ಬೆಂಗಳೂರು : ಮೊದಲ ಅಲೆ ಮುಕ್ತಾಯವಾದ ಒಂದಿಷ್ಟು ತಿಂಗಳ ಬಳಿಕ ಎರಡನೆ ಅಲೆ ಬಂದಿತ್ತು. ಆದರೆ ಎರಡನೆ ಅಲೆ ಅಂತ್ಯವಾಗುವ ಮುನ್ನವೇ ದೇಶದಲ್ಲಿ ಮೂರನೇ ಅಲೆ ಪ್ರಾರಂಭವಾಗುವ ಸಾಧ್ಯತೆಗಳಿದೆ ಎಂದು ಸಂಶೋಧನಾ ವರದಿಯೊಂದು ಹೇಳಿದೆ.
ದೇಶದ ಬಹುತೇಕ ರಾಜ್ಯಗಳಲ್ಲಿ ಈಗಾಗಲೇ ಅನ್ ಲಾಕ್ ಘೋಷಣೆಯಾದ ಬೆನ್ನಲ್ಲೇ, ಸಾಮಾಜಿಕ ಅಂತರ, ಮಾಸ್ಕ್ ಮರೆತ ಜನ ಕೊರೋನಾ ಸೋಂಕು ಇಲ್ಲ ಅನ್ನುವಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಮುಂದಿನ ತಿಂಗಳು ದೇಶದಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳಬಹುದು ಎಂದು ಎಸ್.ಬಿ.ಐ ರಿಸರ್ಚ್ ಹೇಳಿದೆ.
ಕೋವಿಡ್ 19 ದ ರೇಸ್ ಟು ಫಿನಿಷಿಂಗ್ ಲೈನ್ ಹೆಸರಿನಲ್ಲಿ ಪ್ರಕಟವಾಗಿರುವ ಈ ವರದಿ ಪ್ರಕಾರ, ಜುಲೈ 2ನೇ ವಾರಕ್ಕೆ 2ನೇ ಅಲೆಯ ಅಬ್ಬರ ತಗ್ಗಲಿದೆ.ಆದರೆ ಆಗಸ್ಟ್ ಮೂರನೇ ವಾರದ ಹೊತ್ತಿಗೆ 3ನೇ ಅಲೆ ಏಳುವ ಸಾಧ್ಯತೆಗಳಿದೆ ಏಳಲಿದೆ.ಅಲ್ಲಿಗೆ ಅಕ್ಟೋಬರ್ ನವೆಂಬರ್ ಹೊತ್ತಿಗೆ ಮೂರನೇ ಅಲೆ ಬರಲಿದೆ ಅನ್ನುವ ಸುದ್ದಿ ಸುಳ್ಳಾಗಲಿದೆ.
ಇನ್ನು ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯ ಅಬ್ಬರ ತೀವ್ರವಾಗಿರುವ ಸಾಧ್ಯತೆಗಳಿದೆ ಎಂದು ವರದಿ ಹೇಳಿದ್ದು, ಬೇರೆ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಕೇವಲ ಶೇ 4.6 ಜನರಿಗೆ ಲಸಿಕೆ ನೀಡಲಾಗಿದೆ. ಶೇ20.8 ಜನ ಸಿಂಗಲ್ ಡೋಸ್ ಪಡೆದುಕೊಂಡಿದ್ದಾರೆ. ಹೀಗಾಗಿಯೇ ಮೂರನೇ ಅಲೆ ತೀವ್ರವಾಗಬಹದು ಎಂದು ವರದಿ ಅಂದಾಜಿಸಿದೆ.
Discussion about this post