ಮಂಗಳೂರು ತಾಲೂಕಿನ ತಲಪಾಡಿ ಗ್ರಾಮ ಪಂಚಾಯತ್ ನ ಗ್ರಾಮ ಸಭೆ ಜುಲೈ ತಿಂಗಳ 17 ರಂದು ನಡೆದಿತ್ತು.ಈ ವೇಳೆ ಗ್ರಾಮಸಭೆಯಲ್ಲಿ ಪಿಡಿಓ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರ ಕಾರ್ಯವೈಖರಿಯನ್ನು ಖಂಡಿಸಿದ್ದ ನಾಗರಿಕರೊಬ್ಬರು ಅದ್ಭುತ ಭಾಷಣ ಮಾಡಿದ್ದರು.
ಅವರಾಡಿದ ಮಾತುಗಳು ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಂದ ಹಾಗೇ ಅಂದು ಅದ್ಭುತ ಮಾತುಗಳನ್ನು ಆಡಿದವರು ದಯಾನಂದ ಪಿಲಿಕೂರು.
ದಯಾನಂದ ಪಿಲಿಕೂರು ಅವರ ಪ್ರಾಸ ಬದ್ದ ಮಾತು ಕೇಳಿ ಅಧಿಕಾರಿಗಳು, ಜನಪ್ರತಿನಿಧಿಗಳು ತಬ್ಬಿಬ್ಬುಗೊಂಡರೆ ಜನ ಭೇಷ್ ಅಂದಿದ್ದರು.
ಇನ್ನು ದಯಾನಂದ ಪಿಲಿಕೂರು ಉಚ್ಚಿಲ ಸೋಮೇಶ್ವರದ ಯಕ್ಷಗಾನ ಕಲಾ ಗಂಗೋತ್ರಿಯ ಕಾರ್ಯದರ್ಶಿಯಾಗಿದ್ದು, ಒಳ್ಳೆ ಯಕ್ಷಗಾನ ವೇಷಧಾರಿಯೂ ಹೌದು. ಅನೇಕ ಕಡೆ ಯಕ್ಷಗಾನ ತರಗತಿಗಳನ್ನು ನಡೆಸುವ ಹಿರಿಮೆ ಇವರದ್ದು.
Discussion about this post