Sunday, June 13, 2021
spot_img

ಮಾಸ್ಕ್ ಧರಿಸಿ ಮನೆಯಲ್ಲೇ ಮದುವೆಯಾದ ಚಂದನ್ ಕವಿತಾ

Must read

- Advertisement -
- Advertisement -

ಕನ್ನಡ ಕಿರುತೆರೆಯ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಯಶಸ್ವಿ ಜೋಡಿ  ಚಂದು ಮತ್ತು ಚಿನ್ನು ಖ್ಯಾತಿಯ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಅಧಿಕೃತವಾಗಿ ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ.

ಇದನ್ನೂ ಓದಿ : ಇದು ಏಪ್ರಿಲ್ ಫೂಲ್ ಅಲ್ಲ.. ದೊನ್ನೆ ಬಿರಿಯಾನಿ ಮಾಲಕನೊಂದಿಗೆ ಕವಿತಾ ಮದುವೆ…

ಮೇ 14 ಚಂದನ್ ಮತ್ತು ಕವಿತಾ ಗೌಡ ಅವರ ವಿವಾಹ ತುಂಬ ಸರಳವಾಗಿ ನಡೆದಿದ್ದು. ನೂತನ ದಂಪತಿ ಮಾಸ್ಕ್ ಧರಿಸಿಯೇ ಮದುವೆಯಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ತಾಳಿ ಕಟ್ಟುವ ಸಂದರ್ಭದಲ್ಲೂ ಇಬ್ಬರೂ ಮಾಸ್ಕ್ ಧರಿಸಿದ್ದರು. ಬೆಂಗಳೂರಿನ ಸಹಕಾರ ನಗರದಲ್ಲಿರುವ ಚಂದನ್ ಮನೆಯಲ್ಲಿ ಈ ಮದುವೆ ಸರವಾಗಿ ನೆರವೇರಿದೆ.

ಕೊರೊನಾ ಲಾಕ್‌ಡೌನ್ ಕಾರಣ ಕೇವಲ ಕುಟುಂಬ ಸದಸ್ಯರಿಗೆ ಹಾಗೂ ತುಂಬಾ ಆತ್ಮೀಯರನ್ನು ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಇತ್ತೀಚೆಗೆ ಇವರಿಬ್ಬರು ರಿಯಾಲಿಟಿ ಶೋ ಒಂದರಲ್ಲಿ ಪಾಲ್ಗೊಳ್ಳುತ್ತಿರುವ ಕಾರಣ ಅಲ್ಲಿನ ಕೆಲ ಸಹಸ್ಪರ್ಧಿಗಳು ವಿವಾಹ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇದನ್ನೂ ಓದಿ : ಇಂದು ನಡೆದಿದ್ದು ಮದುವೆಯಲ್ಲ ನಿಶ್ಚಿತಾರ್ಥ – ಉಂಗುರ ಬದಲಾಯಿಸಿದ ಚಂದನ್ ಮತ್ತು ಕವಿತಾಗೌಡ

ಏಪ್ರಿಲ್ ಒಂದರಂದು ಚಂದನ್ ಹಾಗೂ ಕವಿತಾ ಅವರ ನಿಶ್ಚಿತಾರ್ಥ ಕಾರ್ಯಕ್ರಮವು ನೆರವೇರಿತ್ತು.

- Advertisement -
- Advertisement -spot_img
- Advertisement -spot_img

Latest article