ಬೆಂಗಳೂರು : ಸಮ್ಮಿಶ್ರ ಸರ್ಕಾರದ ಮೇಲೆ ಬೆಳಗಾವಿ ಸಹೋದರರು ಹರಡಿದ್ದ ಕಾರ್ಮೋಡ ಕರಗಿದಂತೆ ಕಾಣುತ್ತಿದೆ. ಆದರೆ ಉತ್ತರದ ಕಡೆಯ ಸಂಕಷ್ಟ ನಿವಾರಣೆಯಾದರೆ ಮತ್ತೊಂದು ಕಡೆಯಿಂದ ಭಿನ್ನ ರಾಗ ಶುರುವಾಗಿದೆ.
ಮೇಲ್ನೋಟಕ್ಕೆ ಇದು ಕಾಂಗ್ರೆಸ್ ಪಕ್ಷದೊಳಗಿನ ಸಮಸ್ಯೆ, ಆದರೆ ಬಿಸಿ ಮುಟ್ಟುವುದು ಕುಮಾರಸ್ವಾಮಿದೆ.
ಇದೀಗ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿರುವ ಶಾಸಕ ಎಂ.ಟಿ.ಬಿ. ನಾಗರಾಜ್ನಾನು ಸಚಿವ ಸ್ಥಾನದ ಆಕಾಂಕ್ಷಿ, ಸಂಪುಟ ವಿಸ್ತರಣೆ ವೇಳೆ ಅವಕಾಶ ಕೊಡದಿದ್ದರೆ ಗಂಟುಮೂಟೆ ಕಟ್ಟಿಕೊಂಡು ಹೋಗುತ್ತಿರುತ್ತೇನೆ ಎಂದಿದ್ದಾರೆ.
ಕಳೆದ ಬಾರಿಯೂ ಸಚಿವ ಸ್ಥಾನ ಕೊಡುವುದಾಗಿ ನಾಯಕರು ಹೇಳಿದ್ದರು.ಆದರೆ ಕೊಡಲಿಲ್ಲ. ಮತ್ತೊಂದು ಸಲ ಕೊಡ್ತಾರೆ ಎಂದು ಕಾಯುತ್ತೇನೆ.ಸಿದ್ದರಾಮಯ್ಯನವರು ಇದುವರೆಗೆ ನನ್ನ ಬಳಿ ಮಾತನಾಡಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತುಕತೆ ನಡೆಸಿ ಸಂಧಾನ ಮಾಡಿದ್ದಾರೆ. ಹೀಗಾಗಿ ಸ್ವಲ್ಪ ದಿನ ಕಾಯುತ್ತೇನೆ ಎಂದು ನಾಗರಾಜ್ ಹೇಳಿದ್ದಾರೆ.
35 ವರ್ಷ ಪಕ್ಷಕ್ಕಾಗಿ ದುಡಿದಿದ್ದೇನೆ. 3 ಬಾರಿ ಶಾಸಕನಾಗಿದ್ದೇನೆ. ಆದರೂ ನನ್ನನ್ನು ಮಂತ್ರಿ ಮಾಡಿಲ್ಲ. ನನಗಿಂತ ಕಿರಿಯರೂ ಸಚಿವರಾಗಿದ್ದಾರೆ. ಎಲ್ಲೋ ಒಂದು ಕಡೆ ಕಾಂಗ್ರೆಸ್ನವರು ನನ್ನ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅನ್ನಿಸುತ್ತಿದೆ. ಇತ್ತೀಚೆಗೆ ಪಕ್ಷಕ್ಕೆ ಬಂದವರಿಗೆ ಸಿಕ್ಕಾಪಟ್ಟೆ ಗೌರವ ಸಿಗುತ್ತಿರುವುದು ಬೇಸರ ತಂದಿದೆ ಎಂದು ತಮ್ಮ ಅಸಮಾಧಾನಕ್ಕೆ ಕಾರಣವೇನು ಅನ್ನುವುದನ್ನು ಹೇಳಿದ್ದಾರೆ.
ಒಟ್ಟಿನಲ್ಲಿ ರಾಹುಲ್ ಗಾಂಧಿ ಕನಸಿನಂತೆ ರಚನೆಯ ಸರ್ಕಾರಕ್ಕೆ ನೆಮ್ಮದಿಯಂತು ಇಲ್ಲ.
ಈ ನಡುವೆ ಬಿಜೆಪಿಯವರು ಸರ್ಕಾರ ಇಂದು ಬೀಳುತ್ತದೆ, ನಾಳೆ ಬೀಳುತ್ತದೆ ಎಂದು ಕಾಯುತ್ತಿದ್ದಾರೆ.
Discussion about this post