ಹೈದರಬಾದ್ : ಇಲ್ಲಿನ ಶ್ರೀನಗರ ಕಾಲೋನಿಯ ವಿವೇಕ್ ವಿರೇಂದ್ರ ಸಿಂಗ್ ( 45) 30 ವರ್ಷಗಳ ಹಿಂದೆ ವಿವಾಹವಾಗಿದ್ದ.
ಇತ್ತೀಚಿನ ವರ್ಷಗಳ ವರೆಗೂ ಚೆನ್ನಾಗಿದ್ದ ಸಂಸಾರದಲ್ಲಿ ಸಿಂಗ್ ಗೆ ಅದ್ಯಾಕೋ ಬೇಸರ ಬಂದಿತ್ತು.
ಹೀಗಾಗಿ ಮತ್ತೊಬ್ಬ ಮಹಿಳೆಯೊಂದಿಗೆ ಆತ್ಮೀಯವಾಗಿದ್ದಾನೆ. ಮಹಿಳೆಯೊಂದಿಗಿನ ಆತ್ಮೀಯತೆ ಪ್ರೀತಿಗೆ ತಿರುಗಿದೆ.
ದಿನ ಕಳೆದಂತೆ ಇಬ್ಬರ ಆಟಗಳು ಹೆಚ್ಚಾಗಿದೆ. ಒಂದು ದಿನ ಆ ಮಹಿಳೆ ಮದುವೆಯಾಗುವಂತೆ ವಿರೇಂದ್ರ ಸಿಂಗ್ ಮೇಲೆ ಒತ್ತಡ ಹೇರಿದ್ದಾಳೆ.
ಒತ್ತಡಕ್ಕೆ ಸಿಲುಕಿದ ಸಿಂಗ್ ಡಿವೋರ್ಸ್ ಕೊಡುವಂತೆ ಪತ್ನಿ ಮೇಲೆ ಒತ್ತಡ ಹೇರಿದ್ದಾನೆ. ಆದರೆ ಆಕೆ ಅದಕ್ಕೆ ಜಗ್ಗಲಿಲ್ಲ. ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಅಲ್ಲೂ ನಾನು ಡಿವೋರ್ಸ್ ಕೊಡೋದಿಲ್ಲ ಎಂದು ವಿವೇಕ್ ವಿರೇಂದ್ರ ಸಿಂಗ್ ಪತ್ನಿ ಕಡ್ಡಿ ಮುರಿದಂತೆ ಹೇಳಿದ್ದಾಳೆ.
ಇದರಿಂದ ಸಂಕಷ್ಟಕ್ಕೆ ಸಿಲುಕಿದ ವಿರೇಂದ್ರ ಸಿಂಗ್ ಪತ್ನಿಗೆ ಕಿರುಕುಳ ನೀಡಲಾರಂಭಿಸಿದ್ದಾನೆ. ಆ ಕಾರಣಕ್ಕಾದರೂ ಪತ್ನಿ ಡಿವೋರ್ಸ್ ಕೊಡಲಿ ಅನ್ನುವುದು ಆತನ ಉದ್ದೇಶ. ಕಿರುಕುಳ ಸಂಬಂಧ ಈಗಾಗಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಡುವೆ ಸಿಂಗ್ ಪತ್ನಿ ಹೋದ ಕಡೆ ಬಂದ ಅಪರಿಚಿತ ಮುಖಗಳು ಹಿಂಬಾಲಿಸುತ್ತಿರುವುದು ಗಮನಕ್ಕೆ ಬಂದಿದೆ.
ತಾನು ಎಲ್ಲಿದ್ದೇನೆ ಅನ್ನುವುದು ಇವರಿಗೆ ಹೇಗೆ ಗೊತ್ತಾಗುತ್ತಿದೆ ಅನ್ನುವ ಅನುಮಾನ ಆಕೆಗೆ ಕಾಡಲಾರಂಭಿಸಿದೆ.
ಈ ವೇಳೆ ಅನುಮಾನ ಬಂದು ಸ್ಕೂಟಿ ಪರಿಶೀಲನೆ ಮಾಡಿದ್ರೆ ಟ್ರ್ಯಾಕರ್ ಅಳವಡಿಸಿರೋದು ಗೊತ್ತಾಗಿದೆ.
ಈ ಟ್ರ್ಯಾಕರ್ ಮೂಲಕವೇ ಪತ್ನಿಯ ಚಲನವನಗಳ ಮೇಲೆ ಸಿಂಗ್ ಕಣ್ಣಿಟ್ಟಿದ್ದ. ಇದೀಗ ಈ ಸಂಬಂಧ ಮತ್ತೊಂದು ಪ್ರಕರಣ ದಾಖಲಾಗಿದೆ
Discussion about this post