ಬೆಂಗಳೂರು : ಹಲವು ಕ್ರಾಂತಿಕಾರಿ ಹೆಜ್ಜೆಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ಹಲವು ತಪ್ಪು ಹೆಜ್ಜೆಗಳನ್ನು ಇಡಲಾರಂಭಿಸಿದೆ.
ಒಂದು ಕಡೆ ಪೆಟ್ರೋಲ್ ಡಿಸೇಲ್ ದರ ಏರಿಕೆ ಮತ್ತೊಂದು ಕಡೆ ಗ್ಯಾಸ್ ಸಬ್ಸಿಡಿ ರದ್ದು ಹೀಗೆ ಅನೇಕ ಕ್ರಮಗಳಿಂದ ದೇಶದ ಜನ ಮೋದಿ ಮೇಲೆ ಮುನಿಸಿಕೊಳ್ಳುವಂತಾಗಿದೆ.
ಕೇಂದ್ರ ಸರ್ಕಾರದ ಯಡವಟ್ಟುಗಳನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಪ್ರತಿಪಕ್ಷ ಸಂಪೂರ್ಣ ವಿಫಲವಾಗಿರುವುದು ಮತ್ತೊಂದು ದುರಂತ.
ಈ ನಡುವೆ ದಿನಕ್ಕೆ 8 ತಾಸಿನಂತೆ ವಾರದ 6 ದಿನದ ಬದಲು ದಿನಕ್ಕೆ 12 ತಾಸಿನಂತೆ ವಾರಕ್ಕೆ ನಾಲ್ಕು ದಿನ ಕೆಲಸ ಮಾಡಲು ಅವಕಾಶ ಕೊಡುವ ಕಾನೂನು ಜಾರಿಗೆ ಚಿಂತನೆ ನಡೆದಿದೆ.
ನಿಜಕ್ಕೂ ಇದು ಸಾಧ್ಯವಾಗುವ ಕಾರ್ಯವೇ ಅನ್ನುವುದು ಎಲ್ಲರ ಪ್ರಶ್ನೆ.ಬೆಳಗ್ಗೆ 10 ಗಂಟೆಗೆ ಕೆಲಸಕ್ಕೆ ಹೋದವರು ರಾತ್ರಿ 10 ಗಂಟೆ ತನಕ ದುಡಿದ್ರೆ ನಿಜಕ್ಕೂ ಗುಣಮಟ್ಟದ ಕೆಲಸ ನಿರ್ವಹಿಸಲು ಸಾಧ್ಯವೇ.
ಅಷ್ಟು ಮಾತ್ರವಲ್ಲದೆ ಸಾಫ್ಟ್ ವೇರ್ ನಂತಹ ಸಂಸ್ಥೆಗಳು ವಾರಕ್ಕೆ 5 ದಿನ ಕೆಲಸ ಎಂದು ಹೇಳುತ್ತಿವೆಯಾದರೂ, ಈಗ್ಲೂ ಟಾರ್ಗೆಟ್ ಹೆಸರಿನಲ್ಲಿ ಉದ್ಯೋಗಿಗಳನ್ನು ಕತ್ತೆಯಂತೆ ದುಡಿಸಿಕೊಳ್ಳುತ್ತಿದೆ. ಇನ್ನು ವಾರಕ್ಕೆ 4 ದಿನವಾದ್ರೆ ಉಳಿದ 3 ದಿನಗಳ ಕಾಲ ಉದ್ಯೋಗಿಗಳ ಕಥೆ ಹೇಗಿರಬಹುದು.
ಅದರಲ್ಲೂ ದಂಪತಿಗಳಿಬ್ಬರೂ ಕೆಲಸಕ್ಕೆ ಹೋಗುವವರಾಗಿದ್ರೆ ಮಗುವಿನ ಕಥೆಯೇನಾಗಬೇಕು, ಈ ಕಾನೂನು ಏನಿದ್ದರೂ ಬ್ಯಾಚುಲರ್ ಗಳಿಗೆ ಸರಿಯಾಗಿದೆ. ಹೊರತು ಫ್ಯಾಮಿಲಿ ಮಂದಿಗೆ ಸೂಕ್ತವಾಗಿಲ್ಲ.
ಅವೆಲ್ಲವನ್ನೂ ಸೈಡಿಗಿಟ್ಟು ನೋಡಿದರೂ, ಉದ್ಯೋಗಿಗಳ ಆರೋಗ್ಯಗ ಕಥೆಯೇನಾಗಬೇಕು.
Discussion about this post