ಚಂದ್ರಯಾನ 2 ರ ಮಹತ್ವದ ಕ್ಷಣಗಳನ್ನು ವೀಕ್ಷಿಸಲು ಪ್ರಧಾನಿ ಮೋದಿಯವರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಯಲಹಂಕ ವಾಯುನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯಪಾಲ ವಾಜುಭಾಯ್ ವಾಲಾ ಹಾಗೂ ಸಂಪುಟ ಸಚಿವರು ಪ್ರಧಾನಿಗಳನ್ನು ಬರ ಮಾಡಿಕೊಂಡರು.
ಯಲಹಂಕ ವಾಯುನೆಲೆಯಿಂದ ನೇರ ಪ್ರಧಾನಿಗಳು ಇಸ್ರೋದ ಗೆಸ್ಟ್ ಹೌಸ್ ತೆರಳಿದ್ದು. ವಿಶ್ರಾಂತಿ ಬಳಿಕ ರಾತ್ರಿ 1.30ರ ವೇಳೆಗೆ ಇಸ್ರೋ ಕೇಂದ್ರಕ್ಕೆ ಆಗಮಿಸಲಿದ್ದಾರೆ. ಶನಿವಾರ ಮುಂಜಾನೆ 7 ಗಂಟೆವರೆಗೂ ಇಸ್ರೋ ಕೇಂದ್ರದಲ್ಲಿಯೇ ನರೇಂದ್ರ ಮೋದಿಯವರು ಇರಲಿದ್ದು. 9 ಗಂಟೆ ಸುಮಾರಿಗೆ ಮುಂಬೈಗೆ ಹಿಂತಿರುಗುತ್ತಾರೆ.
ರಾಚ್ರಿ 1.30 ರಿಂದ 2.30ರ ವೇಳೆಗೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಲಿದ್ದು, ಇದರ ನೇರ ಪ್ರಸಾರವನ್ನು ಪ್ರಧಾನಿ ಮೋದಿ ಅವರು ಮಕ್ಕಳೊಂದಿಗೆ ವೀಕ್ಷಿಸಲಿದ್ದಾರೆ.
ರಷ್ಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರು 12 ಗಂಟೆಗಳ ಹಿಂದಷ್ಟೇ ಭಾರತಕ್ಕೆ ಹಿಂತಿರುಗಿದ್ದರು.
ಈ ನಡುವೆ ಪ್ರಧಾನಿ ಇಸ್ರೋ ಭೇಟಿಯನ್ನು ಪ್ರತಿಪಕ್ಷ ಬೆಂಬಲಿದ ಪೇಜ್ ಗಳು ಟೀಕಿಸಿದ್ದು, ನೆರೆ ಕುರಿತ ವೀಕ್ಷಣೆಗೆ ಬಾರದ ಪ್ರಧಾನಿ ಚಂದ್ರಯಾನ ವೀಕ್ಷಣೆಗೆ ಬರುವ ಅಗತ್ಯವಿತ್ತ ಎಂದು ಪ್ರಶ್ನಿಸಿದೆ.
Discussion about this post