ರಾಮನಗರ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಕುಟುಂಬ ಆಸ್ತಿ ವಿವರವನ್ನು ಘೋಷಿಸಿದ್ದಾರೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರ ಆಸ್ತಿ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಿರುವ ವಿವರ ಪ್ರಕಾರ ಅವರ ಕುಟುಂಬದ ಆಸ್ತಿ ಬರೋಬ್ಬರಿ 167 ಕೋಟಿ ರೂಪಾಯಿ.
2013ರಲ್ಲಿ ಈ ಕುಟುಂಬದ ಆಸ್ತಿ ಮೌಲ್ಯವು 137 ಕೋಟಿ ರೂಪಾಯಿ ಇತ್ತು. ಇದೀಗ 2018ರಲ್ಲಿ 167 ಕೋಟಿ ರುಪಾಯಿಗೆ ಏರಿಕೆ ಆಗಿದೆ. ಬರೋಬ್ಬರಿ 30 ಕೋಟಿ ಏರಿಕೆ..ಅಂದರೆ ವರ್ಷಕ್ಕೆ 6 ಕೋಟಿ ಆಸ್ತಿ ಪ್ರಮಾಣದಲ್ಲಿ ಏರಿಕೆಯಾಗಿದೆ.( ಜನ ಸಾಮಾನ್ಯರ ಆದಾಯ ಆದ್ಯಾಕೆ ಏರಿಯಾಗುತ್ತಿಲ್ಲ ಅನ್ನುವುದೇ ಯಕ್ಷ ಪ್ರಶ್ನೆ..)
ಬಿಇ ಪದವೀಧರೆ ಆಗಿರುವ ಅನಿತಾ ಅವರು ಸ್ಥಿರಾಸ್ಥಿಗಿಂತ ಚರಾಸ್ತಿಗಳಲ್ಲಿಯೇ ಹೆಚ್ಚಿನ ಹೂಡಿಕೆಯನ್ನು ಮಾಡಿದ್ದಾರೆ. ಕಸ್ತೂರಿ ಮೀಡಿಯಾ ಪ್ರೈ.ಲಿ. ಕಂಪನಿಯಲ್ಲಿ ಅವರ ದೊಡ್ಡ ಮೊತ್ತದ ಹೂಡಿ ಮಾಡಿದ್ದಾರೆ.
- 2660 ಗ್ರಾಂನಷ್ಟು ಚಿನ್ನ
- 17 ಕೆಜಿ ಬೆಳ್ಳಿ
- 40 ಕ್ಯಾರೆಟ್ ನಷ್ಟು ವಜ್ರ
- 8.29 ಲಕ್ಷ ಮೌಲ್ಯದ ಹಾರ್ಲೆ ಡೆವಿಡ್ ಸನ್ ಬೈಕ್
- 20 ಲಕ್ಷ ಮೌಲ್ಯದ ವ್ಯಾನ್ ಇವರ ಹೆಸರಿನಲ್ಲಿದೆ.
ಕುಮಾರಸ್ವಾಮಿ ಅವರ ಚರಾಸ್ತಿ- 7.8 ಕೋಟಿ, ಸ್ಥಿರಾಸ್ತಿ 35.10 ಕೋಟಿ, ಹೂಡಿಕೆ 3 ಸಾವಿರ, ಠೇವಣಿ 22.25 ಲಕ್ಷ, ಸಾಲ ನೀಡಿಕೆ 6.97 ಕೋಟಿ, ಚಿನ್ನಾಭರಣ ಮೌಲ್ಯ 24.52 ಲಕ್ಷ, ಕೈಯಲ್ಲಿರುವ ನಗದು 12 ಲಕ್ಷ, ವಾರ್ಷಿಕ ಆದಾಯ 15.72 ಲಕ್ಷ, ಪಡೆದ ಸಾಲ 2.94 ಕೋಟಿ.
ಅನಿತಾ ಕುಮಾರಸ್ವಾಮಿ ಚರಾಸ್ತಿ- 94.22 ಕೋಟಿ, ಸ್ಥಿರಾಸ್ತಿ 30 ಕೋಟಿ, ಹೂಡಿಕೆ 69.79 ಕೋಟಿ, ಠೇವಣಿ 1.90 ಕೋಟಿ, ಸಾಲ ನೀಡಿಕೆ 17.6 ಕೋಟಿ, ಚಿನ್ನಾಭರಣ ಮೌಲ್ಯ 93.33 ಲಕ್ಷ, ಕೈಯಲ್ಲಿರುವ ನಗದು 32 ಲಕ್ಷ, ವಾರ್ಷಿಕ ಆದಾಯ 76.35 ಲಕ್ಷ, ಪಡೆದ ಸಾಲ 8.14 ಕೋಟಿ.
https://www.youtube.com/watch?v=1Dq6Z8Kr7xA
https://www.youtube.com/watch?v=EjLGOuNJ3AA
Discussion about this post