ಬೆಂಗಳೂರು : ಕೊರೋನಾ ಸೋಂಕಿನ ಕಾರಣದಿಂದ ಬಹುತೇಕ ಉದ್ಯಿಮಗಳು ನೆಲ ಕಚ್ಚಿವೆ. ಅದರಲ್ಲೂ ಆಟೋಮೊಬೈಲ್ ಇಂಡಸ್ಟ್ರಿಯಂತು ಎದ್ದೇಳುವುದಕ್ಕೆ ಹಲವು ವರ್ಷಗಳೇ ಬೇಕಾಗಬಹುದು.
ಅದರಲ್ಲೂ ದುಬಾರಿ ಕಾರುಗಳ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿರುವುದರಿಂದ ಬಡ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ.
ಇದನ್ನೂ ಓದಿ : ಇಂದು ಮೋದಿ ತೊಟ್ಟ ಪೇಟ ಅಂತಿಂತ ಪೇಟವಲ್ಲ…ಇದರ ಹಿಂದಿದೆ ರಾಜಮನೆತನ ಕಥೆ
ಕಾರು ಖರೀದಿಸುವುದು ಶ್ರೀಮಂತರಾದರೂ, ಅದನ್ನು ತಯಾರಿಸುವ ಮಂದಿ ಶ್ರೀಮಂತರಲ್ಲ, ಅವರೆಲ್ಲರೂ ವಾರ, ತಿಂಗಳ ಸಂಬಳವನ್ನು ನಂಬಿದ ಮಂದಿ. ಹೀಗಾಗಿ ಇದರ ನೇರ ಪರಿಣಾಮ ಕಾರ್ಮಿಕರ ಮೇಲೆ ಬೀಳಲಿದೆ.
ಭಾರತದಲ್ಲಿ ದುಬಾರಿ ಕಾರುಗಳನ್ನು ಮಾರುವಲ್ಲಿ ಮುಂಚೂಣಿಯಲ್ಲಿರುವ ಬೆಂಜ್, ಬಿಎಂಡಬ್ಲ್ಯು, ಆಡಿ ಸಂಸ್ಥೆಗಳೇ ನಷ್ಟ ಭೀತಿಯಲ್ಲಿವೆ.
ಇದನ್ನೂ ಓದಿ : ನಿಮ್ಮ ಕೂದಲು ಕಂಡ್ರೆ ಇಷ್ಟವಾಗುತ್ತಿತ್ತು… ಇತ್ತೀಚೆಗೆ ನಿಮ್ಮ ಸೊಂಟ ಕಂಡ್ರೆ ಇಷ್ಟ ಆಗ್ತಿದೆ…
ಹೀಗಾಗಿ ಗ್ರಾಹಕರನ್ನು ಮತ್ತೆ ಸೆಳೆಯುವ ಸಲುವಾಗಿ ಮುಂದಿನ ದಿನಗಳಲ್ಲಿ ಆಡಿ 50 ಹೊಸ ಮಾದರಿಯ ಕಾರುಗಳನ್ನು ಪರಿಚಯಿಸಲಿದೆ. ಇದರೊಂದಿಗೆ ಬಿಎಂಡ್ಬ್ಯು 25 ಮಾದರಿ ಮತ್ತು ಬೆಂಜ್ 15 ಮಾದರಿಗಳನ್ನು ಪರಿಚಯಿಸಲಿದೆ.
Discussion about this post