ಬೆಂಗಳೂರು : ಚೈನಾ ವೈರಸ್ ಸೋಲಿಸುವ ನಿಟ್ಟಿನಲ್ಲಿ ಭಾರತ ಕೈಗೊಂಡಿರುವ ಲಸಿಕಾ ಯಜ್ಞ ಎರಡನೇ ಹಂತಕ್ಕೆ ಕಾಲಿಟ್ಟಿದೆ.
ಕೊರೋನಾ ವಾರಿಯರ್ಸ್ ಗಳಿಗೆ ಎರಡನೇ ಡೋಸ್ ಹಾಕೋ ಕಾರ್ಯಕ್ರಮ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ.
ಇದೀಗ ಸಾರ್ವಜನಿಕರಿಗೆ ಲಸಿಕೆ ಹಂಚಿಕೆ ಕಾರ್ಯ ಮಾರ್ಚ್ 1 ರಿಂದ ಪ್ರಾರಂಭಗೊಳ್ಳಲಿದೆ.
ಇಲ್ಲಿಯವರೆಗೆ ಉಚಿತವಾಗಿ ಲಸಿಕೆ ಹಂಚುತ್ತಿದ್ದ ಕೇಂದ್ರ ಸರ್ಕಾರ, ಪ್ರತೀ ಡೋಸ್ ಗೆ 250 ರೂಪಾಯಿ ಫಿಕ್ಸ್ ಮಾಡಿದೆ. ಅಂದ್ರೆ ಎರಡು ಡೋಸ್ ಗಳಿಗೆ 500 ರೂಪಾಯಿ ಪಾವತಿಸಬೇಕಾಗುತ್ತದೆ.
ಮೂಲಗಳ ಪ್ರಕಾರ ಲಸಿಕೆ ದರ 150 ರೂ ಇದ್ದು 100 ರೂ ಸೇವಾ ಶುಲ್ಕ ಸೇರಿ ಒಟ್ಟು 250 ರೂಗಳನ್ನು ದರವಾಗಿ ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಈ ದರ ಸರ್ಕಾರದ ಮುಂದಿನ ಆದೇಶದವರೆಗೂ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿದೆ.
ಹಾಗಾದ್ರೆ ಬಡವರು ಏನು ಮಾಡಬೇಕು ಅನ್ನುವ ಪ್ರಶ್ನೆ ಖಂಡಿತಾ ಉದ್ಭವಿಸುತ್ತದೆ. ಹಾಗಂತ ಉಚಿತವಾಗಿ ಲಸಿಕೆ ಹಂಚುವ ಕಾರ್ಯವನ್ನು ಕೇಂದ್ರ ಸರ್ಕಾರ ನಿಲ್ಲಿಸಿದೆ.
ಯಾರೆಲ್ಲಾ ಸರ್ಕಾರಿ ಆರೋಗ್ಯ ಕೇಂದ್ರ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಬಯಸುತ್ತಾರೋ ಅವರಿಗೆಲ್ಲಾ ಉಚಿತವಾಗಿ ಲಸಿಕೆ ಸಿಗಲಿದೆ.
ಯಾರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯುತ್ತಾರೋ ಅವರು ಪ್ರತೀ ಡೋಸ್ ಗೆ 250 ರೂಪಾಯಿ ಪಾವತಿಸಬೇಕಾಗಿದೆ.
ಎರಡನೇ ಹಂತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಇತರೆ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಲಸಿಕೆ ಹಾಕಲು ಸಿದ್ಧತೆ ನಡೆಸಿದೆ.
ಈ ಮೂಲಕ ದೇಶದ ಸುಮಾರು 27 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡುವ, ಜಗತ್ತಿನ ಅತಿ ದೊಡ್ಡ ಲಸಿಕಾ ಅಭಿಯಾನ ಭಾರತದಲ್ಲಿ ಪ್ರಾರಂಭವಾಗಲಿದೆ.
ಇನ್ನು ಲಸಿಕೆ ಪಡೆಯಲು ಬಯಸುವವರು ಆರೋಗ್ಯ ಸೇತು ಅಥವಾ ಕೋವಿನ್ app ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಇನ್ನು ಕೊರೋನಾ ಲಸಿಕೆ ವಿತರಣೆ ಸಲುವಾಗಿ ಆಯಾ ರಾಜ್ಯ ಸರ್ಕಾರಗಳು ತಮ್ಮದೇ ರೀತಿಯ ಬೇರೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಈ ನಿರ್ಧಾರದ ಮೂಲಕ ಮೋದಿ ಸರ್ಕಾರ ಜಾಣತನದ ಹೆಜ್ಜೆ ಇಟ್ಟಿದೆ. ಈ ಹಿಂದೆ ಬಿಹಾರ ಚುನಾವಣೆ ಸಂದರ್ಭದಲ್ಲಿ, ಬಿಹಾರದಲ್ಲಿ ಬಿಜೆಪಿ ಗೆದ್ದರೆ ಉಚಿತ ಲಸಿಕೆ ಎಂದು ಹೇಳಿತ್ತು.
ಅದು ವಿವಾದಕ್ಕೂ ಕಾರಣವಾಗಿತ್ತು. ಇದೀಗ ಉಚಿತ ಲಸಿಕೆಯನ್ನು ಘೋಷಿಸುವ ಮೂಲಕ ವಿವಾದ ಮುಕ್ತವಾಗುವತ್ತ ಹೆಜ್ಜೆ ಇರಿಸಿದೆ.
Discussion about this post