Monday, April 19, 2021

ತಂದೆ ತಾಯಿ ಜೊತೆ ಮಾತನಾಡಬೇಕು ಅಂದ ಸಿಡಿ ಲೇಡಿಗೆ ಶಾಕ್ ಕೊಟ್ಟ SIT….

Must read

- Advertisement -
- Advertisement -

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ಸಿಡಿ ಲೇಡಿಯ ವಿಚಾರಣೆಯನ್ನು ಮುಂದುವರಿಸಿದೆ. ಮತ್ತೊಂದು ಕಡೆ ಮಾಜಿ ಸಚಿವ ರಮೇಶ್ ಹೊಳಿ ಆರೋಗ್ಯದ ಕಾರಣ ಕೊಟ್ಟು ವಿಚಾರಣೆಗೆ ಗೈರು ಹಾಜರಾಗಿದ್ದಾರೆ.

ಎಸ್ಐಟಿ ರಚನೆಯಾಗಿ ದಿನ ಸಾಕಷ್ಟು ಕಳೆದಿದೆ, ಸಿಡಿಯ ಕಿಂಗ್ ಪಿನ್ ಎಂದು ಕರೆಸಿಕೊಂಡವರನ್ನು ವಶಕ್ಕೆ ಪಡೆಯಲು ಇನ್ನೂ ಸಾಧ್ಯವಾಗದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ದಕ್ಷರೆಂದು ಹೆಸರಾಗಿರುವ ಅನೇಕ ಪೊಲೀಸ್ ಅಧಿಕಾರಿಗಳು ಎಸ್ಐಟಿ ತಂಡದಲ್ಲಿರುವ ಕಾರಣ ಕಿಂಗ್ ಪಿನ್ ಗಳ ಬಂಧನ ಶೀಘ್ರದಲ್ಲೇ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹಾಗಾಗಿಲ್ಲ.

ಇದನ್ನೂ ಓದಿ : ಕೊನೆಗೂ ಬಯಲಾಯ್ತು ಫೋಟೋ ಶೂಟ್ ರಹಸ್ಯ… ಇದು ರೇಷ್ಮಿಯ Sensual Bride ಸರಣಿ

ಈ ನಡುವೆ ಸಿಡಿ ಲೇಡಿ ಪೋಷಕರ ಭೇಟಿಯಾಗಬೇಕು ಎಂದು ಎಸ್ಐಟಿ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಳು ಅನ್ನುವ ಮಾಹಿತಿ ಇದೀಗ ಹೊರ ಬಿದ್ದಿದೆ.

ಆದರೆ ಬುದ್ದಿವಂತಿಕೆ ಪ್ರದರ್ಶಿಸಿದ ಎಸ್ಐಟಿ ಅಧಿಕಾರಿಗಳು, ನೀವು ಲಿಖಿತ ರೂಪದಲ್ಲಿ ಬರೆದುಕೊಟ್ಟು ಅದಕ್ಕೆ ಸಹಿ ಹಾಕಿದ್ರೆ ಮಾತ್ರ ಪೋಷಕರನ್ನು ಭೇಟಿ ಮಾಡಿಸುತ್ತೇವೆ ಅಂದಿದ್ದಾರೆ. ಮಾತ್ರವಲ್ಲದೆ ನಿಮ್ಮ ವಕೀಲರ ಸಹಿ ಕೂಡಾ ಆ ಪತ್ರದಲ್ಲಿ ಇರಬೇಕು ಎಂದು ವಿಶೇಷವಾಗಿ ಸೂಚಿಸಿದ್ದಾರೆ.

ಇದಾದ ಬಳಿಕ ಈ ಸಂಬಂಧ ಸಿಡಿ ಲೇಡಿ ತಮ್ಮ ವಕೀಲರ ಜೊತೆಗೆ ಚರ್ಚೆ ನಡೆಸಿದ್ದಾರೆ.ಬಳಿಕ ಪೋಷಕರನ್ನು ಭೇಟಿಯಾಗಲು ಲಿಖಿತ ರೂಪದಲ್ಲಿ ಮನವಿ ಕೊಡಲು ನಿರಾಕರಿಸಿದ್ದಾರೆ ಎಂದು ಎಸ್ಐಟಿ ಮೂಲಗಳು ಹೇಳಿವೆ.

- Advertisement -
- Advertisement -
- Advertisement -

Latest article