Thursday, March 4, 2021

ಫೆ.05ಕ್ಕೆ ದರ್ಶನ್‌- ಸುದೀಪ್‌ ಮುಖಾಮುಖಿ ಆಗೋದು ಖಚಿತ – ಮಾಜಿ ಗೆಳೆಯರ ಫೈಟ್ ಮತ್ತೆ ಶುರು

Must read

- Advertisement -
- Advertisement -

ಬೆಂಗಳೂರು : ಒಂದು ಕಾಲದ ಆತ್ಮೀಯ ಗೆಳೆಯರು ದೂರವಾಗಿದ್ದು ಹಳೆಯ ಸುದ್ದಿ. ಇದೀಗ ಮಾಜಿ ಗೆಳೆಯರ ಕುರಿತಂತೆ ಹೊಸ ಸುದ್ದಿಯೊಂದು ಬಂದಿದೆ.

ಫೆ.05 ರಂದು ಇವರಿಬ್ಬರ ಸಿನಿಮಾಗಳು ಥಿಯೇಟರ್ ಲಗ್ಗೆ ಇಡಲಿದೆ. ಅರೇ ರಾಬರ್ಟ್‌ ಸಿನಿಮಾ ಮಾರ್ಚ್‌ 11ಕ್ಕೆ ಬಿಡುಗಡೆಯಾಗಲಿದೆ.

ಕಿಚ್ಚ ಸುದೀಪ್‌ ನಟಿಸಿರುವ ಕೋಟಿಗೊಬ್ಬ-3 ಬಿಡುಗಡೆ ಯಾವಾಗ ಅನ್ನೋದೆ ಗೊತ್ತಿಲ್ಲ, ಹಾಗಿದ್ದ ಮೇಲೆ ಇವರಿಬ್ಬರು ಮುಖಾ ಮುಖಿಯಾಗೋದು ಹೇಗೆ ಅನ್ನೋದು ನಿಮ್ಮ ಪ್ರಶ್ನೆ.

ನಿಮ್ಮ ಪ್ರಶ್ನೆಯೇನೋ ನಿಜ, ಆದರೆ ಅವರಿಬ್ಬರೂ ಮುಖಾಮುಖಿಯಾಗೋದು ಕೂಡಾ ನಿಜ. ಹೇಗೆ ಅಂದ್ರೆ ಫೆ.05 ರಂದು ಪ್ರಜ್ವಲ್‌ ದೇವರಾಜ್‌ ಅಭಿನಯದ ಇನ್ಸ್ ಪೆಕ್ಟರ್‌ ವಿಕ್ರಂ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ದರ್ಶನ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.

ಇನ್ನು ಅದೇ ದಿವಸ ಬಿಗ್ ಬಾಸ್ ಖ್ಯಾತಿಯ ಚಂದನ್‌ ಆಚಾರ್‌ ಅಭಿನಯದ ಮಂಗಳವಾರ ರಜಾದಿನ ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ.

ಈ ಮೂಲಕ ಸುದೀಪ್ ಮತ್ತು ದರ್ಶನ್ ಮುಖಾಮುಖಿಯಾಗಲಿದ್ದಾರೆ.

- Advertisement -
- Advertisement -
- Advertisement -

Latest article