ಮೇಷ
ನಿಧಾನವಾಗಿ ಕಾರ್ಯಸಿದ್ಧಿಯಾಗುವದು. ಮಕ್ಕಳಲ್ಲಿ ಹೊಸಹುರುಪು ಕಂಡು ಬರುವದು. ವ್ಯಾಪಾರಿಗಳಿಗೆ ಮಧ್ಯಮಫಲ. ಸೀಮಿತ ಆದಾಯ, ಸೀಮಿತ ಕಾರ್ಯಗಳಿಂದ ಬೇಸರ ಇರುವದು. ಮಂದಗತಿಯ ಕೆಲಸಗಳು ನಿರಾಸೆ ಮೂಡಿಸುವ ಸಾಧ್ಯತೆ ಇದೆ.
ಶುಭ ಸಂಖ್ಯೆ : 7
ವೃಷಭ
ನಿಮ್ಮ ಶತ್ರುಗಳು ತಮ್ಮ ಕೃತ್ಯಗಳಿಂದ ತಾವಾಗಿಯೇ ಮಣಿಯುವರು. ಶತ್ರುದೋಷ ಪರಿಹಾರವಾಗುವುದು.ಚೋರ ಭಯ, ಅಗ್ನಿ ಭಯ ಮುಂತಾದ ಭಯ ನಿವಾರಣೆಯಾಗುವುದು. ಪುತ್ರಸೌಖ್ಯ, ಮನೆಯಲ್ಲಿ ಸಂತೋಷವಿರುವದು.
ಶುಭ ಸಂಖ್ಯೆ : 2
ಮಿಥುನ
ಶುಭ ಕರ್ಮ ಸಂಪ್ರಾಪ್ತಿಯಿದ್ದು, ಗುರುವರ್ಗ ಸಂತೋಷ, ಸಂಸಾರ ಸುಖ. ನೂತನ ಮಿತ್ರಭೇಟಿ, ಅರ್ಥಾರ್ಜನೆಯು ಉತ್ತಮವಿದೆ. ಆದರೂ ಗೃಹಕಲಹ, ಬಂಧು ಜನರಲ್ಲಿ ಅಸಮಾಧಾನ ಕಂಡುಬರುವದು.
ಶುಭ ಸಂಖ್ಯೆ : 1
ಕರ್ಕ
ಪ್ರತಿಯೊಂದು ಕೆಲಸದಲ್ಲಿಯೂ ವಿಳಂಬ ಉಂಟಾಗುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳು ಹೆಚ್ಚಾಗುವವು. ವೃಥಾ ತಿರುಗಾಟ ಇರುವದು ಆದರೂ ಕೀರ್ತಿದಾಯಕ ಫಲವಿದೆ.
ಶುಭ ಸಂಖ್ಯೆ : 9
ಸಿಂಹ
ಜಿಪುಣತನದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಸಹೋದರ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದೆ.ಪರಸ್ಪರ ದೋಷಾರೋಪ ಬೇಡ.ಮಿತ್ರರ ಸಹಾಯ ದೊರೆಯುವದು.
ಶುಭ ಸಂಖ್ಯೆ : 5
ಕನ್ಯಾ
ಯುವಕರಿಗೆ ನವಿರಾದ ಮಾತುಗಳಿಂದ ಸಂಗಾತಿಗಳನ್ನು ಗೆಲ್ಲುವ ಛಾತಿ. ಆಕರ್ಷಕ ನಿರ್ಧಾರಗಳಿಂದ ಮನ್ನಣೆ. ಯಜಮಾನನಿಗೆ ಬಲವಂತದಲ್ಲಿ ಜವಾಬ್ದಾರಿ ನಿರ್ವಹಣೆ. ವೈಯಕ್ತಿಕ ಬದುಕಿನತ್ತ ಗಮನಹರಿಸಲು ವ್ಯವಧಾನ.
ಶುಭ ಸಂಖ್ಯೆ : 8
ತುಲಾ
ನಿರೀಕ್ಷೆಗೆ ತಕ್ಕಂತೆ ಕೆಲಸ ಆಗದೇ ಮಾನಸಿಕ ಅಶಾಂತಿ ಕಂಡುಬರುವದು. ವ್ಯವಹಾರಗಳಲ್ಲಿ ಹಾನಿಯಾಗುವ ಭಯ ಇರುವದು. ಪರಿಣಿತರ ಅಥವಾ ಹಿರಿಯರ ಸಲಹೆಯಂತೆ ಮುಂದುವರೆಯಿರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲವಿದೆ.
ಶುಭ ಸಂಖ್ಯೆ : 3
ವೃಶ್ಚಿಕ
ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಕೊಟ್ಟಸಾಲ ಮರುಪಾವತಿಯಾಗುವದು.
ಶುಭ ಸಂಖ್ಯೆ : 2
ಧನು
ವ್ಯವಹಾರದಲ್ಲಿ ಹಾನಿ ಕಂಡುಬರುವದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವದು.
ಶುಭ ಸಂಖ್ಯೆ : 7
ಮಕರ
ದೂರ ಪ್ರಯಾಣದ ಅವಶ್ಯಕತೆ ಕಂಡುಬರುವದು. ಗುಪ್ತ ಧನ, ಲಾಟರಿ, ವ್ಯಾಪಾರದಲ್ಲಿ ಬೆಲೆಗಳ ಹೆಚ್ಚಳದಿಂದ ಲಾಭ. ಅನೇಕ ರೀತಿಯ ಸೌಭಾಗ್ಯಗಳು ದೊರೆಯುವವು.ಅನಾವಶ್ಯಕ ಮಾತು, ಸಿಟ್ಟು, ಅಹಂಕಾರದಿಂದ ಹಾಗೂ ಅಗ್ನಿ, ವಿದ್ಯುತ್, ಮಶಿನರಿಗಳಿಂದ ತೊಂದರೆ ಸಾಧ್ಯತೆ
ಶುಭ ಸಂಖ್ಯೆ : 5

ಕುಂಭ
ಅಗೌರವ ಆಗುವ ಸಂಭವ ಇರುವದರಿಂದ ಸೂಕ್ಷ್ಮವಾಗಿರುವದು ಉತ್ತಮ. ಅನಪೇಕ್ಷಿತರಿಗೆ ಉಪಕಾರ ಮಾಡುವದು ಸರಿಯಲ್ಲ. ಮಕ್ಕಳ ಚಿಂತೆ ಇರುವದು. ವಧುವರರಿಗೆ ಮದುವೆಯ ಯೋಗ ಕೂಡಿಬರುವದು.
ಶುಭ ಸಂಖ್ಯೆ : 1
ಮೀನ
ಸರಳತೆ ದುರುಪಯೋಗವಾಗದಂತೆ ನೋಡಿಕೊಳ್ಳಿ. ಉದ್ಯೋಗದಲ್ಲಿಯ ಕುಂದು ಕೊರತೆಗಳನ್ನು ನಿಭಾಯಿಸುವಿರಿ. ಮಹತ್ವದ ಅಧಿಕಾರ ದೊರೆಯುವ ಯೋಗವಿದೆ. ವ್ಯಾಪಾರದಲ್ಲಿ ಹೆಚ್ಚಿನ ಹಣ ಹೂಡಿಕೆ ಈಗ ಬೇಡ.
ಶುಭ ಸಂಖ್ಯೆ : 4
#ಡಾ.ಬಸವರಾಜ್ ಗುರೂಜಿ
ವೈದಿಕ ಜ್ಯೋತಿಷಿ
9972848937
Discussion about this post