ನವದೆಹಲಿ : ವುಹಾನ್ ವೈರಸ್ ಸೋಲಿಸಲು ಲಸಿಕೆ ಸಂಶೋಧನೆಗೊಂಡ ಬೆನ್ನಲ್ಲೇ ಕೊರೋನಾ ಅಬ್ಬರ ತಗ್ಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪದೇ ಪದೇ ರೂಪಾಂತರಿಯಾಗುತ್ತಿರುವ ವೈರಸ್ ಜಗತ್ತಿಗೆ ಕಂಟಕವಾಗಿ ಪರಿಣಮಿಸಿದೆ. ಇದೀಗ ಪುಹಾನ್ ವೈರಸ್ ನ ಡೆಲ್ಟಾ ರೂಪಾಂತರ ತಳಿ 104 ರಾಷ್ಟ್ರಗಳಿಗೆ ವ್ಯಾಪಿಸಿದ್ದು, ಕೆಲವೇ ವಾರಗಳಲ್ಲಿ ಪ್ರಬಲ ರೂಪಾಂತರ ತಳಿಯಾಗಿ ಜಗತ್ತನ್ನು ಮತ್ತೊಮ್ಮೆ ಅಪಾಯದತ್ತ ತಳ್ಳಲಿದೆಯಂತೆ.
ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಗೆಬ್ರೇಷಿಯಸ್ ಡೆಲ್ಟಾ ರೂಪಾಂತರಿಯಿಂದ ಸಾರ್ವಜನಿಕ ಆರೋಗ್ಯ ಪರಿಸ್ಥಿತಿ ತೀರಾ ಹದಗೆಡುತ್ತಿದೆ. ಕಡಿಮೆ ಪ್ರಮಾಣದಲ್ಲಿ ಲಸಿಕೆ ನೀಡಿರುವ ರಾಷ್ಟ್ರಗಳಲ್ಲಿ ಆರೋಗ್ಯ ಪರಿಸ್ಥಿತಿ ತೀರಾ ಭೀಕರವಾಗಿದ್ದು, ಯಾವ ದೇಶದಲ್ಲೂ ಸಾಂಕ್ರಾಮಿಕ ರೋಗ ಪರಿಪೂರ್ಣವಾಗಿ ನಿವಾರಣೆಯಾಗಿಲ್ಲ ಎಂದು ಎಚ್ಚರಿಸಿದ್ದಾರೆ.
ಕಡಿಮೆ ಪ್ರಮಾಣದಲ್ಲಿ ಕೋವಿಡ್ ಲಸಿಕೆ ನೀಡಿರುವ ರಾಷ್ಟ್ರಗಳಲ್ಲಿ ಪರಿಸ್ಥಿತಿ ತೀರ ಕೆಟ್ಟದಾಗಿದೆ ಎಂದು ಎಚ್ಚರಿಕೆ ನೀಡಿದ ಟೆಡ್ರೊಸ್ ಗೆಬ್ರೇಷಿಯಸ್ ಅವರು, ಡೆಲ್ಟಾ ವೇಗವಾಗಿ ಸೋಂಕು ಹರಡಬಲ್ಲ ರೂಪಾಂತರಿ ತಳಿಯಾಗಿದೆ ಅಂದಿದ್ದಾರೆ.
Discussion about this post