ಬೆಂಗಳೂರು : ಕೃಷಿ ಇಲಾಖೆಯ ಯೋಜನೆಗಳನ್ನು, ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸಲು, ರೈತರಿಗೆ ಹಾಗೂ ವಿಶೇಷವಾಗಿ ಯುವಜನತೆಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಕೃಷಿ ಕಾಯಕದ ರಾಯಭಾರಿಯಾಗಿ ದರ್ಶನ್ ಪದಗ್ರಹಣ ಸಮಾರಂಭ ಇಂದು ನಡೆಯಿತು.
ಯಾವುದೇ ಸಂಭಾವನೆ ಪಡೆಯದೆ ಕನ್ನಡಿಗರ ಪ್ರೀತಿಯ ಡಿಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಯಭಾರಿ ಕಾರ್ಯಕ್ಕೆ ಹೆಗಲು ಕೊಟ್ಟಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಈ ನಡುವೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ನಟನಾದರೂ ದರ್ಶನ್ ಕೃಷಿಕರಾಗಿದ್ದಾರೆ. ಎಸ್ಟೇಟ್ ನಲ್ಲಿ ಕೃಷಿ ದುಡಿಮೆ ಮಾಡುವುದರ ಜೊತೆಗೆ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ.
ತಾವಾಗಿಯೇ ಯಾವುದೇ ಸಂಭಾವನೇ ಇಲ್ಲದೆ ಕೃಷಿ ಇಲಾಖೆಯ ರಾಯಭಾರಿಯಾಗಿ ಒಪ್ಪಿಕೊಂಡಿರುವುದು ಸಂತೋಷ ತಂದಿದ್ದು, ಆರೂವರೆ ಕೋಟಿ ಜನರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಅಂದರು.
ವಿಧಾನಸೌಧದ ಒಳಗಡೆ ಸೇರಿರುವ ಜನ ನೋಡಿದ್ರೆ ವಿಧಾನಸೌಧದ ಹೊರಗಡೆ ಕಾರ್ಯಕ್ರಮ ನಡೆಸಿದ್ರೆ 50 ಸಾವಿರ ಜನ ಸೇರುತ್ತಿದ್ದರು. ಇದು ದರ್ಶನ್ ಅವರ ಜನಪ್ರಿಯತೆಗೆ ಸಾಕ್ಷಿ ಅಂದ ಸಿಎಂ ರಾಬರ್ಟ್ 11 ಕ್ಕೆ ಬಿಡುಗಡೆಯಾಗುತ್ತಿದೆ. ನಾನು ಆ ಚಿತ್ರವನ್ನು ನೋಡುತ್ತೇನೆ ಅಂದಿದ್ದಾರೆ.