Thursday, March 4, 2021

ಪತ್ರಕರ್ತನಿಗೆ ಬೆದರಿಕೆ ಹಾಕಿದ ಕಾಂಗ್ರೆಸ್ ಕಾರ್ಪೋರೇಟರ್.. ಅಮಾನತು ಮಾಡಲ್ವ ದಿನೇಶ್ ಗುಂಡೂರಾವ್.?

Must read

- Advertisement -
- Advertisement -

ಜನಪ್ರತಿನಿಧಿಗಳು ಗೆಲ್ಲೋ ತನಕ ಮತದಾರರ ಕೈ ಕಾಲು ಹಿಡಿದುಕೊಂಡು ಒಡಾಡುತ್ತಿರುತ್ತಾರೆ. ಗೆದ್ದರೆ ಸಾಕು, ಮತ್ಯಾವುದೋ ಲೋಕದಿಂದ ಬಂದಂತೆ ಆಡಲು ಪ್ರಾರಂಭಿಸುತ್ತಾರೆ. ಅದರಲ್ಲೂ ಬಿಬಿಎಂಪಿ ಕಾರ್ಪೋರೇಟರ್ ಗಳು ಲೋಕಲ್ ಶಾಸಕರಂತೆ ಆಡುತ್ತಾರೆ.

ಇದಕ್ಕ ಅಧಿಕಾರದ ದರ್ಪ ಒಂದು ಕಾರಣವಾದರೆ, ಅವರ ಹಿನ್ನಲೆಯೂ ಅದೇ ರೀತಿ ಇರುತ್ತದೆ. ಮೈ ಮೇಲೆ ಕೇಸು ಜಡಿದುಕೊಳ್ಳದೆ, ಕ್ಲೀನ್ ಹ್ಯಾಂಡ್ ಅನ್ನುವ ಕಾರ್ಪೋರೇಟರ್ ಗಳನ್ನು ಹುಡುಕ ಹೊರಟರೆ ನಾಲ್ಕೈದು ಜನ ಸಿಗುವುದು ಕಷ್ಟ.

ಹೀಗೆ ಕಾಟನ್ ಪೇಟೆ ವಾರ್ಡ್ ನ ಕಾರ್ಪೊರೇಟರ್ ಡಿ ಪ್ರಮೋದ್, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಫೋಟೋಗ್ರಾಫರ್ ಪುಷ್ಕರ್ ವಿ ಗೆ ಬೆದರಿಕೆ ಹಾಕಿದ್ದು, ತನ್ನ ವಾರ್ಡ್ ನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳ ಫೋಟೋ ಹಾಗೂ ಆ ಕುರಿತು ಯಾವುದೇ ವರದಿ ಪ್ರಕಟಿಸದಂತೆ ಬೆದರಿಕೆ ಹಾಕಿದ್ದಾರೆ.

ಮಾರ್ಚ್ 6 ರಂದು ಮೆಜಸ್ಟಿಕ್ ಗೆ ತೆರಳುವ ಮಾರ್ಗದಲ್ಲಿರುವ, ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಕಾಟನ್ ಪೇಟೆಯ ಮುಖ್ಯ ರಸ್ತೆಯನ್ನು ಸಂಪೂರ್ಣವಾಗಿ ಅಗೆಯಲಾಗಿತ್ತು. ಇದನ್ನು ಗಮನಿಸಿದ ಪತ್ರಕರ್ತ ತಕ್ಷಣವೇ ಕಾಮಗಾರಿಯ ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ. ಜೊತೆಗೆ ಕಾಮಗಾರಿಯಿಂದ ಸ್ಥಳೀಯ ವ್ಯಾಪಾರಿಗಳಿಗೆ ಹಾಗೂ ಪಾದಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿ ಪಡೆಯಲು ವ್ಯಾಪಾರಿಯೊಬ್ಬರ ಪ್ರತಿಕ್ರಿಯೆ ಕೇಳಿದ್ದಾರೆ.

ಆಗ ಅಡ್ಡಿ ಮಾಡಿದ ಕಾರ್ಪೊರೇಟರ್ ಗಳ ಬೆಂಬಲಿಗರು, ಅಲ್ಲೇ ಹತ್ತಿರದ ದೇವಾಲಯದಲ್ಲಿ ಕಾರ್ಪೊರೇಟರ್ ಪ್ರಮೋದ್ ನಿಮ್ಮನ್ನು ಭೇಟಿ ಮಾಡಲು ಸೂಚಿಸಿದ್ದಾರೆ ಎಂದರು.

ಕಾರ್ಪೊರೇಟರ್ ನ್ನು ಭೇಟಿ ಮಾಡಿದ ಪುಷ್ಕರ್ ತಾವು ತಮ್ಮ ಕೆಲಸವನ್ನಷ್ಟೇ ಮಾಡುತ್ತಿದ್ದಾಗಿ ವಿವರಿಸಿದ್ದಾರೆ. ಆದರೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರ್ಪೊರೇಟರ್ ಹಾಗೂ ಆತನ ಬೆಂಬಲಿಗರು ವರದಿ ಪ್ರಕಟಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ, ಜೈಲಿಗೆ ಹೋಗಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

ಬಳಿಕ ಪುಷ್ಕರ್ ನನ್ನು ತೆರಳಲು ಬಿಟ್ಟಿದ್ದಾರೆ. ಮತ್ತೆ ಪುಷ್ಕರ್ ನನ್ನು ವಾಪಸ್ ಕರೆದ ಕಾರ್ಪೋರೇಟರ್, ಕಾಮಗಾರಿ ಕುರಿತಂತೆ ಸುದ್ದಿಯನ್ನು ಪ್ರಕಟಿಸಬೇಡಿ ಎಂದು ಕಾರ್ಪೊರೇಟರ್ ವಾರ್ನಿಂಗ್ ಬೇರೆ ಕೊಟ್ಟಿದ್ದಾರೆ.

ಬೆದರಿಕೆ ವಿಷಯ ಬೀದಿಗೆ ಬರುತ್ತಿದ್ದಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಸೇರಿರುವ ವಿರೋಧಿಗಳ ಕೃತ್ಯ ಎಂದು ನಾಟಕವಾಡಿ, ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸುವುದಾಗಿಯೂ ಹೇಳಿದ್ದಾರೆ.

Corporator threatens Express photographer

ನಂತರ ಗಾಂಧಿನಗರದ ಶಾಸಕ ದಿನೇಶ್ ಗುಂಡೂರಾವ್ ಅವರ ಆಪ್ತ ಸಹಾಯಕ ಪತ್ರಕರ್ತನಿಗೆ ಕರೆ ಮಾಡಿ ಪ್ರಮೋದ್ ಅವರು ಮಾಡಿದ್ದು ತಪ್ಪಾಗಿದೆ. ಗುಂಡೂರಾವ್ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದಾರೆ.

ಕೆಟ್ಟ ಕಾಮಗಾರಿ ಫೋಟೋ ತೆಗೆಯುವ ಪತ್ರಕರ್ತನ ಫೋಟೋ ತೆಗೆಯಲು ಕಾರ್ಪೋರೇಟರ್ ಅಡ್ಡಿ ಪಡಿಸುತ್ತಾನೆ ಅಂದ ಮೇಲೆ ಈತ ಕಾರ್ಪೋರೇಟರ್ ಆಗಲು ಆಯೋಗ್ಯ ಅನ್ನುವುದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನೈತಿಕ ಅನ್ನುವುದು ಇದ್ದರೆ ಮೊದಲು ಈ ಕಾರ್ಪೋರೇಟರ್ ನನ್ನು ಪಕ್ಷದಿಂದ ವಜಾಗೊಳಿಸಲಿ. ಇಲ್ಲವಾದರೆ ಕಾಂಗ್ರೆಸ್ ಗೆ ಜನರೇ ತಕ್ಕ ಪಾಠ ಕಲಿಸುವುದು ಖಂಡಿತಾ.

- Advertisement -
- Advertisement -
- Advertisement -

Latest article