ದರ ಏರಿಕೆ, ನೆರೆ, ಬರ ಹೀಗೆ ಜನರ ಸಂಕಷ್ಟದ ಸುದ್ದಿಗಳು ರಾರಾಜಿಸಬೇಕಾದ ಜಾಗದಲ್ಲಿ ಮದುವೆ,ಡೈವೋರ್ಸ್ ಗಳೇ ರಾರಾಜಿಸುತ್ತಿದೆ. ಯಾರನ್ನು ದೂರುವುದು ಗೊತ್ತಾಗುತ್ತಿಲ್ಲ.
ಇದೀಗ ಕಿರಿಕ್ ಜೋಡಿ ನಿಶ್ಚಿತಾರ್ಥದ ಕಿರಿಕ್ ನಡುವೆ ಗೃಹಸ್ಥಾಶ್ರಮ ಸ್ವೀಕರಿಸಲು ಸಿದ್ದವಾಗಿರುವ ದೀಪಿಕಾ ಪಡುಕೋಣೆ ಕಿರಿಕ್ ಮಾಡಿಕೊಂಡಿದ್ದಾಳೆ.
ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆ ಕುರಿತಂತೆ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿ ಹರಿದಾಡುತ್ತಿದೆ. ಮದುವೆಗೆ ಕರೆಯೋದಿಲ್ಲ ಅನ್ನುವುದು ಗೊತ್ತಿದ್ದರೂ ಜನ ಮಾತ್ರ ಅವರದ್ದು ಮದುವೆ ಯಾವಾಗ ಎಂದು ಇಣುಕುತ್ತಿದ್ದಾರೆ.
ಸಂಬಂಧವಿಲ್ಲದ ಸುದ್ದಿ ಬಗ್ಗೆ ನಮಗೆ ಇನ್ನಿಲ್ಲದ ಕಾತರವೇ ಅದಕ್ಕೆ ಕಾರಣ.
ಮಾಹಿತಿ ಪ್ರಕಾರ, ಈ ವರ್ಷ ನವೆಂಬರ್ 10 ರಂದು ಇಟಲಿಯ ಲೇಕ್ ಕೊಮೊದಲ್ಲಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಡೆಯಲಿದೆ ಎನ್ನಲಾಗಿದ್ದು ಕೇವಲ 30 ಗಣ್ಯ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ.
ಆದರೆ ಮದುವೆ ಬಗ್ಗೆ ಪ್ರಶ್ನೆ ಕೇಳಿದರೆ ಕೆನ್ನೆ ಕೆಂಪು ಮಾಡಬೇಕಾದ ದೀಪಿಕಾ ಕೆನ್ನೆಯನ್ನು ಕೆಂಡ ಮಾಡಿ ಉತ್ತರಿಸಿದ್ದಾರೆ.
ಇತ್ತೀಚೆಗೆ ಮಹಿಳೆಯ ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ನಟಿಯನ್ನು ಪತ್ರಕರ್ತನೊಬ್ಬ ಮದುವೆ ಬಗ್ಗೆ ಆಕೆಯನ್ನೇ ಪ್ರಶ್ನಿಸಿದ್ದಾನೆ.
ಇದರಿಂದ ಗರಂ ಆದ ದೀಪಿಕಾ ಇದ್ದಕ್ಕಿದ್ದಂತೆ ಮೈ ಮೇಲೆ ಅದ್ಯಾವ ಶಕ್ತಿ ಆವರಿಸಿದಂತೆ ಆಡಿದ್ದಾರೆ. ವರದಿಗಾರ ಮೇಲೆಯೇ ಹರಿಹಾಯ್ದಿದ್ದಾರೆ.
“ನನ್ನ ಮದುವೆ ಕುರಿತು ನೀವು ಕೇಳುವ ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ, ಅದು ನನ್ನ ವೈಯುಕ್ತಿಕ ವಿಚಾರ. ಕಾರ್ಯಕ್ರಮದಲ್ಲಿ ಏನು ಪ್ರಶ್ನೆ ಕೇಳಬೇಕೋ ಅದನ್ನು ಕೇಳಿ ಎಂದು ದೀಪಿಕಾ ಗಟ್ಟಿಯಾಗಿ ಉತ್ತರಿಸಿದ್ದಾರೆ.
[youtube https://www.youtube.com/watch?v=BD3dbiEJg4I&w=706&h=397]
Discussion about this post