ಫಿಲಿಪ್ಪಿನ್ಸ್‌ನಲ್ಲಿ ಭಾನುವಾರ ಪತನವಾದ ಸೇನಾ ವಿಮಾನದಲ್ಲಿ ಮೃತಪಟ್ಟವರ 50ಕ್ಕೆ ಏರಿದೆ. ಸುಲು ಪ್ರಾಂತ್ಯದ ಜುಲು ವಿಮಾನ ನಿಲ್ದಾಣದಲ್ಲಿ ರನ್‌ವೇಯಲ್ಲಿ ಇಳಿಯಲು ಸಾಧ್ಯವಾಗದೆ ಈ ವಿಮಾನವು ಅಪಘಾತಕ್ಕೀಡಾಗಿತ್ತು.
‘ಲಾಕ್‌ಹೀದ್ ಸಿ-130 ಹೆರ್ಕ್ಯೂಲೆಸ್’ ಸೇನಾ ವಿಮಾನದಲ್ಲಿ 96 ಯೋಧರು ಪ್ರಯಾಣಿಸುತ್ತಿದ್ದು. 49 ಯೋಧರನ್ನು ಪೊಲೀಸರು, ಅಗ್ನಿಶಾಮಕದ ದಳ ಹಾಗೂ ಸೇನಾ ಪಡೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ.

ಈ ಯೋಧರನ್ನು ಅಬು ಸಯ್ಯಫ್ ಉಗ್ರರ ವಿರುದ್ಧ ಹೋರಾಟಕ್ಕೆ ನಿಯೋಜಿಸಲು ಉದ್ದೇಶಿಸಲಾಗಿತ್ತು. ಹಾಗೂ ಇವರೆಲ್ಲೂ ಹೊಸದಾಗಿ ನೇಮಕಗೊಂಡು ತರಬೇತಿ ಪಡೆದಿದ್ದರು.

ಇನ್ನು ಇದೇ ವಿಮಾನ ನಿಲ್ದಾಣದಲ್ಲಿದ್ದ ಏಳು ಮಂದಿಗೆ ಡಿಕ್ಕಿ ಹೊಡೆದಿತ್ತು ಈ ಪೈಕಿ ಮೂವರು ಮೃತಪಟ್ಟಿದ್ದಾರೆ.

Discussion about this post