ಕಾಂಗ್ರೆಸ್ ಶಾಸಕ & ಪುತ್ರನ ವಿರುದ್ಧ ಗಂಭೀರ ಪರಶುರಾಮ್ ಕುಟುಂಬಸ್ಥರ ಆರೋಪ
ಗುರುವಾರ ವರ್ಗಾವಣೆಗೊಂಡು ಪೊಲೀಸ್ ಠಾಣೆಯಲ್ಲಿ ಬೀಳ್ಕೊಡುಗೆ ಸ್ವೀಕರಿಸಿದ್ದ ಪಿಎಸ್ಐ ಓರ್ವರು ಶುಕ್ರವಾರ ಹೃದಯಾಘಾತದಿಂದ ನಿಧನರಾದ ಘಟನೆ ಯಾದಗಿರಿಯಲ್ಲಿ ನಡೆದಿದೆ.ಯಾದಗಿರಿ ನಗರದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿದ್ದ ಪರಶುರಾಮ್ (35) ಶುಕ್ರವಾರ ರಾತ್ರಿ 8 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ
ಈ ನಡುವೆ ಪರಶುರಾಮ್ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯಲಾರಂಭಿಸಿದೆ. ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ದಲಿತ ಸಂಘಟನೆಗಳು ಆಗ್ರಹಿಸಿವೆ. ಈನಡುವೆ ಪರಶುರಾಮ್ ಸಾವಿಗೆ ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಆತನ ಪುತ್ರ ಸನ್ನಿಗೌಡ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ಯಾದಗಿರಿ PSI ಆಗಿದ್ದ ಪರಶುರಾಮ್ ನಿಧನ : ರಾತ್ರಿ ಹೃದಯಾಘಾತ
ಈ ಮೂಲಕ ಹಲವು ಭ್ರಷ್ಟಚಾರದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಅಘಾತ ಎದುರಾಗಿದೆ.
ಪೋಸ್ಟಿಂಗ್ಗಾಗಿ ಲಕ್ಷ ಲಕ್ಷ ಹಣಕ್ಕೆ ಯಾದಗಿರಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಬೇಡಿಕೆ ಇಟ್ಟಿದ್ದರು. ಆದಾದ ನಂತರ ನಿಯಮಬಾಹಿರವಾಗಿ ವರ್ಗಾವಣೆ ಮಾಡಿದ್ದರಿಂದ ತೀವ್ರ ಒತ್ತಡಕ್ಕೆ ಅವರು ಒಳಗಾಗಿದ್ದರು. ಒತ್ತಡದಿಂದಲೇ ಅವರಿಗೆ ಹೃದಯಾಘಾತವಾಗಿದೆ.
ಪರಶುರಾಮ್ ಜಾಗಕ್ಕೆ ಹೊಸದಾಗಿ ಬಂದವರು ಶಾಸಕರಿಗೆ ಹಣ ನೀಡಿಯೇ ಬಂದಿದ್ದಾರೆ ಎಂದು ಪರಶುರಾಮ್ ಮಾವ ವೆಂಕಟಸ್ವಾಮಿ ಮತ್ತು ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿದ್ದಾರೆ.
ಮಧ್ಯರಾತ್ರಿಯಲ್ಲೂ ಗಂಡ ಕರ್ತವ್ಯ ಅಂತಾ ಓಡಾಡುತ್ತಿದ್ದ. ಗಂಡ ಮಾಡಿದ ಅನ್ಯಾಯವಾದರು ಏನು. ಶಾಸಕರು ಸ್ಥಳಕ್ಕೆ ಬರ್ಲಿ, ಅವರು ಬರೋವರೆಗೂ ನಾನು ಇಲ್ಲಿಂದ ಹೋಗಲ್ಲ. ನನ್ನ ಗಂಡನ ಸಾವಿಗೆ ನ್ಯಾಯ ಕೊಡಿಸಿ ಎಂದು ಯಾದಗಿರಿ ಎಸ್ಪಿ ಜಿ. ಸಂಗೀತಾ ಎದುರು ಶ್ವೇತಾ ಕಣ್ಣೀರು ಹಾಕಿದ್ದಾರೆ.
ಪರಶುರಾಮ್ ಪಿಎಸ್ಐ ಹುದ್ದೆ ಪಡೆಯಲು 30 ಲಕ್ಷ ರೂ. ನೀಡಿದ್ದರು ಅನ್ನುವ ಮಾತುಗಳು ಕೂಡಾ ಇದೀಗ ಕೇಳಿ ಬರುತ್ತಿದೆ. ಈ ಹುದ್ದೆ ಪಡೆಯಲು ಅವರು ಬಹಳ ಸಾಲ ಮಾಡಿದ್ದರಂತೆ. ಇದೀಗ ಒಂದು ವರ್ಷದೊಳಗೆ ಅವರನ್ನು ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಿದ್ದರಿಂದ ಅವರು ಖಿನ್ನತೆಗೆ ಜಾರಿದ್ದರು. ಈ ಕಾರಣದಿಂದ ಹೃದಯಾಘಾತವಾಗಿ ಮೃತಪಟ್ಟಿರಬಹುದು ಎಂಬ ಮಾತು ಕೇಳಿ ಬರುತ್ತಿದೆ.