ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೆ ಅಲೆ ಪ್ರಾರಂಭವಾಗಿದೆ.
ಆರೋಗ್ಯ ಇಲಾಖೆ ಕೊರೋನಾ ವಿಚಾರದಲ್ಲಿ ಎಚ್ಚರಿಕೆ ವಹಿಸಿ ಎಂದು ಬಾಯಿ ಬಡಿದುಕೊಳ್ಳುತ್ತಿದೆ. ಆದರೆ ಜನ ಮಾತ್ರ ಕೊರೋನಾ ತಾನೇ ಎಂದು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಅದರಲ್ಲೂ ಚಂದನವನ ಮಾತ್ರ ಕೊರೋನಾ ವಿಚಾರದಲ್ಲಿ ಸಿಕ್ಕಾಪಟ್ಟೆ ಕೇರ್ ಲೆಸ್ ಆಗಿದೆ. ಸೋಂಕು ವ್ಯಾಪಕವಾಗಿ ಹರಡುವ ಮುನ್ಸೂಚನೆ ಸಿಕ್ಕರೂ, ರಾಜಕೀಯ ನಾಯಕರಿಗಿಂತ ನಾವೇನು ಅನ್ನುವಂತಿದೆ ಇವರ ವರ್ತನೆ.
ಇದನ್ನೂ ಓದಿ : ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ ಟೀಂ ಯುವರತ್ನ…. ಕಣ್ಣಿದ್ದು ಕುರುಡಾದ ರಾಜ್ಯ ಸರ್ಕಾರ
ಆರೋಗ್ಯ ಸಚಿವ ಡಾ. ಸುಧಾಕರ್ ಅವರೇ ಚಂದನವನದ ಸೆಲೆಬ್ರೆಟಿಗಳಿಗೆ ಮನವಿ ಮಾಡುವ ಪರಿಸ್ಥಿತಿ ಬಂದಿದೆ ಅಂದ್ರೆ ಸೆಲೆಬ್ರೆಟಿಗಳ ನಿರ್ಲಕ್ಷ್ಯ ಎಷ್ಟರ ಮಟ್ಟಿಗೆ ಇರಬಹುದು ಊಹಿಸಿ.
ಮೊನ್ನೆ ಮೊನ್ನೆ ಯುವರತ್ನದ ಚಿತ್ರದ ಭರ್ಜರಿ ಪ್ರಚಾರವನ್ನು ಮುಗಿಸಿರುವ ಪುನೀತ್ ಇದೀಗ ಹೈಕೋರ್ಟ್ ಮುಂದೆ ತಲೆಬಾಗುವ ಪರಿಸ್ಥಿತಿ ಬಂದಿದೆ.

ಈ ನಡುವೆ ರಾಬರ್ಟ್ ಚಿತ್ರದ ಯಶಸ್ವಿನ ಸಂಭ್ರಮದಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಲು ರಾಜ್ಯ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಇದೇ ತಿಂಗಳ 29 ರಿಂದ ಮುಂದಿನ ತಿಂಗಳ 1ರ ತನಕ ಈ ವಿಜಯಯಾತ್ರೆ ನಡೆಯಲಿದೆ.
ಪುನೀತ್ ಹೋದ ಕಡೆಯೇ ಜನ ಹೇಗೆ ಸೇರಿದ್ದರು. ಎಷ್ಟು ಜನ ಮಾಸ್ಕ್ ಹಾಕಿದ್ದರು, ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದರು ಅನ್ನುವುದನ್ನು ನೋಡಿದ್ದೇವೆ.
ಇದನ್ನೂ ಓದಿ : ಪುನೀತ್ ರಾಜ್ ಕುಮಾರ್ ವಿರುದ್ಧ ಆರೋಗ್ಯ ಸಚಿವ ಕೆ ಸುಧಾಕರ್ ಬೇಸರ… ಮಾಸ್ಕ್ ಧರಿಸುವಂತೆ ಮನವಿ
ರಾಬರ್ಟ್ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಕೊರೋನಾ ನಿಯಮಗಳು ಎಷ್ಟರ ಮಟ್ಟಿಗೆ ಪಾಲನೆಯಾಗಿತ್ತು ಅನ್ನುವುದನ್ನು ಕೂಡಾ ರಾಜ್ಯ ಗಮನಿಸಿದೆ.
ಇದೀಗ ದರ್ಶನ್ ರಾಜ್ಯ ಪ್ರವಾಸ ಕೈಗೊಂಡರೆ ಮತ್ತೆ ಜನ ಬೀದಿಗೆ ಬರುತ್ತಾರೆ, ಸಾವಿರಾರು ಸಂಖ್ಯೆಯಲ್ಲಿ ಗುಂಪುಗೂಡುತ್ತಾರೆ. ಅವರಲ್ಲಿ ಮಾಸ್ಕ್ ಹಾಕಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಮನವಿ ಮಾಡಲು ಸಾಧ್ಯವೇ. ಖಂಡಿತಾ ಅಸಾಧ್ಯ.
ಕೊರೋನಾ ಸೋಂಕಿನ ಅಬ್ಬರ ಮುಗಿಯಲಿ, ಆಮೇಲೆ ವಿಜಯಯಾತ್ರೆ ಮಾಡಿದರೆ ತಪ್ಪೇನು..?
ಸಾವಿರಾರು ಮಂದಿ ಒಂದೆಡೆ ಸೇರಿದಾಗ ಈಗಾಗಲೇ ಎರಡನೇ ಅಲೆ ಪ್ರಾರಂಭವಾಗಿರುವ ಸಂದರ್ಭದಲ್ಲಿ ಕೊರೋನಾ ಸ್ಪೋಟಗೊಂಡರೂ ಅಚ್ಚರಿ ಇಲ್ಲ. ಸೆಲೆಬ್ರೆಟಿಗಳು ಹೋಗ್ತಾರೆ ಬರ್ತಾರೆ, ಆದರೆ ಆಫ್ಟರ್ ಎಫೆಕ್ಟ್ ಅನ್ನು ಅನುಭವಿಸಬೇಕಾಗಿರುವುದು ಸರ್ಕಾರ ಮತ್ತು ಜನ.
ಓಣಂ ಹಬ್ಬದ ಸಂದರ್ಭದಲ್ಲಿ ಕೇರಳಿಗರು ಮಾಡಿಕೊಂಡ ಎಡವಟ್ಟು ಇದೀಗೂ ಶಾಪವಾಗಿ ಪರಿಣಮಿಸಿದೆ.
ಓಣಂ ಸಂಭ್ರಮದಲ್ಲಿ ಗುಂಪು ಗುಂಪಾಗಿ ರಸ್ತೆಗಿಳಿದ ಪರಿಣಾಮ ಕೇರಳದಲ್ಲಿ ಸೋಂಕು ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ಅಂದ ಮೇಲೆ ಕರ್ನಾಟಕದ ಪರಿಸ್ಥಿತಿ ಹೇಗಿರಬಹುದು.
ಅರೇ ರಾಜಕೀಯ ಸಮಾವೇಶಗಳೇ ನಡೆಯುತ್ತಿರುವಾಗ, ನಾವು ಸಿನಿ ಪ್ರಿಯರು ಸಂಭ್ರಮಿಸುವುದೇ ತಪ್ಪಾ ಅನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ರಾಜಕೀಯ ನಾಯಕರಿಗೆ ಬುದ್ದಿ ಇಲ್ಲ ಹಾಗಂತ ನಮಗಾದರೂ ಬುದ್ದಿ ಬೇಕಲ್ವ.
Discussion about this post