Monday, April 19, 2021

ಕೊರೋನಾ ತಡೆಗೆ ದಿನಕ್ಕೊಂದು ರೂಲ್ಸ್ – ಜಿಮ್ ಬಂದ್ ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ…!

Must read

- Advertisement -
- Advertisement -

ಬೆಂಗಳೂರು : ಕೊರೋನಾ ಸೋಂಕಿನ ಎರಡನೆ ಅಲೆ ತೀವ್ರವಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ಮಾರ್ಗಸೂಚಿಯೊಂದನ್ನು ಹೊರಡಿಸಿತ್ತು. ಆದರೆ ಇದೀಗ ಕಠಿಣ ಮಾರ್ಗಸೂಚಿಗಳು ನಿಧಾನವಾಗಿ ಸಡಿಲವಾಗಲಾರಂಭಿಸಿದೆ.

ಹಾಗಂತ ಸಡಿಲಿಕೆ ಮಾಡದೆ ಸರ್ಕಾರಕ್ಕೆ ವಿಧಿಯಿರಲಿಲ್ಲ. ಆದರೆ ಮಾರ್ಗಸೂಚಿ ಹೊರಡಿಸುವ ಸಂದರ್ಭದಲ್ಲೇ ಒಂದಿಷ್ಟು ಸಾಧಕ ಬಾಧಕಗಳ ಬಗ್ಗೆ ಸಲಹೆ ಪಡೆಯುತ್ತಿದ್ರೆ ಈ ರೀತಿಯ ಗೊಂದಲವಾಗುತ್ತಿರಲಿಲ್ಲ.

ಚಿತ್ರಮಂದಿರಗಳ ಮೇಲೆ ಹೇರಿದ್ದ ಶೇ50ರ ನಿರ್ಬಂಧವನ್ನು ರದ್ದುಗೊಳಿಸಿ ಏಪ್ರಿಲ್ 7ರತನಕ ಶೇ 100 ಸೀಟು ತುಂಬಲು ಅನುವು ಮಾಡಿಕೊಟ್ಟಿದ್ದ ಸರ್ಕಾರ, ಇಂದು ಮತ್ತೊಂದು ತಿದ್ದುಪಡಿಯೊಂದಿಗೆ ಆದೇಶ ಹೊರಡಿಸಿದೆ.

ಜಿಮ್ ಗಳ ಮೇಲೆ ಹೇರಿದ್ದ ಸಂಪೂರ್ಣ ನಿರ್ಬಂಧವನ್ನು ಪರಿಷ್ಕರಿಸಿರುವ ರಾಜ್ಯ ಸರ್ಕಾರ ನೂತನ ಆದೇಶ ಪ್ರಕಾರ ಶೇ 50ರಷ್ಟು ಅವಕಾಶ ನೀಡಿದೆ, ಥಿಯೇಟರ್ ಗಳಂತೆ ಜಿಮ್ ಗಳು ಕೂಡಾ ಕಾರ್ಯನಿರ್ವಹಿಸಲು ಇದರಿಂದ ಅನುಕೂಲವಾಗಲಿದೆ.

ಇದೇ ಆದೇಶದಲ್ಲಿ ಜಿಮ್ ಗಳಿಗೆ ಕೆಲವೊಂದು ಸೂಚನೆಗಳನ್ನು ಕೂಡಾ ನೀಡಲಾಗಿದೆ. ಕೊರೋನಾ ಮಾರ್ಗಸೂಚಿಗಳೆಲ್ಲವನ್ನು ಪಾಲಿಸುವಂತೆ ಆದೇಶದಲ್ಲಿ ಹೇಳಲಾಗಿದ್ದು, ಜಿಮ್ ಉಪಕರಣವನ್ನು ಉಪಯೋಗಿಸಿದ ತಕ್ಷಣ ಸ್ಯಾನಿಟೈಸ್ ಮಾಡುವಂತೆ ಹೇಳಲಾಗಿದೆ.

ಇನ್ನುಳಿದಂತೆ 6 ರಿಂದ 9ನೇ ತರಗತಿ ತನಕ ಶಾಲೆಗಳು ಕಾರ್ಯನಿರ್ವಹಿಸೋದಿಲ್ಲ. ಜೊತೆಗೆ ಬಸ್ ಗಳಲ್ಲಿ ಸೀಟು ಇದಷ್ಟೇ ಪ್ರಯಾಣಿಕರನ್ನು ತುಂಬಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆ, ಜಾತ್ರೆ, ಮೇಳ ಹಾಗೂ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.

- Advertisement -
- Advertisement -
- Advertisement -

Latest article