ಚಿಕ್ಕಮಗಳೂರು : ಇತ್ತೀಚಿನ ದಿನಗಳಲ್ಲಿ ಕಳ್ಳರ ದರೋಡೆಕೋರರ ಹಾವಳಿ ಹೆಚ್ಚಾಗಿದೆ. ರಾತ್ರಿ ಹೊತ್ತಲ್ಲಿ ಮನೆಗೆ ನುಗ್ಗುತ್ತಿರುವ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಾರೆ.
ಇದೀಗ ರಾತ್ರಿ ಹೊತ್ತು ಬಿಡಿ, ಹಾಡ ಹಗಲೇ ದರೋಡೆ ಕೆಲಸ ನಡೆಯಲಾರಂಭಿಸಿದೆ. ಬಿಹಾರ, ಉತ್ತರ ಪ್ರದೇಶವನ್ನು ನೆನಪಿಸುವ ಘಟನೆಯೊಂದು ಇಂದು ಚಿಕ್ಕಮಗಳೂರಿನಲ್ಲಿ ನಡೆದಿದೆ.

ನಗರದ ಎಐಟಿ ಸರ್ಕಲ್ ನ ಬೈಪಾಸ್ ರಸ್ತೆ ಬಳಿಯಲ್ಲಿರುವ ಚಂದ್ರೇಗೌಡ ಅನ್ನುವವರ ಮನೆಗೆ ನುಗ್ಗಿದ್ದ ದರೋಡೆಕೋರರು ಲಕ್ಷಾಂತರ ರೂಪಾಯಿ ಹಣ ಹಾಗೂ ದೊಡ್ಡ ಮೊತ್ತದ ಚಿನ್ನಾಭರಣ ದೋಚಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ದರೋಡೆಕೋರರನ್ನು ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ಅಗ್ನಿಶಾಮಕದಳವೊಂದರ ವಾಹನ ಖದೀಮರ ಬೈಕ್ ಗೆ ಡಿಕ್ಕಿ ಕೂಡಾ ಹೊಡೆಯಿತು. ಈ ವೇಳೆ ಬೈಕ್ ಬಿಟ್ಟ ದರೋಡೆಕೋರರು ಓಡಿ ಹೋಗಿದ್ದಾರೆ.

ದರೋಡೆಕೋರರ ಕೈಯಲ್ಲಿ ಮಾರಕಾಸ್ತ್ರಗಳಿದ್ದ ಕಾರಣ ಸ್ಥಳೀಯರಿಗೆ ಅವರನ್ನು ಹಿಡಿಯಲು ಸಾಧ್ಯವಾಗಿಲ್ಲ.
ಈ ನಡುವೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ದರೋಡೆಕೋರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಳ್ಳರಿಗೆ ಲಾಠಿ ರುಚಿ ಅದ್ಯಾಕೋ ಸಾಕಾಗುತ್ತಿಲ್ಲ, ಪೊಲೀಸರ ರಿವಾಲ್ವರ್ ಗಳ ಭಯವಿದ್ರೆ ಇಂತಹ ಕೃತ್ಯಗಳು ನಡೆಯಲಾರದು
Discussion about this post