Category: Politics

ನಾನು ಕನ್ನಡದವಳು, ಕರ್ನಾಟಕದವಳು : ಅನಿತಾ ಕುಮಾರಸ್ವಾಮಿ :ಪತಿ ಪತ್ನಿಯ ಹೇಳಿಕೆಗೆ ತಾಳೆಯೇ ಇಲ್ಲ

ಇತ್ತೀಚೆಗೆ ಸುಮಲತಾ ಅಂಬರೀಶ್ ಜಾತಿ ವಿಚಾರದ ಕೆದಕಿದ್ದ ಜೆಡಿಎಸ್ ಮುಖಂಡ ಶ್ರೀಕಂಠೇಗೌಡ ಎಡವಟ್ಟು ಮಾಡಿಕೊಂಡಿದ್ದರು. ಸುಮಲತಾ ಮಂಡ್ಯದ ಗೌಡ್ತಿಯಲ್ಲ, ಅವರು ಆಂಧ್ರದ ಗೌಡ್ತಿ ಅಂದಿದ್ದರು. ಇದು ಅಭಿಮಾನಿಗಳು ಮಾತ್ರವಲ್ಲ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಪುತ್ರ ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಕುಮಾರಸ್ವಾಮಿ ಆಡಿದ ಮಾತನ್ನು ಜನ ಟ್ರೋಲ್ ಮಾಡಿದ್ದರು. ನನ್ನ ಪತ್ನಿ ಆಂಧ್ರ ಮೂಲದವರು…

ಭಾರತ ರತ್ನ’ ಗೌರವ ಕೇವಲ ಬ್ರಾಹ್ಮಣರ ಕ್ಲಬ್: ಅಸಾದುದ್ದೀನ್ ಓವೈಸಿ ಟೀಕೆ

ಹೈದರಾಬಾದ್ ಲೋಕಸಭೆ ಸಂಸದ ಅಸಾದುದ್ದೀನ್ ಓವೈಸಿ ‘ಭಾರತ ರತ್ನ’ ವಿರುದ್ಧ ಗೇಲಿ ಮಾಡಿದ್ದಾರೆ. ಭಾರತದ ಅತ್ಯುನ್ನತ ನಾಗರಿಕರ ಪ್ರಶಸ್ತಿ ಕೇವಲ ಬ್ರಾಹ್ಮಣರ ಕ್ಲಬ್‌ ಆಗಿದೆ. ಮೇಲ್ಜಾತಿಯವರಿಗೆ ಮಾತ್ರ ಈ ಪ್ರಶಸ್ತಿ ಸಿಗುತ್ತದೆ ಎಂದು ಟೀಕಿಸಿದ್ದಾರೆ.

ಚುನಾವಣಾ ರಾಜಕೀಯ ನಿವೃತಿಯ ಮುನ್ಸೂಚನೆ ಕೊಟ್ಟ ದೇವೇಗೌಡರು

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಾಜಿ ದೇವೇಗೌಡರು ಹಾಸನದಲ್ಲಿ ಸ್ಪರ್ಧಿಸುವುದಿಲ್ಲ ಬದಲಾಗಿ ಮೊಮ್ಮಗ ಪ್ರಜ್ವಲ್ ಗೆ ಜಾಗ ಬಿಟ್ಟುಕೊಡುತ್ತಾರೆ ಎನ್ನಲಾಗಿದೆ. ಆದರೆ ಭವಾನಿ ರೇವಣ್ಣ, ಮಾವನವರೇ ಹಾಸನದಲ್ಲಿ ಸ್ಪರ್ಧಿಸಬೇಕು ಅನ್ನುತ್ತಿದ್ದಾರೆ. ಮತ್ತೊಂದು ಕಡೆ ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಮಾಜಿ ಸಿಎಂ, ಹಾಲಿ ಸಂಸದ ಸದಾನಂದಗೌಡ ವಿರುದ್ಧ ಸ್ಪರ್ಧಿಸುತ್ತಾರೆ ಅನ್ನುವ ಸುದ್ದಿ ಇದೆ. ಈ ನಡುವೆ ಮುಂಬರೋ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವ…

10 ವರ್ಷಗಳ ಹಿಂದೆ HDD ವಿರುದ್ಧ ಬಚ್ಚೇಗೌಡ ಹೇಳಿದ್ದೇನು..

2008ರ ನವೆಂಬರ್ ತಿಂಗಳಲ್ಲಿ ಬಿಜೆಪಿ ಮುಖಂಡ ಬಿಎನ್ ಬಚ್ಚೇಗೌಡ ಜೆಡಿಎಸ್ ವರಿಷ್ಠ ದೇವೇಗೌಡರ ವಿರುದ್ಧ ಸಿಕ್ಕಾಪಟ್ಟೆ ವಾಗ್ದಾಳಿ ನಡೆಸಿದ್ದರು. ಆಗ ಅದು ದೊಡ್ಡ ಚರ್ಚೆಗೂ ಕಾರಣವಾಗಿತ್ತು. ಆದರೆ ಮನುಷ್ಯರಿಗೆ ಮರೆವು ಬೇಗ.ಜನ ಇದನ್ನೂ ಮರೆತು ಬಿಟ್ಟರು. ಆದರೆ ಇದೀಗ ಮತ್ತೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ನಡೆಯುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹತ್ತು ವರ್ಷದ ಹಿಂದೆ ವೈರಲ್ ಆಗಿದ್ದ ವಿಡಿಯೋ ಇದೀಗ ಮತ್ತೆ…

ಸುಮಲತಾ ಸೋಲಿಸಲು ಜೆಡಿಎಸ್ ರಣತಂತ್ರ : ಮರೆತವರನ್ನು ಮತ್ತೆ ನೆನಪಿಸಿಕೊಂಡ ದೇವೇಗೌಡರು

ಜೆಡಿಎಸ್ ವರಿಷ್ಠರ ವಿರುದ್ಧ ಇರುವ ದೊಡ್ಡ ಆರೋಪ ಅಂದ್ರೆ, ಪಕ್ಷದಲ್ಲಿ ನಾಯಕರಿಗೆ ಬೆಳೆಯಲು ಅವಕಾಶವಿಲ್ಲ. ಕುಟುಂಬಕ್ಕೆ ಆಪ್ತರಾದವರಿಗೆ ಮಾತ್ರ ಇಲ್ಲಿ ಬೆಳೆಯಲು ಅವಕಾಶ ಅನ್ನುವುದು. ಇದು ಹೌದು ಅನ್ನುವ ಅನೇಕ ಉದಾಹರಣೆಗಳನ್ನು ರಾಜಕೀಯ ವಿಶ್ಲೇಷಕರು ಕೊಡುತ್ತಾರೆ. ಇದೀಗ ಇದೇ ಸಾಲಿನಲ್ಲಿ ಮುನ್ನಲೆಗೆ ಬಂದಿರುವುದು ಮಾಜಿ ಸಚಿವ ಎಸ್.ಡಿ.ಜಯರಾಂ ಕುಟುಂಬ. ಮಂಡ್ಯದ ನಾಯಕರಾಗಿದ್ದ ಎಸ್,ಡಿ, ಜಯರಾಂ ನಿಧನವಾದ ನಂತ್ರ ಉಪಚುನಾವಣೆಯಲ್ಲಿ ಅವರ ಪತ್ನಿ…

ಮಂಡ್ಯಕ್ಕೆ ಸುಮಲತಾ ಕೊಡುಗೆಯೇನು – ಸಿಎಂ ಪ್ರಶ್ನೆ..? ಪತ್ನಿ ಮತ್ತು ಪುತ್ರನ ಕೊಡುಗೆಯೇನು ಕುಮಾರಸ್ವಾಮಿಗಳೇ..?

ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸುದ್ದಿ ಇದೀಗ ಜೆಡಿಎಸ್ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ತಣ್ಣಗೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರೆ, ಜೆಡಿಎಸ್ ನಾಯಕರು ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಒಂದು ನಿಟ್ಟಿನಲ್ಲಿ ತಮ್ಮ ಕಾಲ ಮೇಲೆ ತಾವೇ ಕಲ್ಲು ಎತ್ತಿ ಹಾಕಿಕೊಳ್ಳುತ್ತಿದ್ದಾರೆ ಅನ್ನುವುದು ಸ್ಪಷ್ಟ. ಕಾಂಗ್ರೆಸ್ ಅನ್ನು ದೂರವಿಡಬೇಕು ಎಂದು ಜೆಡಿಎಸ್ ಬೆಂಬಲಿಸಿದ್ದ…

ಮಾಜಿ ಎಣ್ಣೆ ಮಂತ್ರಿಯಿಂದ ಇದೆಂಥಾ ಮಾತು :ಸಿದ್ದಗಂಗಾಶ್ರೀಗಳಂತೆ ಯಡಿಯೂರಪ್ಪ ಕೂಡಾ ದಾಸೋಹಿ

ತಮ್ಮ ನಾಯಕ ಯಡಿಯೂರಪ್ಪ ಅವರನ್ನು ಹೊಗಳುವ ಭರಾಟೆಯಲ್ಲಿ ಮಾಜಿ ಅಬಕಾರಿ ಸಚಿವ ಎಂಪಿ ರೇಣುಕಾಚಾರ್ಯ ತುಮಕೂರು ಶ್ರೀಗಳೊಂದಿಗೆ ಯಡಿಯೂರಪ್ಪ ಅವರನ್ನು ಹೋಲಿಸಿದ್ದಾರೆ. ಇಂದು ಯಡಿಯೂರಪ್ಪ ಅವರ ಮನೆಯಲ್ಲಿ ನಡೆದ ಬ್ರೇಕ್ ಫಾಸ್ಟ್ ಮೀಟಿಂಗ್ ಮಂತ್ರ ಮಾತನಾಡಿದ ಅವರು, ತಿಂಡಿಯೊಂದಿಗೆ ನಡೆದ ಸಭೆಗೆ ವಿಶೇಷ ಅರ್ಥ ಕಲ್ಲಿಸುವ ಅಗತ್ಯ ಇಲ್ಲ. ನಾವೇನು ದೇವೆಗೌಡರ ಮೆನೆಗೆ ಉಪಹಾರಕ್ಕೆ ಹೋಗಿದ್ದೀವಾ? ನಮ್ಮ ನಾಯಕರ ಮನೆಗೆ ನಾವು…