ಬೆಂಗಳೂರು : ಸಿಡಿ ಲೇಡಿ ನನಗೆ ಗೊತ್ತಿಲ್ಲ. ಇದೆಲ್ಲಾ ಮಹಾನಾಯಕನ ಕೆಲಸ, ಸಿಡಿಯಲ್ಲಿರೋದು ನಾನಲ್ಲ, ನನ್ನ ಕುತ್ತಿಗೆಯಲ್ಲಿ ಮಚ್ಚೆ ಇದೆ ಅಂದಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇದೀಗ ಏಕಾಏಕಿ ಉಲ್ಟಾ ಹೊಡೆದಿದ್ದಾರೆ.
ನನ್ನ ಮೇಲೆ ಹನಿ ಟ್ರ್ಯಾಪ್ ನಡೆದಿದೆ ಎಂದು ದೂರಿರುವ ಅವರು, ಸಿಡಿ ಲೇಡಿ ಹಾಗೂ ನನ್ನದು ಸಮ್ಮತಿಯ ಲೈಂಗಿಕ ಕ್ರಿಯೆಯಾಗಿತ್ತು. ಆದರೆ ಅದನ್ನು ಆಕೆ ದುರುಪಯೋಗಪಡಿಸಿಕೊಂಡಿದ್ದಾಳೆ ಎಂದು ನಿಜ ಕಥೆಯನ್ನು ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿದ್ದಾರಂತೆ.
ತನ್ನದೇ ಲೈಂಗಿಯ ಕ್ರಿಯೆಯ ಎರಡು ವಿಡಿಯೋಗಳು, ಬಹಿರಂಗವಾಗುವ ಮೊದಲೇ ನನಗೆ ಲಭ್ಯವಾಗಿತ್ತು. ವಾಟ್ಸಾಪ್ ಮೂಲಕ ನನಗೆ ಎರಡು ವಿಡಿಯೋಗಳನ್ನ್ನು ಕಳುಹಿಸಿದ್ದ ಯುವತಿ ಕಾಸಿಗಾಗಿ ಬೇಡಿಕೆ ಇಟ್ಟಿದ್ದಳು. ನಾನು ಆಕೆಯೊಂದಿಗೆ ಕಳೆದಿದ್ದ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿಕೊಂಡಿದ್ದಳು. ನನ್ನ ಜೊತೆ ಸಲುಗೆಯಿಂದ ಇದ್ದ ಯುವತಿ ಬದಲಾಗಿದ್ದಳು.
ವಿಡಿಯೋ ಕಳುಹಿಸಿದ ಬೆನ್ನಲ್ಲೇ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದ ಆಕೆಯ ವರ್ತನೆ ನನ್ನಲ್ಲಿ ಕೋಪ ತರಿಸಿತ್ತು. ಆಕೆ ಇಂಥ ನೀಚ ಕೆಲಸ ಮಾಡುತ್ತಾಳೆ ಅಂದುಕೊಂಡಿರಲಿಲ್ಲ. ಹೀಗಾಗಿ ಕರೆದು ಬೈಯ್ದು, ಬುದ್ದಿ ಹೇಳಿ ಕಳುಹಿಸಿದ್ದೆ. ಜೊತೆಗೆ ಮರ್ಯಾದೆ ಅಂಜಿ ಹಣವನ್ನೂ ಕೊಟ್ಟಿದ್ದೆ ಎಂದು ಜಾರಕಿಹೊಳಿ ಹೇಳಿದ್ದಾರೆ.
ಇದಾದ ಬಳಿಕವೂ ಆಕೆ ಮತ್ತೆ ಮತ್ತೆ ಕಾಸಿಗಾಗಿ ಬೇಡಿಕೆ ಇಟ್ಟಿದ್ದಳು. ಆದರೆ ನಾನು ಅದಕ್ಕೆ ಸೊಪ್ಪು ಹಾಕಲಿಲ್ಲ. ಇದಾದ ಬಳಿಕ ಆಕೆಯ ಪರವಾಗಿ ಖಾಸಗಿ ಸುದ್ದಿ ವಾಹಿನಿಯ ಪತ್ರಕರ್ತನೊಬ್ಬ ಕರೆ ಮಾಡಿ, ವಿಡಿಯೋ ಬಗ್ಗೆ ಮಾತನಾಡಿ ಕಾಸಿಗೆ ಬೇಡಿಕೆ ಇಟ್ಟಿದ್ದ. ಆದರೆ ನಾನು ಹಣ ಕೊಡಲಿಲ್ಲ. ಹೀಗಾಗಿ ನನ್ನ ರಾಜಕೀಯ ಜೀವನವನ್ನು ಹಾಳು ಮಾಡೋ ಉದ್ದೇಶದಿಂದ ರಾಜಕೀಯ ವೈರಿಗಳು ಜೊತೆ ಸೇರಿ ಈ ವಿಡಿಯೋ ಬಹಿರಂಗ ಮಾಡಿದ್ದಾರೆ ಎಂದು ಮಾಜಿ ಸಚಿವ ಆರೋಪಿಸಿದ್ದಾರೆ.
Discussion about this post