ಬೆಂಗಳೂರು : ಜನರ ಉಡಾಫೆ ಹಾಗೂ ಸರ್ಕಾರದ ನಿರ್ಲಕ್ಷ್ಯದ ನಡುವೆ ರಾಜ್ಯದಲ್ಲಿ ಕೊರೋನಾ ಸೋಂಕಿನ 2ನೇ ಅಲೆ ಬಲವಾಗತೊಡಗಿದೆ.
ಕೇರಳ ಮಾಡಿದ ತಪ್ಪು ಕಣ್ಣ ಮುಂದಿದ್ದರೂ, ಕರ್ನಾಟಕ ಎಚ್ಚೆತ್ತುಕೊಳ್ಳದ ಕಾರಣದಿಂದ ಇದೀಗ ದೊಡ್ಡ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಅದರಲ್ಲೂ ಕೊರೋನಾ ಸೋಂಕಿನ ಎರಡನೇ ಅಲೆ ಮಕ್ಕಳಿಗೆ ಆತಂಕಕಾರಿಯಾಗುವ ಲಕ್ಷಣ ಗೋಚರಿಸತೊಡಗಿದೆ.
ಆರೋಗ್ಯ ಇಲಾಖೆಯ ಮಾಹಿತ ಪ್ರಕಾರ ಒಂದರಿಂದ 10 ವರ್ಷ ವಯಸ್ಸಿನ ಮಕ್ಕಳಲ್ಲೇ ಅತೀ ಹೆಚ್ಚು ಕೊರೋನಾ ಸೋಂಕಿನ ಪ್ರಮಾಣ ಕಂಡು ಬಂದಿದೆ.
ಕಳೆದ ಎರಡು ವಾರಗಳ ಅವಧಿಯಲ್ಲಿ ರಾಜ್ಯದ 267 ಮಕ್ಕಳಿಗೆ ಕೊರೋನಾ ತಗುಲಿದೆ.
ಬೆಂಗಳೂರಿನಲ್ಲಿ ಮಾರ್ಚ್ 14 ರಿಂದ 21 ರವರೆಗೆ ಅಂದ್ರೆ ಒಂದೇ ವಾರದಲ್ಲಿ 160 ಮಕ್ಕಳಿಗೆ ಕೊರೋನಾ ಸೋಂಕು ತಗುಲಿದೆ. ಗಮನಾರ್ಹ ಅಂಶ ಅಂದ್ರೆ ಶನಿವಾರ ಭಾನುವಾರ ಅತೀ ಹೆಚ್ಚು ಕೊರೋನಾ ಸೋಂಕಿತ ಮಕ್ಕಳು ಪತ್ತೆಯಾಗುತ್ತಿದ್ದಾರೆ.
ಮಕ್ಕಳು ಕೊರೋನಾ ಸೋಂಕಿಗೆ ತುತ್ತಾಗುತ್ತಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಮಕ್ಕಳಿಂದ ಅತ್ಯಂತ ಹೆಚ್ಚು ಮಂದಿಗೆ ಕೊರೋನಾ ಸೋಂಕು ಹರಡು ಸಾಧ್ಯತೆಗಳಿದೆ. ಅವರನ್ನು ಐಸೋಲೋಷನ್, ಹೋಮ್ ಕ್ವಾರಂಟೈನ್ ಮಾಡೋದು ಸಿಕ್ಕಾಪಟ್ಟೆ ಕಷ್ಟದ ಕೆಲಸ. ಜೊತೆಗೆ ಮಕ್ಕಳಿರುವ ಮನೆಯಲ್ಲಿ ಹಿರಿಯರಿದ್ದರೆ ಕಥೆ ಹೇಳುವುದೇ ಬೇಡ.
ಹಾಗಂತ ಎರಡನೇ ಆಲೆ ಬಂದೇ ಬಿಡ್ತು ಎಂದು ಮುಂದೇನು ಎಂದು ಕೈ ಚೆಲ್ಲಿ ಕೂರಬೇಕಾಗಿಲ್ಲ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿದರೆ ಕೊರೋನಾ ಗೆಲ್ಲುವ ಎಲ್ಲಾ ಅವಕಾಶಗಳಿದೆ.
Discussion about this post