆ. ಮನೆಯಲ್ಲಿದ್ದ ಸೋಫಾವನ್ನು OLX ನಲ್ಲಿ ಮಾರಾಟ ಮಾಡಲು  ಹರ್ಷಿತಾ ಕೇಜ್ರಿವಾಲ್ ಮುಂದಾಗಿದ್ದರು.

ಇದನ್ನು ಗಮನಿಸಿದ ಖದೀಮ ಸೋಫಾ ಖರೀದಿಸುವ ನೆಪದಲ್ಲಿ ಹರ್ಷಿತಾರನ್ನು ಸಂಪರ್ಕಿಸಿದ್ದಾನೆ.

ಅಷ್ಟೇ ಹರ್ಷಿತಾ ನಂಬಿಕೆ ಗಳಿಸಿದ ಆನ್ ಲೈನ್ ವಂಚಕ, ನಂಬಿಕೆ ಬರಲೆಂದು ಒಂದಿಷ್ಟು ಹಣವನ್ನು ಸಿಎಂ ಪುತ್ರಿಯ ಖಾತೆಗೆ ಹಾಕಿದ್ದಾನೆ.

ಇದಾದ ಬಳಿಕ ಬಾರ್ ಕೋಡ್ ಒಂದನ್ನು ಕಳುಹಿಸಿ ಸ್ಕ್ಯಾನ್ ಮಾಡಲು ಮನವಿ ಮಾಡಿದ್ದಾನೆ. ಹಿಂದೆ ಮುಂದೆ ಯೋಚಿಸದ ಹರ್ಷಿತಾ ವಂಚಕ ಹೇಳಿದಂತೆ ಮಾಡಿದ್ದಾರೆ,

 ಇದಾದ ಕೆಲವೇ ಹೊತ್ತಿನಲ್ಲಿ ಹರ್ಷಿತಾ ಖಾತೆಯಿಂದ ಮೊದಲು 20 ಸಾವಿರ ಹಾಗೂ ನಂತರ 14 ಸಾವಿರ ವಿತ್ರಡ್ರಾ ಆಗಿದೆ.

ತಕ್ಷಣ ಎಚ್ಚೆತ್ತುಕೊಂಡ ಹರ್ಷಿತಾ ತನ್ನ ಖಾತೆಯನ್ನು ಬ್ಲಾಕ್ ಮಾಡಿ, ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -
- Advertisement -

Latest article