Category: Uncategorized

ಯೋಧರ ಸಾವಿನ ನೋವಿನ ನಡುವೆ ನಿಮ್ಮದೇನು ರಾಜಕೀಯ ಜಗ್ಗೇಶ್

ಗುರುವಾರ ಜಮ್ಮು ಕಾಶ್ಮಿರದ ಪುಲ್ವಾಮದಲ್ಲಿ ಉಗ್ರರ ರಣಕೇಕೆಗೆ ಭಾರತೀಯರು ಕಣ್ಣೀರಿಡುತ್ತಿದ್ದಾರೆ. ಈ ನಡುವೆ ಕೆಲ ರಾಜಕೀಯ ಪಕ್ಷಗಳ ನಾಯಕರು ತಮ್ಮದೆಲ್ಲಿ ಇಡೋಣ ಎಂದು ಮುಂದೆ ಬಂದಿದ್ದಾರೆ. ಅದರಲ್ಲಿ ಚಂದನವನದ ನಟ ಜಗ್ಗೇಶ್ ಕೂಡಾ ಸೇರಿದ್ದಾರೆ ಅನ್ನುವುದು ದುರಂತ. ಹುತಾತ್ಮ ಯೋಧರಿಗೆ ಗೌರವ,ನಮನ ಸಲ್ಲಿಸಬೇಕಾದ ಜಗ್ಗೇಶ್, ಟ್ವೀಟ್ ನಲ್ಲಿ ರಾಜಕೀಯ ಹೇಳಿಕೆ ತೇಲಿ ಬಿಟ್ಟಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟೀಕೆ ವ್ಯಕ್ತವಾಗಿದೆ….

ಯೋಗ + ಕಾಮಸೂತ್ರ = ಯೋಗಸೂತ್ರ..!

ಪ್ರೇಮಿಗಳ ದಿನಾಚರಣೆ ಸಲುವಾಗಿ ನಂದಿ ಬೆಟ್ಟದಲ್ಲಿ ನಟಿ ಶುಭ ಪೂಂಜಾ ವಿಶಿಷ್ಟ ಫೋಟೋ ಶೂಟ್ ಮಾಡಿಸಿದ್ದಾರೆ. ಅದರ ಮೊದಲ ಭಾಗ ಇಲ್ಲಿದೆ

ನಾಡು ಹೋಗು ಅಂತಿದೆ, ಕಾಡು ಬಾ ಅಂತಿದಿ ಯಾಕೆ ಸ್ವಾಮಿ ನಿಮಗಿದು – BSY ಗೆ ತಿವಿದ ಶಾಸಕರ ಪುತ್ರ

ಗುರುಮಠಕಲ್ ನ ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಒಡ್ಡಿದ ಆಮಿಷದ ಆಡಿಯೋವನ್ನು ಇಂದು ಬಿಡುಗಡೆ ಮಾಡಲಾಗಿದೆ. ಇಂದು ಬೆಳಗ್ಗೆ ತುರ್ತು ಪತ್ರಿಕಾಗೋಷ್ಟಿ ಕರೆದ ಸಿಎಂ ಕುಮಾರಸ್ವಾಮಿ ಶರಣಗೌಡ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಆಪರೇಷನ್ ಕಮಲಕ್ಕೆ ಸಾಕ್ಷಿ ಕೊಟ್ಟಿದ್ದಾರೆ. ರಾತ್ರಿ 11.30ರ ಸುಮಾರಿಗೆ ಒಂದು ಕರೆ ಬಂತು ಆ ಕಡೆಯಿಂದ ಯಡಿಯೂರಪ್ಪ ಅವರು…

ಪ್ರಿಯಾಂಕ ವಾದ್ರಾ ವಿರುದ್ಧ ಮಾತನಾಡಿದ್ದೀರ…ನಾಳೆ ನಿಮ್ಮ ವಿರುದ್ಧ ದೂರು ದಾಖಲು

ಇತ್ತೀಚೆಗಷ್ಟೇ ಸಕ್ರಿಯ ರಾಜಕಾರಣ ಪ್ರವೇಶಿಸಿದ ಪ್ರಿಯಾಂಕಾ ವಾದ್ರಾ ಬಗ್ಗೆ ದುರುದ್ದೇಶಪೂರಿತವಾಗಿ ಕೀಳುಮಟ್ಟದ ಪ್ರಚಾರ ಮಾಡುತ್ತಿರುವವರ ವಿರುದ್ಧ ಕಾಂಗ್ರೆಸ್‌ ಮಹಿಳಾ ಘಟಕ ದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಸೋಮವಾರ ಎಫ್.ಐ.ಆರ್‌ ದಾಖಲಿಸಲಿದೆ. ಈ ಬಗ್ಗೆ  ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಸುಶ್ಮಿತಾ ದೇವ್‌ ಟ್ವಿಟರ್‌ ನಲ್ಲಿ ಮಾಹಿತಿ ನೀಡಿದ್ದು,  ನಾನು ದೆಹಲಿಯಲ್ಲಿ ಎಫ್.ಐ.ಆರ್‌ ದಾಖಲಿಸುತ್ತಿದ್ದೇನೆ. ರಾಜ್ಯ ಘಟಕ ಅಧ್ಯಕ್ಷರಿಗೆ ಆಯಾ ರಾಜ್ಯಗಳ ರಾಜಧಾನಿಗಳಲ್ಲಿ…

ಭೂಗತಪಾತಕಿ ರವಿ ಪೂಜಾರಿ ಪೊಲೀಸ್ ವಶಕ್ಕೆ

ಮೋಸ್ಟ್ ವಾಂಟೆಡ್ ಭೂಗತ ಪಾತಕಿ ರವಿ ಪೂಜಾರಿ ಕೊನೆಗೂ ಸೆರೆ ಸಿಕ್ಕಿದಾನೆ.  ರವಿ ಪೂಜಾರಿಯನ್ನು ದಕ್ಷಿಣ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಬಂಧಿಸಲಾಗಿದೆ ಎನ್ನಲಾಗಿದೆ. ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾರುವ ರವಿ ಪೂಜಾರಿ ಪೊಲೀಸರ ಮೋಸ್ಟ್ ವಾಂಟೆಂಡ್ ಭೂಗತ ಪಾತಕಿಯಾಗಿದ್ದಾನೆ. ಈತ ರಿಮೋಟ್ ರೌಡಿಸಂ ನಡೆಸಿದ ಮೊದಲ ಭೂಗತ ಪಾತಕಿ ಎಂಬ ಕುಖ್ಯಾತಿಯೂ ರವಿ ಪೂಜಾರಿಗಿದೆ.  60ಕ್ಕೂ ಹೆಚ್ಚು…

ಬಿಗ್ ಬಾಸ್ ಕೈ ಕೊಟ್ಟರೂ… ಕನ್ನಡಿಗರು ಧನ್ ರಾಜ್ ಕೈ ಬಿಡಲಿಲ್ಲ

ಕನ್ನಡ ಕಿರುತೆರೆಯ ಬಹು ನಿರೀಕ್ಷಿತ ಬಿಗ್ ಬಾಸ್ ಸೀಸನ್ ಈ ಬಾರಿ ಕೊನೆಯ ಹಂತಕ್ಕೆ ತಲುಪಿದೆ. ಈ ಬಾರಿ ಧನ್ ರಾಜ್ ಗೆಲ್ಲುತ್ತಾರೆ, ಗೆದ್ದಿಲ್ಲವಾದರೂ ಕನಿಷ್ಟ ಫೈನಲ್ ನಲ್ಲಿ ಇರುತ್ತಾರೆ ಅನ್ನುವುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಧನ್ ರಾಜ್ ಗೆದ್ದರೆ ಚಾನೆಲ್ ಗೆ ನಯಾ ಪೈಸೆ ಲಾಭವಿಲ್ಲ. ಅವರನ್ನು ವರ್ಷಪೂರ್ತಿ ಕುಣಿಸಲಾಗುವುದಿಲ್ಲ, ಬೇರೆ ಬೇರೆ ಶೋ ಗಳಲ್ಲಿ ಬಳಸಲಾಗುವುದಿಲ್ಲ ಅನ್ನುವ ಕಾರಣದಿಂದ…

ನಮ್ಮೊಳಗಿನ ಅಂಬಿ ಅಮರ…… ರೆಬೆಲ್ ಸ್ಟಾರ್ ನೆನಪಿನಲ್ಲಿ ಅದ್ದೂರಿ ಕಾರ್ಯಕ್ರಮ

ಕನ್ನಡವೇ ನಿತ್ಯ ಕಾರ್ಯಕ್ರಮ ರೂಪುಗೊಳ್ಳುವ ಸಮಯ. ಕನ್ನಡದ ಮನಸ್ಸುಗಳು ಒಂದೆಡೆ ಕೂತು ಕನ್ನಡದ ಅಪರೂಪದ ಹಳೆಯ ಹಾಡುಗಳನ್ನು ಮತ್ತೆ ಜನರಿಗೆ ತಲುಪಿಸಬೇಕು. ಹಳೆಯ ತಲೆಮಾರಿನ ಸಾಹಿತಿಗಳನ್ನು ಹೊಸ ತಲೆಮಾರಿಗೆ ಪರಿಚಯಿಸಬೇಕು ಅನ್ನುವ ನಿಟ್ಟಿನಲ್ಲಿ ಪ್ರಾರಂಭಿಸಿದ್ದು ಕನ್ನಡವೇ ನಿತ್ಯ ಕಾರ್ಯಕ್ರಮ. ಮೊದಲ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿದ್ದು ಮೈಸೂರನ್ನು. ಸಾಂಸ್ಕೃತಿಕ ನಗರಿ ಮೈಸೂರಿನಿಂದಲೇ ಕಾರ್ಯಕ್ರಮ ಪ್ರಾರಂಭವಾಗಲಿ ಅನ್ನುವುದು ತಂಡದ ಉದ್ದೇಶವಾಗಿತ್ತು. ಜೊತೆಗೆ ಕನ್ನಡ ಚಿತ್ರಗಳಿಗೆ…

ಬಾಕಿ ಶೂರರು :ಕಬ್ಬು ಬೆಳೆಗಾರರಿಗೆ ಬಾಕಿ ಉಳಿಸಿಕೊಂಡವರಲ್ಲಿ ಬಹುತೇಕರು ಶಾಸಕರು

ಸಕ್ಕರೆ ಕಾರ್ಖಾನೆ ಕಬ್ಬು ಸರಬರಾಜು ಮಾಡಿದ ರೈತರು ಇದೀಗ ಬಾಕಿ ಹಣ ಕೊಡಿಸಿ ಎಂದು ಸರ್ಕಾರಕ್ಕೆ ದುಂಬಾಲು ಬಿದ್ದಿದ್ದಾರೆ. ದುರಂತ ಅಂದರೆ ರೈತರಿಗೆ ಬಾಕಿ ಉಳಿಸಿಕೊಂಡ ಕಾರ್ಖಾನೆ ಮಾಲೀಕರ ಪೈಕಿ ಬಹುತೇಕರು ಜನಪ್ರತಿನಿಧಿಗಳಾಗಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರೇ ಕೋಟಿ ಕೋಟಿ ಮೊತ್ತವನ್ನು ರೈತರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಆ ಪೈಕಿ ಕೆಲವರ ಹೆಸರು ಹೀಗಿದೆ. ಶಾಸಕ ಆನಂದ್ ನ್ಯಾಮಗೌಡ ಮಾಲೀಕತ್ವದ  ಜಮಖಂಡಿ…

ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಸಚಿವ ಸ್ಥಾನ ನಿಭಾಯಿಸಲು ಸಿದ್ದವಂತೆ….!

ಭಗವಂತ ಮತ್ತು ಸತ್ಯನಿಷ್ಠೆ ಹೆಸರಿನಲ್ಲಿ ರಾಮನಗರದಿಂದ ಆಯ್ಕೆಯಾಗಿರುವ ನೂತನ ಶಾಸಕಿ, ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಶಾಸಕಿಯಾಗಿ ಗುರುವಾರ ಪ್ರತಿಜ್ಞಾವಿಧಿ ಸ್ವೀಕರಿಸಿದರು ಗುರುವಾರ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆಮಾತನಾಡಿದ ಅವರು ”ಪತಿ ಕುಮಾರಸ್ವಾಮಿ ಸಿಎಂ ಆಗಿರುವ ಕಾರಣ ಸಚಿವ ಸ್ಥಾನದ ನಿರೀಕ್ಷೆಯಲ್ಲಿಲ್ಲ ಮತ್ತು ಬೇಡಿಕೆ ಸಲ್ಲಿಸುವುದಿಲ್ಲ. ಆದರೆ, 2ನೇ ಬಾರಿಗೆ ಶಾಸಕಿಯಾಗಿರುವ ನನಗೆ ಮಹಿಳಾ…

ಮದುವೆ ಫೋಟೋಗೆ 18,12,00,000 ರೂಪಾಯಿ

ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ವಿವಾಹ ಡಿಸೆಂಬರ್ 2 ರಂದು ಜೋಧ್ ಪುರದಲ್ಲಿ ನಡೆಯಲಿದ್ದು, ಬಾಲಿವುಡ್ -ಹಾಲಿವುಡ್ ತಾರೆಯರ ಅದ್ಧೂರಿ ವಿವಾಹದ ಫೋಟೊಗಳಿಗೆ ಅತಿ ಹೆಚ್ಚು ಬೇಡಿಕೆ ಬಂದಿದೆ. ಫಿಲ್ಮ್ ಫೇರ್ ವರದಿಯ ಪ್ರಕಾರ ಪ್ರಿಯಾಂಕ ಹಾಗೂ ನಿಕ್ ವಿವಾಹದ ಫೋಟೊಗಳನ್ನು ಪ್ರಕಟಿಸುವು ಸಲುವಾಗಿ ಅಂತಾರಾಷ್ಟ್ರೀಯ ನಿಯತಕಾಲಿಕ ಬರೊಬ್ಬರಿ 2.5 ಮಿಲಿಯನ್ ಡಾಲರ್ ರೂಪಾಯಿ ಪಾವತಿಸಿ ಹಕ್ಕುಗಳನ್ನು ಪಡೆದಿಕೊಂಡಿದೆಯಂತೆ. ಅಂದರೆ…

ಸೋನಿಯಾ ಗಾಂಧಿ ಪ್ರಧಾನಿ ಪಟ್ಟ ತ್ಯಜಿಸಿದ್ದು ಅಪ್ಪಟ ಸುಳ್ಳು – ಸಹನಾ ವಿಜಯ ಕುಮಾರ್

ಕ್ರಿಶ್ಚಿಯನ್ ಮತಕ್ಕೆ ಸೇರಿದ ಮೂಲತ ಇಟಲಿಯವರಾದ ಸೋನಿಯಾ ಗಾಂಧಿ ಅವರು ಪ್ರಧಾನಿ ಪಟ್ಟ ತ್ಯಜಿಸಿ ತ್ಯಾಗಿಯಾಗಿದ್ದಾರೆ ಅನ್ನುವುದು ತಪ್ಪು ಮಾಹಿತಿ ಎಂದು ಲೇಖಕಿ ಸಹನಾ ವಿಜಯಕುಮಾರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಭಾನುವಾರ ಮುಕ್ತಾಯಗೊಂಡ ಲಿಟ್ ಫೆಸ್ಟ್ 2018ರ ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ ಅನ್ನುವ ಗೋಷ್ಟಿಯಲ್ಲಿ ಮಾತನಾಡಿದ ಅವರು ಸೋನಿಯಾ ಗಾಂಧಿ ತಾನು ಪ್ರಧಾನಿ ಸ್ಥಾನದ ಆಕಾಂಕ್ಷಿ ಎಂದು ತನ್ನನ್ನು ತಾನೇ ಅನುಮೋದಿಸಿಕೊಂಡು…

ನಾನವನಲ್ಲ.. ನಾನವನಲ್ಲ.. ನಾನವನಲ್ಲ : ಸಂಗೀತಾ ಭಟ್‌ ಆರೋಪಕ್ಕೆ ಗುರುಪ್ರಸಾದ್ ರಿಯಾಕ್ಷನ್

ನಟಿ ಸಂಗೀತಾ ಭಟ್‌ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಗುರುಪ್ರಸಾದ್‌, “ಆಕೆ ನೇರವಾಗಿ ನನ್ನ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ. ಹೀಗಾಗಿ ಆಕೆಯ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ಎರಡನೇ ಸಲ ಚಿತ್ರದ ಶೂಟಿಂಗ್‌ನಲ್ಲಿ ಬೆನ್ನನ್ನು ತೋರಿಸುವ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ನನ್ನ ಹೆಂಡತಿ, ಮಕ್ಕಳು ಎಲ್ಲರೂ ಸೆಟ್‌ನಲ್ಲಿ ಇದ್ದರು. ಆಕೆಗೆ ಯಾವುದೇ ಮುಜುಗರವಾಗದ ರೀತಿಯಲ್ಲಿ ಆ ದೃಶ್ಯವನ್ನು ಚಿತ್ರೀಕರಿಸಿದ್ದೇನೆ. ಹಾಗೇನಾದರೂ ಇದ್ದರೆ…