ನವದೆಹಲಿ : ಭಾರತ್ ಬಯೋಟೆಕ್ ಸಂಸ್ಥೆ ಇತ್ತೀಚೆಗೆ ಬೆಂಗಳೂರಿನಲ್ಲಿ ಕೋವ್ಯಾಕ್ಸಿನ್ ಲಸಿಕಾ ಉತ್ಪಾದನಾ ಘಟಕವನ್ನು ತರೆದಿತ್ತು. ಇದು ಅತಿದೊಡ್ಡ ಲಸಿಕೆ ಉತ್ಪಾದನಾ ಘಟಕವಾಗಿದ್ದ ಕಾರಣ, ಲಸಿಕೆ ಪೂರೈಕೆ ತೀವ್ರಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಘಟಕದಲ್ಲಿ ತಯಾರಾದ ಲಸಿಕೆ ಕಳಪೆ ಗುಣಮಟ್ಟದಿಂದ ಕೂಡಿತ್ತು ಅನ್ನುವ ವಿಚಾರವನ್ನು ಕೇಂದ್ರ ಕೋವಿಡ್ ಕಾರ್ಯಪಡೆ ಮುಖ್ಯಸ್ಥ ಡಾ. ಎನ್.ಕೆ. ಆರೋರಾ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು ಬೆಂಗಳೂರು ಘಟಕದಲ್ಲಿ ಉತ್ರಾದನೆಯಾದ 2 ಬ್ಯಾಚ್ ಗಳು ಗುಣಮಟ್ಟ ಹೊಂದಿರಲಿಲ್ಲ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗಲಿಲ್ಲ. ಹೀಗಾಗಿ ದೇಶದಲ್ಲಿ ಲಸಿಕೆಗೆ ಪರದಾಡುವಂತಾಯ್ತು ಎಂದು ಹೇಳಿದ್ದಾರೆ.
ಇದೀಗ ಮೂರು ಹಾಗೂ ನಾಲ್ಕನೇ ಬ್ಯಾಚ್ ನ ಲಸಿಕೆ ಉತ್ಪಾದನೆಯಾಗಿದ್ದು ಗುಣಮಟ್ಟ ಪರೀಕ್ಷೆಯಲ್ಲಿ ಉರ್ತೀರ್ಣಗೊಂಡಿದೆ. ಹೀಗಾಗಿ ಅವನ್ನು ಲಸಿಕಾಕರಣಕ್ಕೆ ಕಳುಹಿಸಿಕೊಡಲಾಗಿದೆ. ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಬ್ಯಾಚ್ ಗಳನ್ನು ಜನರಿಗೆ ನೀಡುವುದಿಲ್ಲ. ಮುಂದಿನ ದಿನಗಳಲ್ಲಿ ಕೋವ್ಯಾಕ್ಸಿನ್ ಉತ್ಪಾದನೆ ತೀವ್ರಗೊಳ್ಳಲಿದ್ದು ಲಸಿಕೆ ಪೂರೈಕೆ ಸುಧಾರಿಸಲಿದೆ ಅಂದಿದ್ದಾರೆ. Covaxin’s quality problems slowed down vaccine supply, says Covid-19 panel chief
Discussion about this post