ರಾಧಿಕಾ ಕುಮಾರಸ್ವಾಮಿ ಅಭಿನಯದ ದಮಯಂತಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಅದ್ಯಾವ ತೆಲುಗಿನ ಭಾಗಮತಿ, ಆರುಂಧತಿ ಪಾತ್ರಗಳಿಗೆ ಕಡಿಮೆ ಇಲ್ಲಂದತೆ ರಾಧಿಕಾ ಕುಮಾರಸ್ವಾಮಿ ನಟಿಸಿದ್ದಾರೆ.
ರಾಧಿಕಾರ ಕುಮಾರಸ್ವಾಮಿ ಹೊಡೆಯೋ ಡೈಲಾಗ್ ನೋಡಿದ್ರೆ ಚಿತ್ರ ಸದ್ದು ಮಾಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ಫಸ್ಟ್ ಟೀಸರ್ ನೋಡ್ತಾ ಹೋದ್ರೆ ದೇವರ ರೂಪದ ದೆವ್ವದ ಕಹಾನಿ ಇದೊಂದು ಅನ್ನುವ ಸುಳಿವು ನೀಡುತ್ತಿದೆ.
ಒಟ್ಟು ಮೂರು ಶೇಡ್ ಗಳಲ್ಲಿ ರಾಧಿಕಾ ಕುಮಾರಸ್ವಾಮಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈವರೆಗೆ ಅಭಿನಯಿಸಿದ್ದ ಪಾತ್ರಕ್ಕಿಂತ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು ದಮಯಂತಿಯನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೊಳಿಸಲು ಚಿತ್ರದ ನಿರ್ಮಾಪಕ, ನಿರ್ದೇಶಕ, ನವರಸನ್ ನಿರ್ಧರಿಸಿದ್ದಾರೆ.
ಈ ಸಂಬಂಧ ಈಗಾಗಲೇ ಕನ್ನಡ, ತೆಲುಗು, ತಮಿಳು, ಮಲಯಾಳಂ ಟೀಸರ್ ಬಿಡುಗಡೆಯಾಗಿದ್ದು ಹಿಂದಿಯ ಟೀಸರ್ ಬಿಡುಗಡೆಗೆ ಸಿದ್ದವಾಗುತ್ತಿದೆ.
ಇನ್ನು ದಮಯಂತಿ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಬೇಕಾಗಿತ್ತು. ನಿರ್ದೇಶಕ ನವರಸನ್ ಅನುಷ್ಕಾ ಅವರಿಗೆ ಕಥೆಯನ್ನು ಕೂಡಾ ಹೇಳಿದ್ದರು. ಆದರೆ ಮತ್ತೊಂದು ಚಿತ್ರಕ್ಕೆ ಸಿಕ್ಕಾಪಟ್ಟೆ ದಪ್ಪವಾಗಿದ್ದ ಅನುಷ್ಕಾ ಶೆಟ್ಟಿ ಎರಡು ವರ್ಷಗಳ ನಂತರ ಪ್ರಾಜೆಕ್ಟ್ ಕೈಗೆತ್ತಿಕೊಂಡರೆ ನಟಿಸುವುದಾಗಿ ಹೇಳಿದ್ದರು. ಆದರೆ ಅಷ್ಟೊಂದು ವಿಳಂಭ ಸರಿಯಲ್ಲ ಅನ್ನುವ ಕಾರಣಕ್ಕೆ ರಾಧಿಕಾ ಅವರಿಗೆ ನಿರ್ದೇಶಕರು ಆಫರ್ ಕೊಟ್ಟಿದ್ದರು. ಹೀಗಾಗಿ ಕರಾವಳಿಯ ಕುವರಿ ಅನುಷ್ಕಾ ಶೆಟ್ಟಿಯ ಕೈ ತಪ್ಪಿದ್ದ ದಮಯಂತಿ ಪಾತ್ರ ಕರಾವಳಿಯ ಮತ್ತೊಬ್ಬಳು ಚೆಲುವೆ ರಾಧಿಕಾ ಕುಮಾರ ಸ್ವಾಮಿ ಪಾಲಾಯ್ತು.
Discussion about this post