Category: Viral Stories

143 ಜನ ಕೂರಬಹುದಾದ ರೈಲಿನಲ್ಲಿ ಸಾಗಿದ್ದು ಇಬ್ಬರು – ಹನಿಮೂನ್ ಗಾಗಿ ಇಡೀ ರೈಲು ಬುಕ್ ಮಾಡಿದ ದಂಪತಿ

ಮದುವೆಯಾದರೆ ಎಂದಿಗೂ ಮರೆಯದಂತಿರಬೇಕು ಎಂದು ಅನೇಕರು ವಿಶಿಷ್ಟವಾಗಿ ಮದುವೆಯಾಗುತ್ತಾರೆ. ವಿಮಾನದಲ್ಲಿ, ನೀರಿನಡಿ ಹೀಗೆ ಸಿಕ್ಕಾಪಟ್ಟೆ ಕ್ರಿಯೆಟಿವಿಟಿ ತೋರಿಸುವ ಮಂದಿ ಹೆಚ್ಚಾಗಿದ್ದಾರೆ. ಆದರೆ ಮಧುಚಂದ್ರವೂ ಮರೆಯಲಾಗದ ಅನುಭವವಾಗಬೇಕು ಎಂದು ಬ್ರಿಟನ್ ದಂಪತಿ ಭಾರತದಲ್ಲಿ ಹನಿಮೂನ್ ಮಾಡಿ ಸಂಭ್ರಮಿಸಿದ್ದಾರೆ. ಅದು ಕೂಡಾ ರೈಲಿನಲ್ಲಿ ಅನ್ನುವುದು ವಿಶೇಷ . ಭಾರತದ ಬಗ್ಗೆ ವಿಶೇಷ ಒಲವುಳ್ಳ ಬ್ರಿಟನ್‌ ಮೂಲದ ಗ್ರಹಾಮ್‌ ವಿಲಿಯಮ್‌ ಲಿನ್‌ ಹಾಗೂ ಸಿಲ್ವಿಯಾ ಪ್ಲಾಸಿಕ್‌…

ಕ್ಷಮಿಸಿ… ರಾಜವರ್ಧನ ಸಿಂಗ್ ರಾಥೋರ್ ಕ್ರೀಡಾಪಟುಗಳಿಗೆ ಆಹಾರ ಸೇವೆ ಒದಗಿಸಿಲ್ಲ…

ಕೆಲ ದಿನಗಳ ಹಿಂದೆ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ ಸಿಂಗ್ ರಾಥೋರ್ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಕ್ರೀಡಾ ಪಟುಗಳಿಗೆ ಆಹಾರ ಸೇವೆ ಒದಗಿಸಿದ್ದಾರೆ ಅನ್ನುವುದು ದೊಡ್ಡ ಸುದ್ದಿಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಒಂದು ಫೋಟೋ ಕೂಡಾ ವೈರಲ್ ಆಗಿತ್ತು.ಭಾರತೀಯ ಕ್ರೀಡಾಪಟುಗಳ ಬಳಿ ನಿಂತಿದ್ದ ಸಚಿವರ ಕೈಯಲ್ಲಿ ಆಹಾರದ ಬೌಲ್ ಗಳಿದದ್ದು ಈ ಪರಿ ವೈರಲ್ ಗೆ ಕಾರಣವಾಗಿತ್ತು. ಭಾರತೀಯ…

ಇದೊಂದಕ್ಕೆ ರಾಹುಲ್ ಗಾಂಧಿಯನ್ನು ಇಷ್ಟಪಡಲೇಬೇಕು..!ಸಾಧ್ಯವಾದ್ರೆ ಕೈ ನಾಯಕರು ಫಾಲೋ ಮಾಡ್ಲಿ

ರಾಹುಲ್ ಗಾಂಧಿ… ಎಐಸಿಸಿ ಅಧ್ಯಕ್ಷರು..ದೇಶದ ಪ್ರಧಾನಿಯಾಗಬೇಕು ಎಂದು ಕನಸು ಕಾಣುತ್ತಿರುವ ವ್ಯಕ್ತಿ. ಇತ್ತೀಚೆಗೆ ಎಡವಟ್ಟುಗಳಿಂದ ಸದಾ ಸುದ್ದಿಯಲ್ಲಿರುವ ರಾಜಕಾರಣಿ.ಅದರಲ್ಲೂ ವಿದೇಶದಲ್ಲಿ ಆಡಿದ ಮಾತುಗಳು ಕಾಲಿಗೆ ಬಳ್ಳಿಯಂತೆ ಸುತ್ತಿಕೊಂಡಿದೆ. ಆದರೆ ಎರಡು ದಿನಗಳ ಹಿಂದೆ ಕೇರಳಕ್ಕೆ ತೆರಳಿದ್ದ ರಾಹುಲ್ ಗಾಂಧಿ ನೆರೆ ಸಂತ್ರಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿ ಹಿಂದಿರುಗಿದ್ದಾರೆ. ವಾಪಾಸ್ ದೆಹಲಿಗೆ ಬರುವ ಸಲುವಾಗಿ ಆಲಪ್ಪುರದ ಚೆಂಗನೂರು ಕ್ರಿಶ್ಚಿಯನ್ ಕಾಲೇಜಿನ ಹೆಲಿಪ್ಯಾಡ್ ಗೆ…

ತಪ್ಪು ಉತ್ತರ ಕೊಟ್ಟರೂ ಪರವಾಗಿಲ್ಲ, ಅದೊಂದು ಮಾತು ಹೇಳಬಾರದಿತ್ತು

ಬಿಗ್ ಬಾಸ್ ಮನೆಗೆ ಹೋಗಿ ಬಂದ ಮಂದಿ ಹೊರಗಡೆ ಬಂದ ಮೇಲೆ ಎಡವಟ್ಟು ಮಾಡಿಕೊಂಡಿಲ್ಲ ಅಂದರೆ ನಿದ್ದೆ ಹತ್ತುವುದಿಲ್ಲ ಅನ್ನಿಸುತ್ತದೆ. ಒಂದಲ್ಲ ಒಂದು ಸೀಸನ್ ತೆಗೆದು ನೋಡಿ, ಸುದ್ದಿಯಾಗದೆ ಉಳಿದವರು ಬೆರಳೆಣೆಕೆಯ ಮಂದಿ. ಒಂದಿಷ್ಟು ಮಂದಿ ಮಾತ್ರ ಪಾಸಿಟಿವ್ ಆಗಿ ಸುದ್ದಿಯಾಗಿದ್ದಾರೆ. ಇದೀಗ ಸಮೀರ್ ಆಚಾರ್ಯ ಸರದಿ. ಕಾಮನ್ ಮ್ಯಾನ್ ಅನ್ನುವ ಪಟ್ಟ ಹೊತ್ತು ಬಿಗ್ ಬಾಸ್ ಮನೆಗೆ ಹೋದ ಆಚಾರ್ಯ…

ಬೀದಿ ನಾಯಿಗೆ ರಾಖಿ ಕಟ್ಟಿದ ಮಹಿಳೆ

ಇಂದೋರ್‌ನ ಪಲಸಿಯಾ ಭಾಗದಲ್ಲಿನ ಕೆಲ ಮಹಿಳೆಯರು ಬೀದಿ ನಾಯಿಗಳಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಿದ್ದಾರೆ. ಮಹಿಳೆಯರನ್ನು ಈ ನಾಯಿಗಳನ್ನು ಪಾಲನೆ ಮಾಡುತ್ತಿದ್ದು, ತಮ್ಮ ಸಹೋದರರಂತೆ ಕಾಣುತ್ತಿದ್ದಾರೆ. ರಕ್ಷಾ ಬಂಧನದ ಹಿನ್ನೆಲೆಯಲ್ಲಿ ನಾಯಿಗಳಿಗೆ ರಕ್ಷೆ ಕಟ್ಟುವ ಮೂಲಕ ಸುದ್ದಿಯಾಗಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗುತ್ತಿದೆ.

ಕೇರಳಕ್ಕೆ ಐದು ಬಾಕ್ಸ್ ಪೇರಳೆ ಕೊಟ್ಟ ಬೀದಿ ವ್ಯಾಪಾರಿ ಹೇಳಿದ್ದೇನು..?

ಕೇರಳಕ್ಕೆ ಸಹಾಯ ಹಸ್ತ ಚಾಚಿದವರ ಕಥೆಗಳನ್ನು ಕೆದಕುತ್ತಾ ಹೋದರೆ ಸಿಗುವುದು ಅಚ್ಚರಿಯ ವಿಷಯ. ಕೈ ತುಂಬಾ ಕಾಸು ಇದ್ದವರು ಸಹಾಯ ಮಾಡಿದ ಮೇಲೆ ಪಡೆದ ಪ್ರಚಾರಕ್ಕೆ ಕಡಿಮೆ ಇಲ್ಲ. ಆದರೆ ಒಂದೊಂದು ರೂಪಾಯಿ ಕೊಟ್ರಲ್ಲ ಅವರು ಪ್ರಚಾರ ಪಡೆಯಲೂ ಇಲ್ಲ, ಮಾಧ್ಯಮಗಳು ಪ್ರಚಾರ ಕೊಡಲೂ ಇಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೇರಳದ ಬಗ್ಗೆ ಕೆದಕುತ್ತಿದ್ದಾಗ ಸಿಕ್ಕಿದ ಕಥೆಯೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ,…

ಸೈಕಲ್ ಖರೀದಿಗೆಂದು ಕೂಡಿಟ್ಟ ಹಣವನ್ನು ಕೇರಳ ಸಂತ್ರಸ್ಥರಿಗೆ ಕೊಟ್ಟ ಹುಡುಗಿಗೆ ಸಿಕ್ಕ ಗಿಫ್ಟ್ ಏನು ಗೊತ್ತಾ..?

ಕೇರಳದಲ್ಲಿ ಹರಿದ ಪ್ರವಾಹ ಕಣ್ಣೀರು ತರಿಸಿದರೆ, ಜನ ಚಾಚುತ್ತಿರುವ ಸಹಾಯ ಹಸ್ತ ನೋಡಿ ಆನಂದ ಭಾಷ್ಪ ಸುರಿಯುತ್ತದೆ. ಒಂದೆಡೆ ವೀರ ಸೈನಿಕರ ರಕ್ಷಣಾ ಕಾರ್ಯಾಚರಣೆ, ಮತ್ತೊಂದು ಕಡೆ ಊಹೆಗೂ ನಿಲುಕದ ಸಹಾಯ ಮನೋಭಾವನೆ. ಸಹಾಯ ಹಸ್ತ ಚಾಚಿದವರ ಒಂದೊಂದು ಕಥೆಯೂ ಭಿನ್ನ. ಇದರಲ್ಲಿ ತಮಿಳುನಾಡಿನ 8 ವರ್ಷದ ಹುಡುಗಿಯ ತ್ಯಾಗ ಮನೋಭಾವಕ್ಕೊಂದು ಸೆಲ್ಯೂಟ್ ಹೇಳಲೇಬೇಕು.  ತಮಿಳುನಾಡು ವಿಲ್ಲುಪುರಂನ 8 ವರ್ಷದ ಹುಡುಗಿ…

ಗ್ರಾಹಕನ ಆಹಾರಕ್ಕೆ ಬಾಯಿ ಹಾಕಿದ ಫುಡ್ ಡೆಲಿವರಿ ಬಾಯ್  

 ಆನ್ ಲೈನ್ ವ್ಯವಹಾರಗಳಲ್ಲಿ ಆಗುತ್ತಿರುವ ಮೋಸಕ್ಕೆ ಲೆಕ್ಕವಿಲ್ಲ. ಮೊಬೈಲ್ ಬುಕ್ ಮಾಡಿದ್ರೆ ಕಲ್ಲು ಇಟ್ಟು ಕಳುಹಿಸುತ್ತಾರೆ. ಆದರೆ ಚೈನಾದಲ್ಲಿ ಡೆಲಿವರಿ ಬಾಯ್ ಗಳು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಗ್ರಾಹಕರ ಹಸಿವು ತಣಿಸಲು ಪುಡ್ ಸರಬರಾಜು ಮಾಡುವ ಇವರು ಗ್ರಾಹಕ ಅನ್ನಕ್ಕೆ ಕನ್ನ ಹಾಕಿದ್ದಾರೆ. ಆನ್ ಲೈನ್ App ಮೂಲಕ ಫುಡ್ ಬುಕ್ ಮಾಡಿದ್ರೆ ಮನೆ ಬಾಗಿಲಿಗೆ ಬರುತ್ತದೆ ಅಂದುಕೊಂಡ ಗ್ರಾಹಕರ…

ಕೇರಳದ ನಿರಾಶ್ರಿತರ ಕೇಂದ್ರದಲ್ಲಿ ಡ್ಯಾನ್ಸ್ ಸದ್ದು – ನೋವು ಮರೆಯಲು ಇನ್ನೇನಿದೆ ಅಲ್ಲಿ

ಕೇರಳದಲ್ಲಿ ಮಳೆಯ ಅಬ್ಬರ ನಿಧಾನವಾಗಿ ಕಡಿಮೆಯಾಗುತ್ತಿದೆ. ಬಾನಂಗಳದಲ್ಲಿ ಸೂರ್ಯನ ಕಿರಣಗಳು ಕಾಣಿಸಿಕೊಳ್ಳುವ ಲಕ್ಷಣ ತೋರುತ್ತಿದೆ.ಆದರೆ ಪ್ರವಾಹದಲ್ಲಿ ಕೊಚ್ಚಿ ಹೋದವರ ಬದುಕಿನಲ್ಲಿ ಭರವಸೆಯ ಕಿರಣಗಳು ಮೂಡುವುದು ಯಾವಾಗ. ನಿರಾಶ್ರಿತರ ಕೇಂದ್ರದಲ್ಲಿ ಕೂತವರ ಮನಸ್ಸಿನಲ್ಲಿ ಅವರ ಮನೆಯ ಚಿತ್ರ ಓಡುತ್ತಿದೆ. ಮುಂದೇನು..ಬದುಕು ಕಟ್ಟುವುದು ಹೇಗೆ ಅನ್ನುವ ಚಿಂತೆ ಕಾಡುತ್ತಿದೆ.ಈ ನಡುವೆ ತಮ್ಮ ನೋವು ಮರೆಯುವ ಪ್ರಯತ್ನ ಕೂಡಾ ನಿರಾಶ್ರಿತರ ಕೇಂದ್ರದಲ್ಲಿ ಸಾಗಿದೆ. ನೋವಿನ ನಡುವೆ…

ಏಕಕಾಲದಲ್ಲಿ ಗರ್ಭಿಣಿಯರಾದ  ಒಂದೇ ಆಸ್ಪತ್ರೆಯ 16 ನರ್ಸ್ ಗಳು..!

ಅಮೆರಿಕಾದ ಅರಿಜೋನಾ ರಾಜ್ಯದ ಮೆಸ್ಸಾದಲ್ಲಿರುವ ಬ್ಯಾನರ್ ಡೆಸರ್ಟ್ ಆಸ್ಪತ್ರೆಯಲ್ಲಿ ಇದೀಗ ಹಬ್ಬದ ಸಂಭ್ರಮ. ಪ್ರತೀ ಸಲವೂ ಆಸ್ಪತ್ರೆಗೆ ಬರುವ ಗರ್ಭಿಣಿಯರನ್ನು ಆರೈಕೆ ಮಾಡುತ್ತಿದ್ದ ದಾದಿಯರೇ ಇದೀಗ ಗರ್ಭಿಣಿಯರಾಗಿದ್ದಾರೆ. ಅದರಲ್ಲಿ ಏನು ವಿಶೇಷ ಅಂತೀರಾ.ವಿಶೇಷವಿದೆ. ಬ್ಯಾನರ್ ಡೆಸರ್ಟ್ ಆಸ್ಪತ್ರೆಯ 16 ದಾದಿಯರು ಏಕ ಕಾಲದಲ್ಲೇ ಗರ್ಭಿಣಿಯರಾಗಿದ್ದಾರೆ. ಈ 16 ಮಂದಿಯ ಗರ್ಭಕ್ಕೆ 5 ತಿಂಗಳ ವ್ಯತ್ಯಾಸ. ಫೇಸ್ ಬುಕ್ ಗ್ರೂಫ್ ನಲ್ಲಿ ಚಾಟ್…

ಇವತ್ತು ಸೋಷಿಯಲ್ ಮೀಡಿಯಾದಲ್ಲಿ ಹಿರೋ ಉಪ್ಪಳದ ಶೆಟ್ಟಿ… ಯಾಕೆ ಗೊತ್ತಾ…?

ಇವತ್ತು ಸಾಮಾಜಿಕ ಜಾಲ ತಾಣವನ್ನು ಆಳಿದ್ದು ಬಿಟಿವಿಯ ರಾಧಕ್ಕನ್ನೂ ಅಲ್ವ, ಪಬ್ಲಿಕ್ ಟಿವಿಯ ರಂಗಣ್ಣನೂ ಅಲ್ಲ. ಸುವರ್ಣ ಟಿವಿಯ ಜಯಪ್ರಕಾಶ್ ಶೆಟ್ಟಿ. ತನ್ನದೇ ವಾಹಿನಿಯನ್ನು ಬೋಗಸ್ ಅಂದ್ರು ಬಿಟ್ರು ರಂಗಣ್ಣ….! ನಿಜಕ್ಕೂ ಇವತ್ತು ಜಯಪ್ರಕಾಶ್ ಶೆಟ್ಟಿ ಮಾಡಿದ ಕೆಲಸವನ್ನು ಮೆಚ್ಚಲೇಬೇಕು. ನೆರೆಯಿಂದ ತತ್ತರಿಸಿದ ಮಂದಿಗೆ ಬಿಸ್ಕೆಟ್ ಹಾಕಿದ ರೇವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡ ಪರಿ ಇದೆಯಲ್ಲ ಅದ್ಭುತ. ನಿಜಕ್ಕೂ ಹೌದು ರೇವಣ್ಣ…

ಕೊಡಗಿನಲ್ಲಿ ಮಳೆಯಬ್ಬರ – ಮಗನ ಕಣ್ಣೇದುರೇ ಕೊಚ್ಚಿ ಹೋದ ತಾಯಿ

ಕಳೆದ ಹಲವು ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದ ಆಗಿರುವ ಹಾನಿಯನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ಮಾಹಿತಿಯ ಪ್ರಕಾರ 8 ಮಂದಿ ಸಾವನ್ನಪ್ಪಿದ್ದಾರೆ. ನಾಪತ್ತೆಯಾದವರ ಸಂಖ್ಯೆ ಇನ್ನೂ ಲೆಕ್ಕಕ್ಕೇ ಸಿಕ್ಕಿಲ್ಲ. ಈ ನಡುವೆ ಮಗನ ಕಣ್ಣ ಮುಂದೆಯೇ ತಾಯಿಯೊಬ್ಬಳು ಪ್ರವಾಹದಲ್ಲಿ ಕೊಚ್ಚಿ ಹೋದ ಘಟನೆಯೊಂದು ಬೆಳಕಿಗೆ ಬಂದಿದೆ. ಹೆಬ್ಬಟ್ಟಗೇರಿಯಲ್ಲಿ ಮಿಟ್ಟು ಗಣಪತಿ ತನ್ನ ತಾಯಿ , ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಮನೆಯಲ್ಲಿ ಉಳಿದುಕೊಂಡಿದ್ದರು….