ತ್ವರಿತ ಚೆಕ್ cheque clearance ಕ್ಲಿಯರೆನ್ಸ್ ಗೆ RBI ನಿರ್ಧಾರ
ಬ್ಯಾಂಕ್ ಗಳಲ್ಲಿ cheque clearance ಚೆಕ್ ಕ್ಲಿಯರೆನ್ಸ್ ತಗುಲುತ್ತಿದ್ದ 3 ದಿನಗಳ ಅವಧಿಯನ್ನು 3 ಗಂಟೆಗೆ ಇಳಿಸುವ ಮಹತ್ವದ ನಿರ್ಧಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡಿದೆ. ಈ ನಿಯಮ ಶೀಘ್ರದಲ್ಲೇ ಜಾರಿಗೆ ಬರಲಿದ್ದು, ಇದರಿಂದ ಆರ್ಥಿಕ ವ್ಯವಹಾರಕ್ಕೆ ಸಾಕಷ್ಟು ಅನುಕೂಲವಾಗಲಿದೆ.
ಗುರುವಾರ ದ್ವೈ ಮಾಸಿಕ ಸಾಲ ನೀತಿ ಪ್ರಕಟಿಸಿದ RBI ಗವರ್ನರ್ ಶಕ್ತಿಕಾಂತ್ ದಾಸ್, ಹೊಸ ನಿಯಮದ ಪ್ರಕಾರ ಚೆಕ್ ಕ್ಲಿಯರಿಂಗ್ ಗೆ ಬೇಕಾಗಿರುವ 2 ರಿಂದ 3 ದಿನಗಳ ಅವಧಿಯನ್ನು ಕೆಲವೇ ಗಂಟೆಗಳಿಗೆ ಕಡಿತಗೊಳಿಸಲಾಗುವುದು ಅಂದಿದ್ದಾರೆ.
ಈಗ ಗ್ರಾಹಕರು ಸಲ್ಲಿಸಿದ ಚೆಕ್ ನಗದೀಕರಣಕ್ಕೆ Cheque Truncation System ( CTS) ಬಳಸಲಾಗುತ್ತಿದೆ.
ಇದರಿಂದ ಚೆಕ್ ನಗದೀಕರಣಕ್ಕೆ 2 ರಿಂದ 3 ದಿನ ಬೇಕಾಗಿತ್ತು. ಹೊಸ ನಿಯಮಗಳ ಪ್ರಕಾರ ಬ್ಯಾಂಕ್ ನ ಕೆಲಸ ಅವಧಿಯಲ್ಲೇ ಚೆಕ್ ಸ್ಕ್ಯಾನ್ ಮಾಡಿ ಸಂಬಂಧ ಪಟ್ಟ ಬ್ಯಾಂಕ್ ಗೆ ಅನ್ ಲೈನ್ ಮೂಲಕ ರವಾನಿಸಲಾಗುತ್ತದೆ. ಆ ಕಡೆಯಿಂದ ಮಾಹಿತಿ ಖಚಿತಗೊಂಡ ಬೆನ್ನಲ್ಲೇ ಗ್ರಾಹಕನ ಖಾತೆಗೆ ಹಣ ಜಮೆಯಾಗುತ್ತದೆ. ಇದರಿಂದ ಚೆಕ್ ವ್ಯವಹಾರ ಸುಲಭವಾಗುವುದಲ್ಲದೆ, ಚೆಕ್ ಮೂಲಕ ವ್ಯವಹಾರಕ್ಕೆ ಉತ್ತೇಜನ ನೀಡಿದಂತಾಗುತ್ತದೆ.
The Reserve Bank of India (RBI) has announced the establishment of a new cheque-clearing mechanism. The initiative, revealed by RBI Governor Shaktikanta Das during Monetary Policy Committee (MPC) announcements, is set to reduce the time required for cheque clearing to just a few hours, within the same day.