Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಕರ್ನಾಟಕದ ಬಿಜೆಪಿ ಸಂಸದರ ವಿರುದ್ಧ ತಿರುಗಿ ಬಿದ್ದರಂತೆ…ಚಕ್ರವರ್ತಿ ಸೂಲಿಬೆಲೆ

Radhakrishna Anegundi by Radhakrishna Anegundi
June 26, 2019
in ಟಾಪ್ ನ್ಯೂಸ್
Share on FacebookShare on TwitterWhatsAppTelegram

ಕರುನಾಡಿನ ಯುವಕರ ಪಾಲಿಗೆ ಆಶಾ ಕಿರಣ ಅನ್ನುವಂತೆ ಗೋಚರಿಸಿರುವ ಶಕ್ತಿ ಅಂದ್ರೆ ಅದು ಚಕ್ರವರ್ತಿ ಸೂಲೆಬೆಲೆ. ರಾಜಕೀಯ ಅನ್ನುವ ಕೆಸರನ್ನು ತನ್ನ ಕೈಗೆ ಮೆತ್ತಿಕೊಳ್ಳದೆ ಮುನ್ನಡೆಯುವ ಕಾರಣಕ್ಕೆ ಸೂಲಿಬೆಲೆ ಇಷ್ಟವಾಗುತ್ತಾರೆ.

ಹಾಗಂತ ಅವರಿಗೆ ರಾಜಕೀಯ ಗೆಳೆಯರಿಲ್ಲವೇ… ಪ್ರತಾಪ್ ಸಿಂಹ, ಬೆಂಗಳೂರು ದಕ್ಷಿಣದಿಂದ ಗೆದ್ದಿರುವ ತೇಜಸ್ವಿ ಸೇರಿ ಅನೇಕರು ಸೂಲಿಬೆಲೆ ಗೆಳೆಯರೇ.

ಆದರೆ ಇದೀಗ ಲೈಟಾಗಿ ಚಕ್ರವರ್ತಿ ಸೂಲೆಬೆಲೆ ಬಿಜೆಪಿ ಸಂಸದರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದು ಕಾಣಿಸಿಕೊಂಡಿದ್ದು, ಅವರು ಇಂದು ಸಂಯುಕ್ತ ಕರ್ನಾಟಕದಲ್ಲಿ ಬರೆದಿರುವ ಅಸಲಿ ಮಿರ್ಚಿ ಅಂಕಣ.

ನಾಲ್ಕು ಲಕ್ಷ ಮತಗಳ ಅಂತರದಿಂದ ಗೆದ್ದವರೂ ನಲವತ್ತೇ ಸಾವಿರ ಮತಗಳ ಅಂತರದಿಂದ ಗೆದ್ದವರು ಎಲ್ಲರೂ ಮೋದಿ ಮತಭಿಕ್ಷೆಯ ಫಲಾನುಭವಿಗಳೇ. ಮೋದಿಯೊಬ್ಬರಿಲ್ಲದೇ ಹೋಗಿದ್ದರೆ ಕರ್ನಾಟಕದ ಬಹುತೇಕ ಸಂಸದರ ಪರಿಸ್ಥಿತಿ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್ ಮುನಿಯಪ್ಪನವರಿಗಿಂತಲೂ ಭಿನ್ನವಾಗಿರುತ್ತಿರಲಿಲ್ಲ. ಸೋಲು ಹೀನಾಯವಾಗಿರುತ್ತಿತ್ತು ಅನ್ನುವ ಮೂಲಕ ಕರ್ನಾಟಕದಿಂದ ಗೆದ್ದ ಬಿಜೆಪಿ ಸಂಸದರೇ ನಿಮ್ಮ ಗೆಲ್ಲುವ ತಾಕತ್ತು ಎಷ್ಟಿತ್ತು ಅನ್ನುವುದನ್ನು ಒಂದ್ಸಲ ನೋಡಿಕೊಳ್ಳಿ ಅಂದಿದ್ದಾರೆ.

ಹಾಗಾದ್ರೆ ಚಕ್ರವರ್ತಿ ಸೂಲಿಬೆಲೆ ತಿರುಗಿ ಬೀಳಲು ಕಾರಣವೇನು ಅನ್ನುವುದನ್ನು ಮುಂದೆ ಹೇಳ್ತಿವಿ. ಅದಕ್ಕಿಂತ ಮುಂಚೆ ಸೂಲಿಬೆಲೆ ಅಂಕಣದಲ್ಲಿ ಏನು ಬರೆದುಕೊಂಡಿದ್ದರು ಅನ್ನುವುದನ್ನು ಓದಿಕೊಳ್ಳಿ.

ಮೋದಿಯ ಹೆಸರಲ್ಲಿ ಚುನಾವಣೆ ಗೆದ್ದ ಎಲ್ಲಾ ಸಂಸದರೂ ಆರಂಭದಲ್ಲಿ ಬೀಗಿದ್ದಂತೂ ನಿಜವೇ. 25 ಸೀಟುಗಳನ್ನು ಜನ ಭಾಜಪಕ್ಕೆ ಕೊಟ್ಟಿದ್ದು ಮೋದಿಯವರ ಹೆಸರು ಹೇಳಿ ಎಂಬುದರಲ್ಲಿ ಅನುಮಾನ ಜನರಿಗಲ್ಲ, ಆಯ್ಕೆಯಾದವರಿಗೂ ಇಲ್ಲ. ಆಡಳಿತ ವಿರೋಧಿ ಅಲೆ ಬಹುತೇಕ ಕರ್ನಾಟಕದ ಎಲ್ಲಾ ಅಭ್ಯರ್ಥಿಗಳಿಗೂ ಇತ್ತು. ಕಳೆದ ಬಾರಿ 17 ಸೀಟುಗಳನ್ನು ಗೆದ್ದುಕೊಂಡ ಭಾಜಪಕ್ಕೆ ಹದಿನೇಳೂ ತಲೆನೋವಿನ ಕ್ಷೇತ್ರವೇ ಆಗಿತ್ತು.

ಉಡುಪಿಯಲ್ಲಿ ಶೋಭಾ ಕರಂದ್ಲಾಜೆ, ಮಂಗಳೂರಿನಲ್ಲಿ ನಳಿನ್ ಕುಮಾರ್, ಉತ್ತರ ಕನ್ನಡದಲ್ಲಿ ಅನಂತ ಕುಮಾರ್ ಹೆಗ್ಡೆ, ಬೆಂಗಳೂರು ಉತ್ತರದ ಸದಾನಂದಗೌಡ. ಇನ್ನು ಉತ್ತರ ಭಾಗದಲ್ಲಿ ಕಾಲಿಟ್ಟರೆ ಕೊಪ್ಪಳ ಕ್ಷೇತ್ರದಲ್ಲೂ ಭಾಜಪ ವಿರೋಧಿ ಅಲೆ ಜೋರಾಗಿಯೇ ಇತ್ತು. ಪ್ರತಾಪ್ ಸಿಂಹನ ಗೆಲುವೂ ಕೂಡ ಸುಲಭ ಸಾಧ್ಯವಾದುದೇನಾಗಿರಲಿಲ್ಲ. ಜೊತೆಗೆ ಘಟಬಂಧನ್ ಮಾಡಿಕೊಂಡು ಒಟ್ಟಾದ ಕಾಂಗ್ರೆಸ್ ದಳಗಳ ಬಿಜೆಪಿ ಸೋಲಿಸುವ ಪಿತೂರಿ ರಾಜಕಾರಣ ಬೇರೆ!

ನಾಲ್ಕು ಲಕ್ಷ ಮತಗಳ ಅಂತರದಿಂದ ಗೆದ್ದವರೂ ನಲವತ್ತೇ ಸಾವಿರ ಮತಗಳ ಅಂತರದಿಂದ ಗೆದ್ದವರು ಎಲ್ಲರೂ ಮೋದಿ ಮತಭಿಕ್ಷೆಯ ಫಲಾನುಭವಿಗಳೇ. ಮೋದಿಯೊಬ್ಬರಿಲ್ಲದೇ ಹೋಗಿದ್ದರೆ ಕರ್ನಾಟಕದ ಬಹುತೇಕ ಸಂಸದರ ಪರಿಸ್ಥಿತಿ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್ ಮುನಿಯಪ್ಪನವರಿಗಿಂತಲೂ ಭಿನ್ನವಾಗಿರುತ್ತಿರಲಿಲ್ಲ. ಸೋಲು ಹೀನಾಯವಾಗಿರುತ್ತಿತ್ತು. ಹಾಗಂತ ಗೆಲುವು ಮೋದಿಯವರ ಹೆಸರಿಗಷ್ಟೇ ಅಲ್ಲ.

ಅದು ಅವರು ಮಾಡಿದ ಕೆಲಸಕ್ಕೆ, ತೆಗೆದುಕೊಂಡ ನಿರ್ಣಯಗಳಿಗೆ, ರಾಷ್ಟ್ರಹಿತಕ್ಕೆ ಬದ್ಧವಾದ ಅವರ ಬದುಕಿನ ರೀತಿ-ನೀತಿಗಳಿಗೆ. ಕರ್ನಾಟಕದ ಸಂಸದರಿಗೆ ಈಗಿರುವ ದೊಡ್ಡ ಸವಾಲು ಇದೇ. ತಮ್ಮದಲ್ಲದ ಗೆಲುವನ್ನು ಅವರು ಧಿಮಾಕಿನಿಂದ ಸಂಭ್ರಮಿಸುವಂತೆಯೇ ಇಲ್ಲ. ಸದಾ ವಿನೀತರಾಗಿ ತಮ್ಮ ಗೆಲುವನ್ನು ಭಾಜಪದ ರಾಷ್ಟ್ರಮಟ್ಟದ ಸಾಧನೆಗಳಿಗೆ ಮತ್ತು ಜನಸಾಮಾನ್ಯರ ರಾಷ್ಟ್ರಭಕ್ತಿಯ ಪದತಲಕ್ಕೆ ಸಮರ್ಪಿಸಿ ಮುಂದಿನ ಐದು ವರ್ಷ ಅವಡುಗಚ್ಚಿ ಕೆಲಸ ಮಾಡಿದರುಂಟು. ಇಲ್ಲವಾದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಕೇಳುವ ಚುಚ್ಚುನುಡಿಯನ್ನು ಸಹಿಸಿಕೊಳ್ಳುವುದು ಅಸಾಧ್ಯವೇ ಸರಿ. ಅಂಥದ್ದರಲ್ಲೂ ಭಾಜಪದ ಸಂಸದರ ಧಿಮಾಕನ್ನು ಮೆಚ್ಚಲೇಬೇಕು.

ಉಡುಪಿಯಲ್ಲಿ ತನ್ನ ಗೆಲುವು ಸ್ವಯಂ ವರ್ಚಸ್ಸಿನದ್ದೆಂದು ಯಡಿಯೂರಪ್ಪ ಅವರೇ ಹೇಳಿದರೂ ಶೋಭಾ ಕರಂದ್ಲಾಜೆ ಅಲ್ಲಗಳೆಯಲೇಬೇಕು. ಏಕೆಂದರೆ ಆಕೆಗೆ ಟಿಕೆಟ್ ಕೊಟ್ಟರೆ ಕೆಲಸ ಮಾಡುವುದಿಲ್ಲವೆಂದು ಕಾರ್ಯಕರ್ತರು ಹೇಳಿಯಾಗಿತ್ತು. ಮಂಗಳೂರು ಗೆಲ್ಲುವುದು ಕಷ್ಟವಲ್ಲ, ಉಡುಪಿ ಸಾಧ್ಯವಿಲ್ಲ ಎಂಬುದು ಭಾಜಪ ಕಾರ್ಯಕರ್ತರ ಹೇಳಿಕೆಯಾಗಿಬಿಟ್ಟಿತ್ತು. ಬೆಂಗಳೂರು ಉತ್ತರದ ಪರಿಸ್ಥಿತಿ ಏನು ಭಿನ್ನವಲ್ಲ.

ಬಿಜೆಪಿಯ ಆಂತರಿಕ ಸರ್ವೇ 22 ಸೀಟು ಗೆಲ್ಲುತ್ತೇವೆ ಎಂದು ಪದೇ ಪದೇ ಹೇಳುತ್ತಿತ್ತಲ್ಲ, ಅದರಲ್ಲಿ ಕಲಬುರಗಿ , ತುಮಕೂರು, ಕೋಲಾರಗಳಿದ್ದವು. ಬೆಂಗಳೂರು ಉತ್ತರವೇ ಇರಲಿಲ್ಲ. ಸದಾನಂದಗೌಡರು ಈ ಹಿಂದಿನ ಐದು ವರ್ಷಗಳಲ್ಲಿ ಮಾಡಿದ್ದಕ್ಕಿಂತ ಮಾಡದೇ ಉಳಿದದ್ದೇ ಹೆಚ್ಚು. ಅನಂತ್ ಕುಮಾರ್ ಅವರನ್ನು ನೇಪಥ್ಯಕ್ಕೆ ಸರಿಸಲೆಂದೇ ಕೇಂದ್ರ ಸರ್ಕಾರದಲ್ಲಿ ಕೊಟ್ಟ ಮಹತ್ವದ ರೈಲ್ವೇ ಇಲಾಖೆಯನ್ನು ಅವರಿಂದ ಉಳಿಸಿಕೊಳ್ಳಲಾಗಲಿಲ್ಲ.

ರೈಲ್ವೇಯ ಊಟೋಪಚಾರದ ವಿಚಾರದಲ್ಲಿ ಒಂದಷ್ಟು ಅನವಶ್ಯಕ ಒಪ್ಪಂದಗಳಲ್ಲಿ ಮೂಗು ತೂರಿಸುತ್ತಿದ್ದಾರೆಂದು ಗೊತ್ತಾದೊಡನೆ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಅತ್ಯಂತ ಪ್ರಮುಖವಾದ ರೈಲ್ವೇ ಇಲಾಖೆಯಿಂದ ಅವರನ್ನು ಎತ್ತಂಗಡಿ ಮಾಡಿ ಕಳಿಸಿದ್ದು ಯಾವ ಇಲಾಖೆಗೆಂದು ಇಂದು ಅವರಿಗೂ ನೆನಪಿರಲಿಕ್ಕಿಲ್ಲ.ಇತ್ತ ಎತ್ತಿನಹೊಳೆ ವಿಚಾರದಲ್ಲಿ ಮೂಗುತೂರಿಸಿ ತನಗೆ ಜೀವನಕೊಟ್ಟ ದಕ್ಷಿಣ ಕನ್ನಡಕ್ಕೆ ಹೋಗಲಾರದ ಸ್ಥಿತಿಗೆ ತಲುಪಿಬಿಟ್ಟರು.

ಇದಕ್ಕೂ ಮುನ್ನ ಯಡ್ಯೂರಪ್ಪನವರ ಕೃಪಾ ಕಟಾಕ್ಷದಿಂದ ಸಿಎಂ ಹುದ್ದೆ ಪಡೆದು ಅಲ್ಲಿ ನಡೆಸಿದ ಹಿಮ್ಮೇಳದ ಕಾರಣದಿಂದಾಗಿ ಅಧಿಕಾರವನ್ನೂ ಕಳೆದುಕೊಂಡರು. ಎಲ್ಲಿಯವರೆಗೂ ಈ ಸ್ಥಿತಿ ಮುಂದುವರೆದಿತ್ತೆಂದರೆ ಈ ಬಾರಿ ಅವರಿಗೆ ಸೀಟು ಸಿಗುವುದೇ ಅನುಮಾನವಾಗಿತ್ತು. ಕೊನೆಗೂ ಮೋದಿಯ ಹೆಸರಲ್ಲಿ ಗೆದ್ದು ಈಗ ಅವರು ಹೇಳುತ್ತಿರುವುದೇನು ಗೊತ್ತೇ? ಹೆಸರಿನ ಮುಂದೆ ಇದ್ದ ಜಾತಿ ಸೂಚಕ ಪದದ ಕಾರಣದಿಂದಾಗಿಯೇ ತಾನು ಮಂತ್ರಿಯಾಗಲು ಸಾಧ್ಯವಾಗಿದ್ದು ಅಂತ.

ಇದು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿಗೆ ಬಲು ಅಸಹ್ಯಕರವಾದ ಸಂಗತಿ. ಸದಾನಂದಗೌಡರ ರಾಜಕೀಯ ಇತಿಹಾಸ ನೋಡಿದವರಿಗೆ ಈ ಹೇಳಿಕೆ ಅಚ್ಚರಿಯದ್ದೇನೂ ಅನಿಸುವುದಿಲ್ಲ. ಆದರೆ ಒಟ್ಟಾರೆ ನರೇಂದ್ರಮೋದಿಯವರನ್ನು ಮುಂದಿಟ್ಟುಕೊಂಡು ಗಮನಿಸುವವರಿಗೆ ಈ ಹೇಳಿಕೆ ಗಾಬರಿ ಹುಟ್ಟಿಸುವಂಥದ್ದೇ. ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಪ್ರತಿಕ್ರಿಯೆ ಮತ್ತದೇ ಕಿಚ್ಚುಮಾತುಗಳದ್ದು. ಮೋದಿಯ ಹೆಸರಿನಿಂದ ಗೆದ್ದು ಮಂತ್ರಿಯಾಗಿ ಬೀಗಬೇಡಿ ಎಂಬುದು ಎಲ್ಲಾ ದಿಕ್ಕಿನಿಂದಲೂ ಕೇಳಿಬಂತು. ತಕ್ಷಣಕ್ಕೆ ಸದಾನಂದಗೌಡರು ಕ್ಷಮೆ ಕೇಳಿ ಬಚಾವಾಗಿಬಿಟ್ಟರು. ಇಲ್ಲವಾದಲ್ಲಿ ಅವರ ಈ ಹೇಳಿಕೆ ಧರ್ಮದ ಸಮಗ್ರತೆ ಮತ್ತು ಅಖಂಡತೆಗಳಿಗೆ ಬಲುದೊಡ್ಡ ಹೊಡೆತ ತರಬಲ್ಲುದಾಗಿತ್ತು!

ಇತ್ತ ಎಮರ್ಜೆನ್ಸಿ ಆಸ್ಪತ್ರೆಗಾಗಿ ಉತ್ತರಕನ್ನಡದ ಜನ ಹೋರಾಟ ನಡೆಸುತ್ತಿದ್ದು ಸಂಸ ಅನಂತ ಕುಮಾರ್ ಅವರನ್ನು ಭೇಟಿ ಮಾಡಿದರೆ, ರಾಜ್ಯಕ್ಕೆ ಸೇರಿದ ಕೆಲಸ ತಾನು ಮಾಡಲಾರೆ ರಾಜ್ಯ ನನ್ನ ಬಳಿಗೆ ಬಂದರೆ ಕೇಂದ್ರ ಸರ್ಕಾರದ ಸಹಾಯ ಕೊಡಿಸಬಲ್ಲೆ ಎಂದು ಹೇಳಿ ಮನವಿಪತ್ರ ಕೊಡಲು ಬಂದ ಯುವಕರ ಮುಂದೆ ತಮ್ಮ ಹುಲಿ ರೂಪವನ್ನು ತೋರಿಸಿದ್ದಾರೆ.

ರಾಜ್ಯ ಮತ್ತು ಕೇಂದ್ರದ ತಾಕಲಾಟಗಳ ನಡುವೆ ಉತ್ತರ ಕನ್ನಡ ಬಡವಾಗುತ್ತಿದೆಯಲ್ಲಾ ಇದನ್ನು ಸರಿಪಡಿಸುವುದು ಯಾರು? ಒಬ್ಬ ಸಂಸದನಾಗಿ ಆರಾರು ಬಾರಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವವ ರಾಜ್ಯ ಸರ್ಕಾರಕ್ಕೆ ಕೇಳಲಾಗದಷ್ಟು ದೈನೇಸಿ ಸ್ಥಿತಿಯಲ್ಲಿರುತ್ತಾನಾ? ಇದು ನನ್ನ ಪಾಲಿಗೆ ಬಲುದೊಡ್ಡ ಪ್ರಶ್ನೆ. ಈ ಕುರಿತಂತೆ ಪ್ರಶ್ನಿಸಿದ ಪತ್ರಕರ್ತರ ಮೇಲೆ ಸಂಸದರು ಹರಿಹಾಯ್ದಿರುವುದು ನೋಡಿದರೆ ಇದು ಒಳ್ಳೆಯ ಬೆಳವಣಿಗೆಯಲ್ಲ.

ಇವರೆಲ್ಲರಿಗೂ ಗೆದ್ದು ಕೂತು ತಿಂದು ಅಭ್ಯಾಸವಾಗಿ ಹೋಗಿದೆ. ವೋಟು ಹಾಕಿದ ಮತದಾರ ಪ್ರಭು ಇವರೆಲ್ಲರನ್ನೂ ಮೈಬಗ್ಗಿಸಿ ದುಡಿಯುವಂತೆ ಮಾಡುವ ಸಮಯ ಈಗ ಬಂದಿದೆ. ಮೋದಿಯವರು ಹಗಲೂ-ರಾತ್ರಿ ಕೆಲಸ ಮಾಡುತ್ತಾ ಇವರು ಮಾತ್ರ ಉಂಡು ಕೊಬ್ಬಿ ಏನೂ ಕೆಲಸ ಮಾಡದೇ ಮತ್ತೊಮ್ಮೆ ಮೋದಿಯವರ ಹೆಸರು ಹೇಳಿ ಗೆಲ್ಲುವುದಕ್ಕೆ ಪ್ರಜೆಗಳಾಗಿ ನಾವು ಬಿಡಬಾರದು. ರಾಷ್ಟ್ರನಿಮರ್ಾಣದ ಕೆಲಸದಲ್ಲಿ ನಾವು ಭಾಗಿಯಾಗಬೇಕು, ಇವರೂ ಭಾಗಿಯಾಗುವಂತೆ ಮಾಡಬೇಕು. ಆಗಲೇ ಹೊಸಭಾರತ ನಿರ್ಮಾಣವಾಗೋದು.

-ಚಕ್ರವರ್ತಿ ಸೂಲಿಬೆಲೆ

ShareTweetSendShare

Discussion about this post

Related News

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

Heart attack : ಸಮಾರಂಭದಲ್ಲಿ ಫೋಟೋ ತೆಗೆಯುತ್ತಿದ್ದಾಗಲೇ ಫೋಟೋಗ್ರಾಫರ್ ಗೆ ಹೃದಯಾಘಾತ

Dhananjay police: ಆರು ತಿಂಗಳ ಹಿಂದಷ್ಟೇ ಇನ್ಸ್ ಪೆಕ್ಟರ್ ಪಟ್ಟ ಅಲಂಕರಿಸಿದ್ದ ಅಧಿಕಾರಿಯ ಪ್ರಾಣ ತಿಂದ ಕ್ಯಾನ್ಸರ್

Latest News

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

Pen drive Arrest bengaluru-woman-loses-pen-drive-with-private-photos-blackmailer-demands

Pen drive Arrest : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೋದವನ ಬಂಧನ

tirumala

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್