Saturday, May 15, 2021
spot_img

ಏಪ್ರಿಲ್ 21 ರಿಂದ ಮೇ 30ರ ತನಕ ಚಿತ್ರಮಂದಿರ ಬಂದ್…. ಧಾರವಾಹಿ ಶೂಟಿಂಗ್ ಗೆ ಬ್ರೇಕ್..?

Must read

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಹೆಚ್ಚಾಗಿರುವ ಹಿನ್ನಲೆಯಲ್ಲಿ ತಡವಾಗಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ನಾಳೆ ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಸಭೆ ನಡೆಯಲಿದ್ದು ಸಂಪೂರ್ಣ ಆದೇಶ ಹೊರ ಬೀಳುವ ಸಾಧ್ಯತೆಗಳಿದೆ.

ನಾಳೆ ನಡೆಯುವ ಸಭೆಯಲ್ಲಿ ಕೊರೋನಾ ತಡೆ ಟಾಸ್ಕ್ ಫೋರ್ಸ್ ಸದಸ್ಯರು ಕೊಟ್ಟಿರುವ ಸಲಹೆಗಳ ಬಗ್ಗೆ ಚರ್ಚೆ ನಡೆಯಲಿದೆ. ಬಳಿಕ ಜನತಾ ಕರ್ಫ್ಯೂ, ಕಠಿಣ ನಿಯಮಗಳ ಜಾರಿ ಸೇರಿದಂತೆ ಹಲವು ವಿಚಾರಗಳ ಸಾಧಕ ಬಾಧಕಗಳ ಬಗ್ಗೆ ಹಿರಿಯ ಸಚಿವರು ಚರ್ಚೆ ನಡೆಸಿ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಿದ್ದಾರೆ. ಮುಖ್ಯಮಂತ್ರಿಗಳು ಈ ಸಲಹೆಗಳನ್ನು ಆದೇಶ ರೂಪದಲ್ಲಿ ಪ್ರಕಟಿಸುತ್ತಾರೆ ಎನ್ನಲಾಗಿದೆ.

ಈ ನಡುವೆ ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಏಪ್ರಿಲ್ 21 ರಿಂದ ಮೇ 30ರ ತನಕ ಚಿತ್ರಮಂದಿರಗಳನ್ನು ಬಂದ್ ಮಾಡುವ ಕುರಿತಂತೆ ಚರ್ಚೆಗಳು ನಡೆದಿದೆ. ಈ ಸಂಬಂಧ ಚಲನಚಿತ್ರ ವಾಣಿಜ್ಯಮಂಡಳಿಗೆ ಮೌಖಿಕ ಆದೇಶ ಕೂಡಾ ಹೋಗಿದೆ ಎನ್ನಲಾಗಿದೆ. ಇದರೊಂದಿಗೆ ಧಾರವಾಹಿ ಶೂಟಿಂಗ್ ನಿಲ್ಲಿಸುವ ಕುರಿತಂತೆ ಕೂಡಾ ತೀರ್ಮಾನಿಸಲಾಗಿದೆಯಂತೆ.

213 ದಿನ ಚಂದನವನ ಕೆಲಸಗಳನ್ನು ಸ್ಥಗಿತಗೊಳಿಸಿತ್ತು. ಇದಾದ ಬಳಿಕ ಲಾಕ್ ಡೌನ್ ಹಂತ ಹಂತವಾಗಿ ತೆರವುಗೊಂಡ ವೇಳೆ ಚಿತ್ರಮಂದಿರಗಳು ಮತ್ತೆ ಕಾರ್ಯಪ್ರಾರಂಭಿಸಿತ್ತು. ಕೊರೋನಾ ಸಂಕಷ್ಟಗಳ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ ಸೋಂಕಿನ ಎರಡನೆ ಅಲೆ ಬಡಿದಿದೆ. ಹೀಗಾಗಿ ಮತ್ತೆ ಚಂದನವನ ತನ್ನ ಚಟುವಟಿಕೆ ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಈಗಾಗಲೇ ಮಹಾರಾಷ್ಟ್ರದಲ್ಲಿ ಚಿತ್ರಪ್ರದರ್ಶನ ಹಾಗೂ ಶೂಟಿಂಗ್ ಗೆ ಬ್ರೇಕ್ ಹಾಕಲಾಗಿದೆ. ಜೊತೆಗೆ ಧಾರವಾಹಿಗಳ ಶೂಟಿಂಗ್ ಅನ್ನು ಕೂಡಾ ನಿಲ್ಲಿಸಲಾಗಿದೆ.

- Advertisement -
- Advertisement -spot_img
- Advertisement -spot_img

Latest article