ಶಿವಮೊಗ್ಗ : ಮನೆಯಲ್ಲಿ ಪುಟ್ಟ ಮಕ್ಕಳಿದ್ರೆ ಸಾಕಷ್ಟು ಎಚ್ಚರವಾಗಿರಬೇಕು. ಒಂದು ನಿಟ್ಟಿನಲ್ಲಿ ಕಣ್ಣಿಗೆ ಎಣ್ಣೆ ಹಾಕಿ ಕಾಯಬೇಕು.
ಶಿವಮೊಗ್ಗದಲ್ಲಿ ವೀಳ್ಯದೆಲೆ ತಟ್ಟೆಯಲ್ಲಿದ್ದ ಅಡಿಕೆ ನುಂಗಿ ಮಗುವೊಂದು ಮೃತಪಟ್ಟಿದೆ.
ಇದನ್ನೂ ಓದಿ : ಟಿವಿ ಬಿದ್ದು ಮೃತಪಟ್ಟ ಮಗು…. ಗಡಿನಾಡಲ್ಲೊಂದು ದುರ್ಘಟನೆ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆದ್ದೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಮಗುವನ್ನು ಒಂದು ವರ್ಷದ ಶ್ರೀಹಾನ್ ಎಂದು ಗುರುತಿಸಲಾಗಿದೆ.
ಹೆದ್ದೂರಿನ ಅರ್ಚನಾ ಮತ್ತು ಸಂದೇಶ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಕೊರೋನಾ ಕಾರಣಕ್ಕೆ ಲಾಕ್ ಡೌನ್ ವಿಧಿಸಿದ ವೇಳೆ ತಾಯಿ ಮತ್ತು ಮಗುವನ್ನು ಹೆದ್ದೂರಿನಲ್ಲಿ ಬಿಟ್ಟಿದ್ದ ಸಂದೇಶ್ ಬೆಂಗಳೂರಿನಲ್ಲಿದ್ದರು.
ಕೊರೋನಾ ಕಾರಣದ ವ್ಯತಿರಿಕ್ತ ಪರಿಸ್ಥಿತಿಗಳು ಸಹಜ ಸ್ಥಿತಿ ಬರುತ್ತಿರುವ ಕಾರಣ ಈ ವಾರದಲ್ಲಿ ಮಗು ಮತ್ತು ಪತ್ನಿಯನ್ನು ಸಂದೇಶ್ ಬೆಂಗಳೂರಿಗೆ ಕರೆದುಕೊಂಡು ಹೋಗುವವರಿದ್ದರು.
ಆದರೆ ವಿಧಿಯಾಟವೇ ಬೇರೆಯಾಗಿತ್ತು. ಶನಿವಾರ ಬೆಳಗ್ಗೆ ಆಟವಾಡುತ್ತಿದ್ದ ಮಗು ಎಲೆ ಅಡಿಕೆ ತಟ್ಟೆಯಲ್ಲಿದ್ದ ಅಡಿಕೆಯನ್ನು ನುಂಗಿತ್ತು.
ಗಂಟಲಲ್ಲಿ ಅಡಿಕೆ ಸಿಕ್ಕಿ ಹಾಕಿಕೊಂಡ ಕಾರಣ ಉಸಿರುಗಟ್ಟಿದ ಮಗು ಒದ್ದಾಡಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.