ಬೆಂಗಳೂರು : ಕಳೆದ ವರ್ಷ ಮೇ ತಿಂಗಳಲ್ಲಿ ಗಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದ ಕರ್ನಲ್ ಸಂತೋಷ್ ಬಾಬು ಅವರಿಗೆ ಮರಣೋತ್ತರ ‘ಮಹಾವೀರ ಚಕ್ರ’ ಪ್ರಶಸ್ತಿ ಘೋಷಣೆಯಾಗಿದೆ.
16ನೇ ಬಿಹಾರ ಬೆಟಾಲಿಯನ್ನ ಕಮಾಂಡಿಂಗ್ ಆಫೀಸರ್ ಆಗಿದ್ದ ಸಂತೋಷ್ ಬಾಬು ಅವರು, ಕಳೆದ ವರ್ಷ ಜೂನ್ನಲ್ಲಿ ನಡೆದ ಭಾರತ-ಚೀನಾ ಸಂಘರ್ಷದ ವೇಳೆ ತಂಡವೊಂದನ್ನು ಮುನ್ನಡಿಸುತ್ತಿದ್ದರು. ಈ ವೇಳೆ ಶತ್ರುಗಳ ಗುಂಡಿಗೆ ಎದೆಯೊಡ್ಡಿ ವೀರ ಹುತಾತ್ಮರಾಗಿದ್ದರು.

ತೆಲಂಗಾಣದ ಸೂರ್ಯಪೇಟ್ನವರಾದ ಸಂತೋಷ್ ಬಾಬು 2004 ರಲ್ಲಿ ಸೈನ್ಯಕ್ಕೆ ಸೇರಿದ್ದರು. 16ನೇ ಬಿಹಾರ ರೆಜೆಮೆಂಟಿಗೆ ಕರ್ನಲ್ ಆಗಿ ಸೇರ್ಪಡೆಯಾಗಿದ್ದ ಸಂತೋಷ್, 2006 ರಲ್ಲಿ ಕ್ಯಾಪ್ಟನ್ ಆಗಿ ಭಡ್ತಿ ಪಡೆದಿದ್ದರು. 2010ರಲ್ಲಿ ಮೇಜರ್ ಹುದ್ದೆ ಅಲಂಕರಿಸಿದ್ದರು,
ಕ.ಸಂತೋಷ್ ಬಾಬು ಅವರಿಗೆ ‘ಮಹಾವೀರ ಚಕ್ರ’ವಲ್ಲದೆ 4ನೇ ಪ್ಯಾರಾಚ್ಯೂಟ್ ರೆಜಿಮೆಂಟ್ ನ ಸಬ್ ಸಂಜೀವ್ ಕುಮಾರ್ ಗೆ ‘ಕೀರ್ತಿ ಚಕ್ರ’, ಇತರ ಐವರು ಸೈನಿಕರಿಗೆ ‘ವೀರ ಚಕ್ರ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜೊತೆಗೆ ಮೂವರು ಸೈನಿಕರನ್ನು ‘ಶೌರ್ಯ ಚಕ್ರ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.