Advertisements

Category: Politics

ಚುನಾವಣೆ ಬಳಿಕ ಬಿಜೆಪಿಗೆ ಹೋಗೋದಿಲ್ಲ : ಮುಸ್ಲಿಂ ಮುಖಂಡರ ಮನೆಗಳಿಗೆ ಭೇಟಿ ನೀಡಿದ ಸುಮಲತಾ

ನಾನು ಬಿಜೆಪಿ ಸೇರುತ್ತೇನೆ ಅನ್ನುವುದು ಕೇವಲ ಊಹಾಪೋಹ. ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ನನ್ನ ಮೊದಲ ಆದ್ಯತೆ ಕಾಂಗ್ರೆಸ್ ಆಗಿತ್ತು. ಅಲ್ಲಿ ಟಿಕೆಟ್​ ಸಿಗದ ಕಾರಣ ಪಕ್ಷೇತರವಾಗಿ ಸ್ಪರ್ಧಿಸಿದೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ. ಶುಕ್ರವಾರವಾಗಿರುವ ಹಿನ್ನಲೆಯಲ್ಲಿ ಮುಸ್ಲಿಂ ಮುಖಂಡರ ಮನೆಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಸುಮಲತಾ ಚುನಾವಣೆ ಬಳಿಕ ನಾನು ಬಿಜೆಪಿ ಸೇರುವುದಿಲ್ಲ ಎಂದು ​ ಸ್ಪಷ್ಟಪಡಿಸಿದರು….

Advertisements

ಮುಸ್ಲಿಮ್ ಮತ ಸೆಳೆಯಲು ನಿಖಿಲ್ ಕಸರತ್ತು : ಮಸೀದಿಗೆ ಭೇಟಿ ನೀಡಿ ಪಾರ್ಥನೆ

ಸಕ್ಕರೆ ನಾಡಿನ ಲೋಕಸಭಾ ಅಖಾಡದಲ್ಲಿ ಚುನಾವಣಾ ಪ್ರಚಾರದ ಕಸರತ್ತು ಭರ್ಜರಿಯಾಗಿಯೇ ನಡೆಯುತ್ತಿದೆ. ಒಂದೆಡೆ ಸ್ಟಾರ್​ಗಳ ಅಬ್ಬರವಾದರೆ, ಮತ್ತೊಂದೆಡೆ ದೋಸ್ತಿ ಪಾಳಯದಲ್ಲೂ ಬಿರುಸಿನ ಪ್ರಚಾರ ನಡೆಯುತ್ತಿದೆ. ಶುಕ್ರವಾರವಾದ ಇಂದು ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರು ಮಸೀದಿಗೆ ಭೇಟಿ ನೀಡಿ ಪಾರ್ಥನೆ ಸಲ್ಲಿಸಿದ್ದು ವಿಶೇಷವಾಗಿದೆ. ನಗರದ ಮಸೀದಿಗೆ ಭೇಟಿ ನೀಡಿದ ನಿಖಿಲ್, ಮುಸ್ಲಿಂ ಟೋಪಿ ಧರಿಸಿ ಮುಸ್ಲಿಂ ಬಾಂಧವರೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು….

ಮಂಡ್ಯದಲ್ಲಿ ಮೈತ್ರಿಗೆ ‘ಕೈ’ ಕೊಟ್ಟ ಕಾರ್ಯಕರ್ತ :ನಿಖಿಲ್ ಪರ ಪ್ರಚಾರಕ್ಕೆ ರಾಹುಲ್ ಬರ್ತಾರಂತೆ

ಮಂಡ್ಯದಲ್ಲಿ ಮೈತ್ರಿ ಧರ್ಮ ಕಾವೇರಿ ನೀರಿನಲ್ಲಿ ಕೊಚ್ಚಿ ಹೋಗಿದೆ. ನಿಖಿಲ್ ಬಹಿರಂಗ ಪ್ರಚಾರದ ಮೆರವಣಿಗೆಯಲ್ಲಿ ಹಾರಾಡಬೇಕಾದ ಕಾಂಗ್ರೆಸ್ ಬಾವುಟ ಸುಮಲತಾ ಪ್ರಚಾರ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಮತ್ತೊಂದು ಕಡೆ ಕಾಂಗ್ರೆಸ್ ಕಾರ್ಯಕರ್ತರು, ನಾಯಕರಿಂದ ಸರಿಯಾದ ಬೆಂಬಲ ಸಿಗುತ್ತಿಲ್ಲ ಎಂದು ದೇವೇಗೌಡರು, ಕುಮಾರಸ್ವಾಮಿ ಗೊಣಗುತ್ತಿದ್ದಾರೆ. ಈ ನಡುವೆ ಹೈಕಮಾಂಡ್ ಸೂಚನೆಯನ್ನು ಜಾರಿಗೊಳಿಸಲು ಹೊರಟ ರಾಜ್ಯ ನಾಯಕರಿಗೆ ಮಂಡ್ಯ ಕಾಂಗ್ರೆಸ್ ನ ಹಲವು ನಾಯಕರು ಮತ್ತು…

ದಯವಿಟ್ಟು ಪ್ರಚಾರಕ್ಕೆ ಬನ್ನಿ ಸಾರ್ : ಸಿದ್ದರಾಮಯ್ಯ ಭೇಟಿಯಾದ ನಿಖಿಲ್ ಕುಮಾರಸ್ವಾಮಿ

ಮಂಡ್ಯ ಲೋಕಸಭಾ ಚುನಾವಣಾ ಕಣದಿಂದ ಮೈತ್ರಿ ಅಭ್ಯರ್ಥಿಯಾಗಿ ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಅಂಬರೀಷ್​ ವಿರುದ್ಧ ಸ್ಪರ್ಧಿಸುತ್ತಿರುವ ನಿಖಿಲ್​ ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿ ಪ್ರಚಾರಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಶುಕ್ರವಾರ ರಾತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಆಗಮಿಸಿದ ನಿಖಿಲ್ ತಮ್ಮ ಪರ ಪ್ರಚಾರಕ್ಕೆ ಬರುವಂತೆ ಆಹ್ವಾನ ನೀಡಿದರು. ಮಗನ ಗೆಲುವಿಗಾಗಿ ಸಿದ್ದು ಮೊರೆ ಹೋದ ಅನಿತಾಕ್ಕ…

ಕ್ಷೇತ್ರದ ಅಭಿವೃದ್ಧಿಗೆ ನಾರಾಯಣಸ್ವಾಮಿ ಬೆಂಬಲಿಸಿ : ಕೋಟೆನಾಡಿನಲ್ಲಿ ಬಿಜೆಪಿ ಅದ್ದೂರಿ ಪ್ರಚಾರ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಗೆಲುವಿಗಾಗಿ ಬಿಜೆಪಿ ಪಣತೊಟ್ಟಿದ್ದು, ಮೋದಿ ಕೈ ಬಲಪಡಿಸುವ ಸಲುವಾಗಿ ಕಾರ್ಯಕರ್ತರು ಹಗಲು ಇರುಳು ಅನ್ನದಂತೆ ದುಡಿಯುತ್ತಿದ್ದಾರೆ. ಶುಕ್ರವಾರ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಎ.ನಾರಾಯಣಸ್ವಾಮಿ ಪರವಾಗಿ ಶಾಸಕ ಶ್ರೀರಾಮುಲು ಮತ ಯಾಚನೆ ನಡೆಸಿದರು.  ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿ, ತಳಕು, ಮೊಳಕಾಲ್ಮೂರು ಪಟ್ಟಣ, ಹಾಗೂ ರಾಂಪುರದಲ್ಲಿ  ಬಿ ಶ್ರೀರಾಮುಲು ಬಹಿರಂಗ ಪ್ರಚಾರ ನಡೆಸಿದರು. ಈ…

ನಿಖಿಲ್ ಬುಡಕ್ಕೆ ಯಶ್ ಇಟ್ರಲ್ಲ ಬಾಂಬ್ : ಚುನಾವಣೆಗೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ

ಮಂಡ್ಯ ಚುನಾವಣೆ ರಂಗೇರಿದೆ. ಬೂತ್ ಮಟ್ಟದಲ್ಲಿ ಸುಮಲತಾ ಪರವಾಗಿ ಕೆಲಸ ಮಾಡುವ ಕಾರ್ಯಕರ್ತರು ಗಟ್ಟಿಯಾಗಿದ್ದರೆ ಸಾಕು, ನಿಖಿಲ್ ಕುಮಾರ್ ಸೋಲುವುದರಲ್ಲಿ ಸಂಶಯವೇ ಇಲ್ಲ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಶ್ ಮತ್ತು ದರ್ಶನ್ ಸುಮಲತಾ ಪರವಾಗಿ ನಡೆಸುತ್ತಿರುವ ಪ್ರಚಾರ ಮತಗಳಾಗಿ ಪರಿವರ್ತನೆಯಾಗುವ ಲಕ್ಷಣ ಗೋಚರಿಸಿದ್ದು, ಕಾಯಿ ಕಟ್ಟಿದ ಮೇಲೆ ಹಣ್ಣು ಕೊಯ್ಯುವ ಜವಾಬ್ಜಾರಿ ಬೂತ್ ಮಟ್ಟದಲ್ಲಿದೆ. ಈ ನಡುವೆ ಪಕ್ಷೇತರ ಅಭ್ಯರ್ಥಿ ನಟಿ…

ಅವರು ಸಾಯಲ್ಲ..ನೀರು ಬರಲ್ಲ… ಮೊಯ್ಲಿಯನ್ನು ಮಂಗಳೂರಿಗೆ ಕಳುಹಿಸಿ

ಅವರು ಸಾಯಲ್ಲ‌ ನಮಗೆ ನೀರು‌ ಬರಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್​.ಬಚ್ಚೇಗೌಡ ಎಂ. ವೀರಪ್ಪ ಮೊಯ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನೀರು ಕೊಟ್ಟೇ ನಾನು ಪ್ರಾಣ ಬಿಡುತ್ತೇನೆ ಎಂಬ ಮೊಯ್ಲಿ ಹೇಳಿಕೆಗೆ ತಿರುಗೇಟು ನೀಡಿದ ಅವರು ನೀರು ಬರಬೇಕಾದರೆ ಮೊಯ್ಲಿ ವಿರುದ್ಧ ಬಚ್ಚೇಗೌಡ ಗೆದ್ದು ಬರಬೇಕು. 10 ವರ್ಷಗಳಲ್ಲಿ ವೀರಪ್ಪ ಮೊಯ್ಲಿ ಯಾವುದೇ ನೀರಾವರಿ ಯೋಜನೆ ಮಾಡಲಿಲ್ಲ….

ಸಂಧಾನಕಾರ ಸಿದ್ದು : ಯುಗಾದಿಯಂದು ಹೆಚ್ಡಿಕೆ ಚೆಲುವರಾಯಸ್ವಾಮಿ ಮುಖಾಮುಖಿ

ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರರ ಮತ್ತು ಜೆಡಿಎಸ್ ನಾಯಕರ ನಡುವೆ ಮುಸುಕಿನ ಗುದ್ದಾಟ ನಿಖಿಲ್ ಕುಮಾರಸ್ವಾಮಿ ಗೆಲುವಿನ ಮೇಲೆ ಪರಿಣಾಮ ಬೀರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಗೆ ಸಹಕರಿಸುತ್ತಿಲ್ಲ ಎಂದು ದಳಪತಿಗಳು ಕಾಂಗ್ರೆಸ್ ಹೈಕಮಾಂಡ್ ಗೆ ಸುದ್ದಿ ಮುಟ್ಟಿಸಿದ್ದಾರೆ. ದಳಪತಿಗಳ ದೂರು ಸಲ್ಲಿಕೆಯಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿಸಿರುವ ಹೈಕಮಾಂಡ್ ಅದೇನೂ ಮಾಡ್ತೀರೋ ಗೊತ್ತಿಲ್ಲ, ಮೈತ್ರಿ…

ನೀವು ಬರದಿದ್ದರೆ ನಿಖಿಲ್‌ಗೆ ವೋಟು ಮಾಡ್ತೀವಿ… ದರ್ಶನ್ ನನ್ನೇ ನಡುಗಿಸಿದ ಅಭಿಮಾನಿಗಳು

ಸುಮಲತಾ ಪರವಾಗಿ ಮಂಡ್ಯದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವ ನಟ ದರ್ಶನ್ ಅವರನ್ನು ಅಭಿಮಾನಿಗಳು ಬೆದರಿಸಿದ ಘಟನೆ ನಡೆದಿದೆ. ಅಭಿಮಾನಿಗಳ ಆಕ್ರೋಶ ಕಂಡ ನಟ ದರ್ಶನ್, ಪ್ರೀತಿಯ ಗದರಿಕೆಯನ್ನು ಮನ್ನಿಸಿ, ಅಭಿಮಾನಿಗಳ ಬೇಡಿಕೆಯನ್ನೂ ಕೂಡಾ ಇದೇ ವೇಳೆ ಪೂರೈಸಿದರು. ಶ್ರೀರಂಗಪಟ್ಟಣದಲ್ಲಿ ನಟ ದರ್ಶನ್ ಸುಮಲತಾ ಪರ ಪ್ರಚಾರ ವೇಳೆ ಕೊಕ್ಕೊರೆಹುಂಡಿ ಗ್ರಾಮಕ್ಕೆ ತೆರಳಲು ನಿರಾಕರಿಸಿದ್ದರು. ಈ ವೇಳೆ ದರ್ಶನ್ ವಿರುದ್ಧವೇ ಗ್ರಾಮದ ಯುವಕರು…

ದೇವೇಗೌಡರ ಕುಟುಂಬಸ್ಥರು ಚುನಾವಣೆಗೆ ಸ್ಪರ್ಧಿಸಿ ಮಜಾ ತೆಗೆದುಕೊಳ್ಳುತ್ತಿದ್ದಾರೆ

ದೇವೇಗೌಡಜೀ, ನೀವು ದೇಶದ ಮಾಜಿ ಪ್ರಧಾನಿಗಳು. ನಿಮ್ಮ ಪುತ್ರ ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾರೆ. ಕರ್ನಾಟಕದಲ್ಲಿ ದೇವೇಗೌಡರ ಕುಟುಂಬಸ್ಥರೆಲ್ಲರೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮಜಾ ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ದೇವೇಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತೆಲಂಗಾಣದ ಸಿಕಂದರಾಬಾದ್ ನಲ್ಲಿ ನಡೆದ ಬಿಜೆಪಿ ಸಮಾವೇಶದದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜಮ್ಮು-ಕಾಶ್ಮೀರದಲ್ಲಿ ದೇಶ ಇಬ್ಭಾಗ ಮಾಡಲು ಪ್ರಯತ್ನಿಸುತ್ತಿರುವ ನ್ಯಾಷನಲ್ ಕಾನ್ಫರೆನ್ಸ್ ಜೊತೆ ಕಾಂಗ್ರೆಸ್ ಮೈತ್ರಿ…