Monday, April 19, 2021

ನೇಗಿಲು ಹಿಡಿದ ದರ್ಶನ್ – ಕೃಷಿ ಕಾಯಕದ ರಾಯಭಾರಿ ಹುದ್ದೆ ಅಲಂಕರಿಸಿದ ಚಾಲೆಂಜಿಂಗ್ ಸ್ಟಾರ್

Must read

- Advertisement -
- Advertisement -

ಕೃಷಿ ಕಾಯಕದ ನೂತನ ರಾಯಭಾರಿಯಾಗಿ ನಟ ದರ್ಶನ್ ಇಂದು ಅಧಿಕೃತವಾಗಿ ನೇಮಕಗೊಂಡಿದ್ದಾರೆ.

ರಾಜ್ಯ ಕೃಷಿ ಇಲಾಖೆಯ ಯೋಜನೆಗಳನ್ನು, ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಚುರಪಡಿಸಲು ಹಾಗೂ ಕೃಷಿ ಬಗ್ಗೆ ನಾಡಿನ ಯುವಜನತೆಗೆ ಸ್ಫೂರ್ತಿ ನೀಡುವ ಕಾಯಕವನ್ನು ದರ್ಶನ್ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಅನ್ನದಾತರ ಪರವಾಗಿ ದರ್ಶನ್ ಅವರನ್ನು ಅಭಿನಂದಿಸಲಾಯಿತು.

ವಿಶೇಷ ಅಂದ್ರೆ ಯಾವುದೇ ಸಂಭಾವನೆಯಿಲ್ಲದೇ ಕೃಷಿ ಇಲಾಖೆಯ ರಾಯಭಾರಿ ಹುದ್ದೆಯನ್ನು ದರ್ಶನ್ ನಿಭಾಯಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ನಿರ್ದೇಶಕರಾದ ಶ್ರೀ ಶ್ರೀನಿವಾಸ್, ಮೇಲ್ಮನೆ ಸದಸ್ಯರಾದ ಶ್ರೀ ಸಂದೇಶ್ ನಾಗರಾಜ್, ಇಲಾಖೆಯ ಅಧಿಕಾರಿಗಳು, ಗಣ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -
- Advertisement -
- Advertisement -

Latest article