ಚಾಮರಾಜನಗರ : ಕೊರೋನಾ ಸೋಂಕಿನ ಎರಡನೆ ಅಲೆಯ ಈ ಹೊತ್ತಿನಲ್ಲಿ ಶಾಲಾ ಕಾಲೇಜು, ಹಾಸ್ಟೆಲ್ ಗಳೇ ಹಾಟ್ ಸ್ಪಾಟ್ ಗಳಾಗಿ ಕಾಣಿಸಿಕೊಳ್ಳುತ್ತಿದೆ.
ಮುಂದಿನ ದಿನಗಳಲ್ಲಿ ಇದೇ ಹಾಟ್ ಸ್ಪಾಟ್ ಗಳಿಂದ ಕೊರೋನಾ ಸೋಂಕು ಬೀದಿ ಬೀದಿಗೂ ಹರಡಿದರೂ ಅಚ್ಚರಿ ಇಲ್ಲ.
ಈ ನಡುವೆ ವಿದ್ಯಾರ್ಥಿಯೊಬ್ಬನಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿಯ ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಿಸಲಾಗಿದೆ.
ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗೆ ಸೋಂಕು ತಗಲಿರೋ ಶುಕ್ರವಾರ ಬೆಳಗ್ಗೆ ಗೊತ್ತಾಗಿದೆ.
ಕಾಲೇಜಿನ ಪ್ರಥಮ ಪಿಯುಸಿ ವಿಭಾಗದಲ್ಲಿ ಒಟ್ಟು 142 ವಿದ್ಯಾರ್ಥಿಗಳಿದ್ದು, ದ್ವಿತೀಯ ಪಿಯುಸಿಯಲ್ಲಿ 91 ವಿದ್ಯಾರ್ಥಿಗಳಿದ್ದಾರೆ.
ಕಾಲೇಜಿಗೆ ರಜೆ ನೀಡಿದ ಬೆನ್ನಲ್ಲೇ ತರಗತಿಗಳನ್ನು ಸ್ಯಾನಿಟೈಸೇಶನ್ ಮಾಡಿಸಲಾಗುತ್ತಿದೆ.
ಜೊತೆಗೆ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳ ಗಂಟಲು ಮಾದರಿ ಪರೀಕ್ಷೆ ಮಾಡಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
Discussion about this post