ಮೊನ್ನೆ ಮೊನ್ನೆ ಕೊಟ್ಟಿಗೆ ಹಾರದಲ್ಲಿ ಮಂಗನೊಂದು ಆಟೋರಿಕ್ಷಾ ಚಾಲಕನನ್ನು ಪೀಡಿಸಿದ ಸುದ್ದಿಯನ್ನು ಓದಿದ್ದೇವೆ. ಅದರ ಬೆನ್ನಲ್ಲೇ ಹಣ ತುಂಬಿದ ಬ್ಯಾಗ್ ಅನ್ನು ಮಂಗ ಎಗರಿಸಿದ್ದ ಸುದ್ದಿಯನ್ನು ಓದಿದ್ದೇವೆ. ಆದರೆ ಇದೀಗ ರಾಷ್ಟ್ರ ರಾಜಧಾನಿಯಿಂದ ಮಂಗ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಶಾಕಿಂಗ್ ಸುದ್ದಿ ಬಂದಿದೆ.
ನಬಿ ಕರೀಮ್ ಪ್ರದೇಶದಲ್ಲಿ ಕಳೆದ ಮಂಗಳವಾರ ಈ ಘಟನೆ ನಡೆದಿದ್ದು, ಮೃತರನ್ನು ಮೊಹಮ್ಮದ್ ಕುರ್ಬಾನ್ ಎಂದು ಗುರುತಿಸಲಾಗಿದೆ. ನಬಿ ಕರೀಮ್ ಪ್ರದೇಶದಲ್ಲಿರುವ ಕಟ್ಟಡದ ಎರಡನೇ ಮಹಡಿಯಲ್ಲಿದ್ದ ಮಂಗ ಇಟ್ಟಿಗೆಯೊಂದನ್ನು ಕೆಳಗೆ ಎಸೆದಿದೆ. ಇದು ಕಟ್ಟಡ ಕೆಳಗೆ ನಿಂತಿದ್ದ ಮೊಹಮ್ಮದ್ ಕುರ್ಬಾನ್ (30) ತಲೆಗೆ ಬಡಿದು ಕುಸಿದು ಬಿದ್ದಿದ್ದಾರೆ.
ಇದನ್ನೂ ಓದಿ : ಕೊಟ್ಟಿಗೆಹಾರದಲ್ಲಿ ಮತ್ತೆ ಪ್ರತ್ಯಕ್ಷವಾದ ಮಂಗ : ಆಟೋ ಚಾಲಕನಿಗೆ ಇನ್ನೇನು ಕಾದಿದೆಯೋ
ತಕ್ಷಣ ಅವರನ್ನು ಸ್ಥಳೀಯ RML ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ. ಆದರೆ ಅಷ್ಟು ಹೊತ್ತಿಗಾಗಲೇ ಅವರು ಮೃತಪಟ್ಟಿದ್ದರು.
ಆರ್.ಎಂ.ಎಲ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಸತ್ತಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ವರದಿ ಮಾಡಿದೆ. ಇದೀಗ ಮೊಹಮ್ಮದ್ ಕುರ್ಬಾನ್ ಸಾವಿಗೆ ಕಾರಣರಾದ ಅಪರಿಚಿತ ವ್ಯಕ್ತಿಗಳ ವಿರುದ್ಧ FIR ದಾಖಲಿಸಲಾಗಿದೆ.
Discussion about this post