ನವದೆಹಲಿ : ಎರಡನೇ ಹಂತದ ಕೊರೋನಾ ಲಸಿಕೆ ವಿತರಣೆ ಪ್ರಾರಂಭವಾಗಿರುವ ಬೆನ್ನಲ್ಲೇ , ಮುಂದಿನ ಹಂತದ ಲಸಿಕೆ ಕಾರ್ಯಕ್ಕೆ ಕೇಂದ್ರ ಆರೋಗ್ಯ ಇಲಾಖೆ ಸಿದ್ದತೆ ನಡೆಸಿದೆ.
ಈ ಬಗ್ಗೆ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಮುಂದಿನ 2-3 ವಾರಗಳಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ವಿತರಣೆ ಪ್ರಾರಂಭವಾಗಲಿದೆ ಅಂದಿದ್ದಾರೆ.
ಈ ನಡುವೆ ಕೊರೋನಾ ವಿರುದ್ಧದ ಸಮರದಲ್ಲಿ ಭಾರತ ವಿಶ್ವಗುರುವಾಗುವ ಎಲ್ಲಾ ಲಕ್ಷಣಗಳಿದ್ದು, ಕೊರೋನಾ ಸೋಲಿಸುವ ನಿಟ್ಟಿನಲ್ಲಿ ಇನ್ನೂ 18 ರಿಂದ 19 ಲಸಿಕೆಗಳು ಭಾರತದಸ್ಸಿ ಲಭ್ಯವಾಗಲಿದೆಯಂತೆ.
ಈ ಬಗ್ಗೆಯೂ ಮಾಹಿತಿ ಕೊಟ್ಟಿರುವ ಡಾ. ಹರ್ಷವರ್ಧನ್, ಭಾರತದಲ್ಲಿ 18 ರಿಂದ 19 ಲಸಿಕೆಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿದ್ದು, ಈಗಾಗಲೇ ಅವುಗಳು ವಿವಿಧ ಹಂತದ ಪರೀಕ್ಷೆಗಳನ್ನು ಎದುರಿಸುತ್ತಿವೆ ಎಂದರು.
ಇನ್ನು ಭಾರತ 25ಕ್ಕೂ ಅಧಿಕ ದೇಶಗಳಿಗೆ ಲಸಿಕೆಗಳನ್ನು ಪೂರೈಸಲಿದ್ದು ಇದಕ್ಕೂ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
Discussion about this post