- Advertisement -
- Advertisement -
ಲಂಡನ್ : ಅಂಡರ್-18 ಕ್ರಿಕೆಟ್ನಲ್ಲಿ ಬೌನ್ಸರ್ ನಿಷೇಧ ಮಾಡುವಂತೆ ಇದೀಗ ಒತ್ತಡ ಹೆಚ್ಚಲಾರಂಭಿಸಿದೆ. ಈ ಸಂಬಂಧ ಅಂತರ ರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮತ್ತು ಲಂಡನ್ ಸರ್ಕಾರ ತಜ್ಞರ ಸಮಿತಿಯೊಂದು ಮನವಿ ಮಾಡಿದೆ.
ಅಂತರರಾಷ್ಟ್ರೀಯ ಕನ್ಕಷನ್ ತಜ್ಞ ಮತ್ತು ಹೆಡ್ ಇಂಜುರಿ ರೀಸರ್ಜ್ ಫೌಂಡೇಷನ್ ನ ವೈದ್ಯಕೀಯ ನಿರ್ದೇಶಕ ಮೈಕಲ್ ಟರ್ನರ್ ಈ ಸಂಬಂಧ ವರದಿಯೊಂದನ್ನು ಕೊಟ್ಟಿದ್ದು, ಅಂಡರ್ 18 ಕ್ರಿಕೆಟ್ ಆಡುವ ಹುಡುಗರ ಮೆದುಳು ಬೆಳವಣಿಗೆಯ ಸ್ಥಿತಿಯಲ್ಲಿರುತ್ತದೆ. ಹೀಗಾಗಿ ತಲೆಗೆ ಪೆಟ್ಟು ಬೀಳದಂತೆ ನೋಡಿಕೊಳ್ಳಬೇಕು.
ಆಟದ ಸಂದರ್ಭದಲ್ಲಿ ತಲೆಯ ರಕ್ಷಣೆ ಸಲುವಾಗಿ ಹೆಲ್ಮೆಟ್ ಧರಿಸಲಾಗುತ್ತದೆ. ಹಾಗಿದ್ದರೂ ಬೌನ್ಸರ್ನಿಂದ ತಲೆಗೆ ಬೀಳುವ ಪೆಟ್ಟು ಬಲವಾಗಿರುತ್ತೆ.
ಯುವಕರ ತಲೆಗೆ ಏಟು ಬಿದ್ದರೆ ಮಿದುಳಿಗೆ ಹೆಚ್ಚು ಸಮಸ್ಯೆಯಾಗುತ್ತದೆ. ಈ ಕಾರಣದಿಂದ ಕ್ರೀಡೆಯ ನಿಯಮಗಳನ್ನು ಬದಲಾಯಿಸಿ ಅಪಾಯ ತಡೆಗಟ್ಟುವುದು ಉತ್ತಮ ಅಂದಿದ್ದಾರೆ.
- Advertisement -