ಚಂದ್ರನ ಮೇಲೆ ಮತ್ತೊಮ್ಮೆ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸದೇ ಬಿಡುವುದಿಲ್ಲ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಶಪಥಗೈದಿದ್ದಾರೆ.
ಐಐಟಿ ದೆಹಲಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವನ್ ಇಸ್ರೋ ತನ್ನೆಲ್ಲಾ ಅನುಭವ , ಜ್ಞಾನ ಮತ್ತು ತಾಂತ್ರಿಕ ಶಕ್ತಿಯನ್ನು ಧಾರೆ ಎರೆಯಲಿದೆ ಎಂದು ತಿಳಿಸಿದ್ದಾರೆ.
Offer : Get upto 75% off on Home Products
ಚಂದ್ರಯಾನ 2 ಮುಗಿದ ಅಧ್ಯಾಯವಲ್ಲ ಎಂದಿರುವ ಕೆ ಶಿವನ್. ಚಂದ್ರನ ದಕ್ಷಿಣ ಧೃವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವುದಾಗಿ ತಿಳಿಸಿದ್ದಾರೆ.
ಈ ಸಲುವಾಗಿ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು. ಈ ಮೂಲಕ ದಕ್ಷಿಣ ಧೃವದಲ್ಲಿ ನೌಕೆ ಮತ್ತೊಮ್ಮೆ ಪ್ರಯಾಣ ಬೆಳೆಸುವುದು ಖಚಿತ ಅಂದಿದ್ದಾರೆ.
Discussion about this post