ಬೆಂಗಳೂರು : ರಮೇಶ್ ಜಾರಕಿಹೊಳಿ ಕಾಮಪುರಾಣದ ಸಿಡಿ ಲೇಡಿಯ ಸಂಪರ್ಕದಲ್ಲಿ ಮತ್ತೊಬ್ಬ ಮಾಜಿ ಸಚಿವರಿದ್ದರು ಅನ್ನುವ ಮಾಹಿತಿ ಬಹಿರಂಗವಾಗಿದೆ. ಜಾರಕಿಹೊಳಿ ಸಿಡಿ ಜಾಡು ಹಿಡಿದು ಬೆನ್ನು ಹತ್ತಿರುವ SITಗೆ ಈ ಮಾಹಿತಿಗಳು ಲಭ್ಯವಾಗಿದ್ದು, ಆ ಮಾಜಿ ಸಚಿವ ಹಾಗೂ ಸಿಡಿ ಲೇಡಿಯ ನಡುವೆ ನಡೆದ ಫೋನ್ ಕರೆಗಳನ್ನು ಕೆದಕಲು ಇದೀಗ SIT ಮುಂದಾಗಿದೆ.
ಈ ಮೂಲಕ ಸಿಡಿ ಲೇಡಿಯ ಬಲೆಗೆ ಕೇವಲ ಸಾಹುಕಾರ್ ಖ್ಯಾತಿಯ ರಮೇಶ್ ಜಾರಕಿಹೊಳಿ ಮಾತ್ರವಲ್ಲದೆ ಮತ್ತೊಬ್ಬ ಮಾಜಿ ಸಚಿವರೂ ಸಿಕ್ಕಿ ಬಿದ್ದಿದ್ದಾರೆ ಎಂದು ಗೊತ್ತಾಗಿದೆ.

ಖಾಸಗಿ ವಾಹಿನಿಯೊಂದರ ಸುದ್ದಿ ಪ್ರಕಾರ, ಸಿಡಿ ಲೇಡಿಯ ಬಲೆಗೆ ಬಿದ್ದವರು ಮಾಜಿ ಸಚಿವ ಡಿ. ಸುಧಾಕರ್ ಎಂದು ಗೊತ್ತಾಗಿದೆ. ಸಿಡಿ ಲೇಡಿ ಮತ್ತು ಡಿ, ಸುಧಾಕರ್ ನಡುವೆ ಸಾಕಷ್ಟು ಸಲ ಕರೆಗಳ ವಿನಿಮಯವಾಗಿದೆ. ಸಿಡಿ ಲೇಡಿಯ ಫೋನ್ ಕರೆಗಳ ವಿವರದಲ್ಲಿ ಡಿ. ಸುಧಾಕರ್ ಜೊತೆಗೆ ಸಾಕಷ್ಟು ಸಲ ಮಾತನಾಡಿರುವುದು ಗೊತ್ತಾಗಿದೆ.
ಲಾಕ್ ಡೌನ್ ಅವಧಿಯಲ್ಲೇ ಅತೀ ಹೆಚ್ಚು ಕರೆಗಳ ವಿನಿಮಯವಾಗಿರುವುದನ್ನು ಪತ್ತೆ ಹಚ್ಚಿರುವ ಎಸ್ಐಟಿ, ಇವರಿಬ್ಬರ ನಡುವೆ ಹಣಕಾಸು ವ್ಯವಹಾರವಾಗಿರುವುದನ್ನು ಪತ್ತೆ ಹಚ್ಚಿದೆ. ಸಿಡಿ ಬಿಡುಗೆಡೆಯಾಗುವುದಕ್ಕೂ ಎರಡು ದಿನ ಮುಂಚೆ ಸುಧಾಕರ್ ಸಿಡಿ ಲೇಡಿಗೆ ಹಣ ವರ್ಗಾಯಿಸಿದ್ದರು ಅದು ಲಕ್ಷದ ಮೊತ್ತದಲ್ಲಿತ್ತು ಅನ್ನುವುದನ್ನು SIT ಪತ್ತೆ ಹಚ್ಚಿದೆ.

ಹೀಗಾಗಿ ಇದೀಗ ಸುಧಾಕರ್ ಅವರಿಗೆ ನೋಟೀಸ್ ಕೊಡಲು SIT ಚಿಂತನೆ ನಡೆಸಿದೆ. ಈ ಮೂಲಕ 35ಕ್ಕೂ ಹೆಚ್ಚು ಬಾರಿ ಚಿತ್ರದುರ್ಗ ಮೂಲದ ಸುಧಾಕರ್ ಗೆ ಕರೆ ಮಾಡಿದ್ದು ಯಾಕೆ ಅನ್ನುವುದನ್ನು ಪತ್ತೆ ಹಚ್ಚಲು ಮುಂದಾಗಿದೆ.
ಆದರೆ ಈ ಎಲ್ಲಾ ಆರೋಪಗಳನ್ನು ಮಾಜಿ ಸಚಿವ ಸುಧಾಕರ್ ಅಲ್ಲಗಳೆದಿದ್ದಾರೆ. ನನಗೆ ದಿನದಲ್ಲಿ ಸಾವಿರಾರು ಕರೆಗಳು ಬರುತ್ತವೆ. ಹಾಗೇ ಸಿಡಿ ಲೇಡಿಯೂ ಕರೆ ಮಾಡಿರಬಹುದು. ಹಾಗಂತ ನಾನು ಆಕೆಗೆ ಯಾವುದೇ ಹಣ ಕೊಟ್ಟಿಲ್ಲ. ಹಣ ಕೊಟ್ಟಿರುವುದಕ್ಕೆ ಸಾಕ್ಷಿ ಎಲ್ಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.
Discussion about this post