ರಾಧಿಕಾ ರಾಜಕೀಯ ಬರೋ ಬಗ್ಗೆ ಮಾತೇ ಆಡಿಲ್ಲ…ಇದು NEWS18 ಕಟ್ಟಿದ ಕಟ್ಟು ಕಥೆ

ಮಗಳು ಒಪ್ಪಿದರೆ ರಾಜಕೀಯ ರಣರಂಗಕ್ಕೆ ಕಾಲಿಡಲು ಸೈ ಎಂದ ರಾಧಿಕಾ ಕುಮಾರಸ್ವಾಮಿ ಅನ್ನುವ ಹೆಡ್ ಲೈನ್ ಒಂದೆರೆಡು ದಿನಗಳಿಂದ ಓಡಾಡುತ್ತಿದೆ. ಕಾರಣವಿಲ್ಲದೆ ವಂಶ ಪಾರಂಪರ್ಯ ರಾಜಕೀಯದ ಬಗ್ಗೆಯೂ ಕಮೆಂಟ್ ಮಾಡಲಾಗುತ್ತಿದೆ.

ಅರೇ ರಾಧಿಕಾ ಕುಮಾರಸ್ವಾಮಿ ರಾಜಕೀಯಕ್ಕೆ ಬರ್ತಾರ ಅನ್ನುವ ಬಗ್ಗೆ ನಾವು ಕೂಡಾ ಸುದ್ದಿ ಮೂಲ ಹುಡುಕಿ ಹೊರಟೆವು.ಯಾಕೆಂದರೆ ಪತಿ ರಾಜಕೀಯದಲ್ಲಿದ್ದಾರೆ, ಮತ್ತೆ ರಾಜಕೀಯದ ಬಗ್ಗೆ ಚಿಂತನೆ ನಡೆಸಿದರೆ ದೊಡ್ಡದೊಂದು ದಂಗಲ್ ಆಗುತ್ತದೆ ಅನ್ನುವುದು ಅವರಿಗೂ ಗೊತ್ತಿದೆ. ಹೀಗಾಗಿ ಸಿನಿಮಾ ಸೇರಿದಂತೆ ಬೇರೆ ಉದ್ಯಮಗಳ ಬಗ್ಗೆ ಅವರ ಚಿತ್ತವಿದೆ ಹೊರತು ರಾಜಕೀಯದತ್ತ ಅವರ ಚಿತ್ತವಿಲ್ಲ.

ಹಾಗಾದರೆ  ರಾಧಿಕಾ ಕುಮಾರಸ್ವಾಮಿ  ಸುತ್ತ ರಾಜಕೀಯ ಸುದ್ದಿ ಸುತ್ತಿಕೊಂಡಿದ್ದು ಹೇಗೆ. ಅದ್ಯಾವುದೋ ಜ್ಯೂವೆಲ್ಲರಿ ಶೋ ಒಂದರ ರಾಯಭಾರಿಯಾಗಿರುವ ರಾಧಿಕಾ ಅವರನ್ನು NEWS18 ( ಈ ಹಿಂದಿನ ETV) ವರದಿಗಾರ್ತಿ ಮಾತನಾಡಿಸಿದ್ದಾರೆ. ಈ ವೇಳೆ ಮಗಳ ಬಗ್ಗೆಯೂ ಪ್ರಶ್ನೆ ಕೇಳಲಾಗಿದೆ.

ಮಗಳು ಶಮಿಕಾಳಿಗೆ ಯಾವುದು ಇಷ್ಟವೋ ಅದನ್ನೇ ನಾನು ಮಾಡಿಸುತ್ತೇನೆ. ಅವಳ ಆಸೆಯನ್ನು ನೆರವೇರಿಸುತ್ತೇನೆ ಎಂದಿದ್ದಾರೆ. ಅವಳು ಇಷ್ಟ ಪಟ್ಟ ಕ್ಷೇತ್ರದಲ್ಲಿ ಆಕೆಯನ್ನು ಬೆಳೆಸುತ್ತೇನೆ. ರಾಜಕೀಯ, ಸಿನಿಮಾ ಅದ್ಯಾವ ಕ್ಷೇತವೂ ಇರಬೇಕು ಅಂದಿದ್ದಾರೆ. ಹೊರತು ರಾಜಕೀಯವನ್ನು ಒತ್ತಿ ಹೇಳಿಲ್ಲ.

ಮಗಳಿಗೆ ನೃತ್ಯದಲ್ಲಿ ಆಸಕ್ತಿ ಇದೆ. ಆದರೆ ಮುಂದೆ ಬೆಳೆದ ನಂತರ ಅವಳು ಸಿನಿಮಾ ರಂಗಕ್ಕೆ ಬರುವ ಬಗ್ಗೆ ಹೇಳಿದರೆ ಅವಳಿಗಾಗಿ ಸಿನಿಮಾವನ್ನು ನಿರ್ಮಿಸುತ್ತೇನೆ ಎಂದಿದ್ದಾರೆ. ಆದರೆ ಶಮಿಕಾ ಭವಿಷ್ಯದ ಬಗ್ಗೆ ಚಿಂತಿಸುವ ಕಾಲ ಇದಲ್ಲ. ಯಾಕೆಂದರೆ ಆಕೆ ಇನ್ನೂ ಪುಟ್ಟ ಹುಡುಗಿ. ಆದರೆ ಟಿವಿ ಮಂದಿಗೆ TRP ಮುಖ್ಯ ತಾನೇ..

%d bloggers like this: