ರಾಜ್ಯದಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ನಾಳೆ ಹೊರ ಬೀಳಲಿದೆ. ನಿರೀಕ್ಷಿತ ಸ್ಥಾನಗಳನ್ನು ಗಳಿಸುವ ವಿಶ್ವಾಸದಲ್ಲಿರುವ ಬಿಜೆಪಿ ಸರ್ಕಾರ ಉಳಿಯುತ್ತದೆ ಅನ್ನುವ ಭರವಸೆಯಲ್ಲಿದೆ.
ಇನ್ನು ನಾವೇ ಹೆಚ್ಚು ಸ್ಥಾನ ಪಡೆಯೋದು. ಹೀಗಾಗಿ ಬಿಜೆಪಿ ಸರ್ಕಾರ ಪತನ ಗ್ಯಾರಂಟಿ ಅನ್ನುವುದು ಕಾಂಗ್ರೆಸ್ ನಾಯಕರ ಲೆಕ್ಕಚಾರ.
ಈ ಮಧ್ಯೆ ಫಲಿತಾಂಶ ಲಾಭ ಪಡೆಯುವ ಲೆಕ್ಕಚಾರ ತೆನೆ ಹೊತ್ತ ಮಹಿಳೆಯ ಮನೆಯಲ್ಲಿ ನಡೆಯುತ್ತಿದೆ.
ಇಷ್ಟೆಲ್ಲಾ ಲೆಕ್ಕಚಾರಗಳ ನಡುವೆ ಗುರು ಶಿಷ್ಯರ ನಡುವಿನ ಮಾತಿನ ಸಮರ ಮುಂದುವರಿದಿದೆ.
ಕಾಂಗ್ರೆಸ್ ಪಕ್ಷದಲ್ಲಿ ಈಗಲೂ ಇದ್ದಿದ್ದರೆ ರಾಜಕೀಯ ಸಮಾಧಿಯಾಗಿ ಹೋಗುತ್ತಿದ್ದೆ. ಬಿಜೆಪಿ ಪಕ್ಷಕ್ಕೆ ಬಂದು ಬಚಾವಾಗಿದ್ದೇನೆ ಎಂದು ಅನರ್ಹ ಶಾಸಕ ಎಸ್‌ಟಿ ಸೋಮಶೇಖರ್ ಕೊಟ್ಟಿರುವ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಸಿದ್ದರಾಮಯ್ಯ, ಮಾನ ಮರ್ಯಾದೆ ಇದ್ದವರು ಬಿಜೆಪಿಗೆ ಹೋಗಲ್ಲ ಎಂದು ಮಾಜಿ ಶಿಷ್ಯನಿಗೆ ತಿರುಗೇಟೆ ಕೊಟ್ಟಿದ್ದಾರೆ.
ನಾನು ಹೋದ ಕಡೆಯಲೆಲ್ಲಾ ಪಕ್ಷಾಂತರಿಗಳ ವಿರುದ್ಧವಾದ ವಾತಾವರಣ ಇತ್ತು. ನಾವು 8 ರಿಂದ 10 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಅಂತ ಅಂದುಕೊಂಡಿದ್ದೇವೆ. ಸಮೀಕ್ಷೆ ಫಲಿತಾಂಶಗಳು ಕರಾರುವಕ್ಕಾಗಿ ಇರಲು ಸಾಧ್ಯವಿಲ್ಲ. ನಾಳೆ ಫಲಿತಾಂಶಕ್ಕಾಗಿ ಕಾಯೋಣ ಅಂದಿದ್ದಾರೆ.
Discussion about this post