Category: Politics

ಲೇಟ್ ಲತೀಫ್ – ಮುಖ್ಯಮಂತ್ರಿಯನ್ನೇ ಬಿಟ್ಟು ಹೋದ ಪೈಲೆಟ್

ಸಿಎಂ ಕುಮಾರಸ್ವಾಮಿ ಹೆಲಿಪ್ಯಾಡ್‌ಗೆ ನಿಗದಿತ ಸಮಯಕ್ಕೆ ಬಂದಿಲ್ಲ ಎಂದು ಸಿಎಂ ಅವರನ್ನು ಬಿಟ್ಟು ಹೆಲಿಕಾಪ್ಟರ್‌ ಬೆಂಗಳೂರಿಗೆ ತೆರಳಿದ ಘಟನೆ ಶನಿವಾರ ಹಾಸನದಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿಗೆ ತೆರಳಬೇಕಿದ್ದ ಸಿಎಂ 3.35ಕ್ಕೆ  ಶ್ರವಣಬೆಳಗೊಳ ಹೆಲಿಪ್ಯಾಡ್‌ ಗೆ ಬರಬೇಕಾಗಿತ್ತು. ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ಅವರು ಪ್ರಚಾರ ಮುಗಿಸಿ ಕೆ.ಆರ್‌.ಪೇಟೆ ಮಾರ್ಗವಾಗಿ ಶ್ರವಣಬೆಳಗೊಳ ಹೆಲಿಪ್ಯಾಡ್‌ಗೆ…

ಮುಖ್ಯಮಂತ್ರಿಗಳಿಗೆ ಅಧಿಕಾರ ಹಂಚಿಕೆ ಸೂತ್ರದ ಪಾಠ ಮಾಡಿದ ಕೆಪಿಸಿಸಿ ಅಧ್ಯಕ್ಷರು

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಮಲತಾಯಿ ಮಕ್ಕಳಂತೆ ಕಾಣಲಾಗುತ್ತಿದೆ ಆರೋಪ ಇಂದು ನಿನ್ನೆಯದಲ್ಲ. ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದ ಬೆನ್ನಲ್ಲೇ ಇದನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ಆದರೆ ಯಾವಾಗ ಉಪಚುನಾವಣೆ ಬಿಸಿ ಕಾವೇರತೊಡಗಿತೋ…ಕಾರ್ಯಕರ್ತರ ಆಕ್ರೋಶದ ಬಿಸಿ ಪಕ್ಷದ ನಾಯಕರಿಗೆ ತಟ್ಟಿದೆ. ಇನ್ನು ಸುಮ್ಮನಿದ್ದರೆ ಕಾರ್ಯಕರ್ತರು ಕೈ ಕೊಡುವುದು ಗ್ಯಾರಂಟಿ ಅನ್ನುವುದು ಅರ್ಥವಾಗಿದೆ. ಹೀಗಾಗಿ ಆಗಿರುವ ಎಡವಟ್ಟನ್ನು ಅದನ್ನು ಸರಿಪಡಿಸಲು ಕಾಂಗ್ರೆಸ್ ಮುಂದಾಗಿದೆ. ಸರ್ಕಾರದಲ್ಲಿ…

ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ದೇವೇಗೌಡರಿಂದ ಸಿಕ್ತು ಆಯುಧ ಪೂಜೆ ಗಿಫ್ಟ್ …

ಜೆಡಿಎಸ್​ ರಾಜ್ಯಾಧ್ಯಕ್ಷರಾಗಿರುವ ಹುಣಸೂರು ಶಾಸಕ ಹೆಚ್​.ವಿಶ್ವನಾಥ್​ ಅವರಿಗೆ ಪಕ್ಷ ಸಂಘಟನಾ ಕಾರ್ಯಕ್ಕಾಗಿ ಆಯುಧ ಪೂಜೆಯಂದು ದೇವೇಗೌಡರು ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಮುಂಬರುವ ಉಪಚುನಾವಣೆ ಮತ್ತು ಲೋಕಸಭೆ ಚುನಾವಣೆಯ ಸಿದ್ದತೆ ಸಲುವಾಗಿ ಅವರಿಗೆ ಹೊಸ ಇನ್ನೋವಾ ಕ್ರಿಸ್ಟಾ ಕಾರು ನೀಡಲಾಗಿದೆ. ಪದ ಸಂಘಟನೆ ಸಲುವಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಬೇಕಾಗಿದೆ. ಹೀಗಾಗಿ  ಹೊಸ ಕಾರು ಬೇಕು ಎಂದು ರಾಷ್ಟ್ರಾಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ದೇವೇಗೌಡರಿಗೆ…

ಮಧ್ಯರಾತ್ರಿ ಕಾರ್ಯಾಚರಣೆ : ಮಧು ಕೈಗೆ ಭಿ ಪಾರಂ ಸಿಕ್ಕಾಗ ಮುಂಜಾನೆ 4 ಗಂಟೆ

ಕಾಂಗ್ರೆಸ್ ಶಸ್ತ್ರ ತ್ಯಾಗ ಮಾಡಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಜೆಡಿಎಸ್ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಯಡಿಯೂರಪ್ಪ ಪುತ್ರನನ್ನು ಸೋಲಿಸಿದರೆ, ಯಡಿಯೂರಪ್ಪರನ್ನು ರಾಜಕೀಯ ಅಖಾಡದಲ್ಲಿ ಮಣ್ಣು ಮುಕ್ಕಿಸಿದಂತಾಗುತ್ತದೆ. ಅದರಿಂದ ಆಗುವ ಲಾಭಗಳನ್ನು ಊಹಿಸಲು ಸಾಧ್ಯವಿಲ್ಲ ಎಂದು ಅರಿತಿರುವ ದೊಡ್ಡ ಗೌಡರು ದೊಡ್ಡ ದಾಳವನ್ನೇ ಉರುಳಿಸಿದ್ದಾರೆ. ಹಾಗಂತ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ದೇವೇಗೌಡರಿಗೆ ಸುಲಭವಾಗಿತ್ತು ಅಂದುಕೊಂಡರೆ ಸುಳ್ಳು. ಕಾಂಗ್ರೆಸ್ ಇಲ್ಲಿ ಅಭ್ಯರ್ಥಿಗಾಗಿ ಹೇಗೆ…

ಅನಿತಾಕ್ಕ ಹೆಸರಿನಲ್ಲಿದೆ ಹಾರ್ಲೆ ಡೆವಿಡ್ ಸನ್ ಬೈಕ್…..?

ರಾಮನಗರ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಕುಟುಂಬ ಆಸ್ತಿ ವಿವರವನ್ನು ಘೋಷಿಸಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರ ಆಸ್ತಿ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಿರುವ ವಿವರ ಪ್ರಕಾರ ಅವರ ಕುಟುಂಬದ ಆಸ್ತಿ ಬರೋಬ್ಬರಿ 167 ಕೋಟಿ ರೂಪಾಯಿ. 2013ರಲ್ಲಿ…

ಹುಬ್ಬೇರುವಂತೆ ಮಾಡಿದೆ ಯೋಗಿ ನಿರ್ಧಾರ – ಅಖಿಲೇಶ್ ವಿರೋಧಿಗೆ Z+ ಸೆಕ್ಯೂರಿಟಿ

ಸಮಾಜವಾದಿ ಸೆಕ್ಯುಲರ್ ಮೋರ್ಚಾದ ಅಧ್ಯಕ್ಷ ಹಾಗೂ ಜಸ್ವಂತ್ ನಗರ ಶಾಸಕರಾದ ಶಿವಪಾಲ್ ಯಾದವ್ ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದೆ. ಯಾದವ್ ಅವರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ. ಸೆಕ್ಯುಲರ್ ಮೋರ್ಚಾ ಸಂಸ್ಥಾಪಕರಾದ ಯಾದವ್ ಅವರಿಗೆ ಈ ಹಿಂದೆ ಬಿಎಸ್ಪಿ ನಾಯಕಿ ಮಾಯಾವತಿ…

ನಾನು ಹಿಂದು ವಿರೋಧಿಯಲ್ಲ…. ನಾನು ಹಿಂದುವಾಗಿ ಹುಟ್ಟಿದ್ದೇನೆ – ಸಿದ್ದರಾಮಯ್ಯ

ನಾನು ಸಿದ್ದರಾಮಯ್ಯ, ನನ್ನ ಅಪ್ಪನ‌ ಹೆಸರು ಸಿದ್ದರಾಮೇಗೌಡ. ಹಾಗಿದ್ದ ಮೇಲೆ ನಾನೇಕೆ ಹಿಂದು ವಿರೋಧಿ ಆಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬೆಂಗಳೂರಿನ ಗಾಂಧಿನಗರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲಾ ಜಾತಿಗಳ ಅಭಿವೃದ್ಧಿ ನಿಗಮ ಮಾಡಿದ್ದೂ ನಾನೇ ಆದರೂ ನಾನು ಜಾತಿ ವಿರೋಧಿ, ಧರ್ಮ ವಿರೋಧಿ ಎಂದು ಅಪಪ್ರಚಾರ ಮಾಡಿದರು. ಟಿಪ್ಪು ಜಯಂತಿಯನ್ನು ಏಕೆ ನಾನು ವಿರೋಧಿಸಬೇಕು?…

ನಾನು ರಾಜೀನಾಮೆ ಕೊಟ್ಟಿಲ್ಲ..ರಜೆಯಲ್ಲಿದ್ದೇನೆ….

ರಮ್ಯ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ ಅನ್ನುವುದು ದೊಡ್ಡ ಸುದ್ದಿಯಾಗಿದೆ. ಹಾಗೇ ನೋಡುವುದಾದರೆ ಇದೊಂದು ಸಾಮಾನ್ಯ ಪ್ರಕ್ರಿಯೆ. ಆದರೆ ರಮ್ಯ ಎಡವಟ್ಟು ಟ್ವೀಟ್ ಗಳ ಮೂಲಕ ಸುದ್ದಿಯಾಗಿದ್ದರು. ಹೀಗಾಗಿ ರಮ್ಯ ರಾಜೀನಾಮೆ ಬ್ರೇಕಿಂಗ್ ನ್ಯೂಸ್ ಆಗಿದೆ. ರಮ್ಯರನ್ನು ಕೆಲಸದಿಂದ ಕಿತ್ತು ಹಾಕಿದ್ರಂತೆ ರಾಹುಲ್…! ಈ ನಡುವೆ ರಾಜೀನಾಮೆ ಸುದ್ದಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಮ್ಯ “ನಾನು ರಾಜೀನಾಮೆ…

ರಾಹುಲ್ ಗಾಂಧಿ ತಮ್ಮ ಊಟದ ತಟ್ಟೆ ತೊಳೆದರೆ ದೊಡ್ಡ ಸುದ್ದಿಯೇ…?

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಅವರ ತಾಯಿ, ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಸೇರಿ ಹಲವು ಕಾಂಗ್ರೆಸ್ ಮುಖಂಡರು ತಮ್ಮ ಊಟದ ತಟ್ಟೆ ತೊಳೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ ವಾರ್ಧಾದಲ್ಲಿ ಮಹಾತ್ಮಾ ಗಾಂಧೀಜಿಯವರ ಜನ್ಮ ದಿನಾಚರಣೆಯನ್ನು ಕಾಂಗ್ರೆಸ್ ಮುಖಂಡರೆಲ್ಲ ಸೇರಿ ಸಾಂಕೇತಿಕವಾಗಿ ಆಚರಿಸಿದರು. ಗಾಂಧೀಜಿಯವರು ತಮ್ಮ ಕೊನೆಯ ದಿನಗಳನ್ನು ಕಳೆದ ಸೇವಾಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಊಟದ ಬಳಿಕ ಸೋನಿಯಾ…

ಯಾರ್ರಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ 30 ಕೋಟಿ ಕೊಡ್ತೀನಿ ಅಂದಿದ್ದು….

ನನಗೂ 30 ಕೋಟಿ ರೂ. ಹಣ ಮತ್ತು ಸಚಿವ ಸ್ಥಾನ ನೀಡುತ್ತೇನೆ ಎಂದು ಆಮಿಷ ಒಡ್ಡಿದ್ದರು. ಆದರೆ, ನಾನು ಬಿಜೆಪಿಯ ಆಮಿಷಕ್ಕೆ ಬಗ್ಗಲಿಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮ್ಮಿಶ್ರ ಸರ್ಕಾರದ ಅಸ್ಥಿರಕ್ಕೆ ಬಿಜೆಪಿಯಿಂದ ಯತ್ನ ಮುಂದುವರಿದಿದ್ದು, ನನ್ನನ್ನೂ ಸೇರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಹಣದ…

ವಿಧಾನಸೌಧದಲ್ಲಿ ದೋಸ್ತಿ…ಹಾಸನದಲ್ಲಿ ಕುಸ್ತಿ

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಎರಡೂ ಪಕ್ಷದ ಕಾರ್ಯಕರ್ತರಿಗೆ ಬಿಸಿ ತುಪ್ಪವಾಗಿದೆ. ಈ ಕಾರಣದಿಂದ ಲೋಕಸಭೆ ಚುನಾವಣೆ ಹೊತ್ತಿಗೆ ಮೈತ್ರಿಯ ಫಲವನ್ನು ಉಣ್ಣುವ ಲಕ್ಷಣ ಕಾಣಿಸುತ್ತಿದೆ. ಇದರ ಮುನ್ಸೂಚನೆ ಅನ್ನುವಂತೆ ಹಾಸನ ಜಿಲ್ಲೆಯ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಎಲ್ಲವೂ ಸರಿಯಿಲ್ಲ ಅನ್ನುವುದು ಮತ್ತೊಮ್ಮೆ ಬಹಿರಂಗವಾಗಿದೆ. ಹಾಸನದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಸದಸ್ಯ ಹಾಗೂ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಹಿನ್ನೆಲೆಯಲ್ಲಿ ಜಿ.ಪಂನಲ್ಲಿ…

ಪ್ರಧಾನಿ ಕುರಿತು ಅವಹೇಳನಕಾರಿ ಪದಬಳಕೆ ಮಾಡದಂತೆ ರಾಹುಲ್ ಪಕ್ಷದ ನಾಯಕರು ಸಲಹೆ ನೀಡಿ

ಪ್ರಧಾನಿ ಕುರಿತು ಅವಹೇಳನಕಾರಿ ಪದಬಳಕೆ ಮಾಡದಂತೆ ರಾಹುಲ್ ಗೆ ಕಾಂಗ್ರೆಸ್ ನಾಯಕರು ಸಲಹೆ ನೀಡಬೇಕು ಎಂದು ಗೃಹ ಸಚಿವ ರಾಜ್ ನಾಥ್ ಸಿಂಗ್ ಮನವಿ ಮಾಡಿದ್ದಾರೆ. ಪ್ರಧಾನಿ ವಿರುದ್ಧ ಚೋರ್ ಪದ ಬಳಕೆ ಕುರಿತಂತೆ ಕೇರಳದ ಕೊಚ್ಚಿನ್ ನಲ್ಲಿ ಪ್ರತಿಕ್ರಿಯಿಸಿದ ಅವರು ಈ ಮಾತುಗಳನ್ನು ಹೇಳಿದ್ದಾರೆ. ಇದೇ ವೇಳೆ ರಾಫೆಲ್ ವಿವಾದದ ಸಂಬಂಧ ದೇಶದ ಜನರನ್ನು ತಪ್ಪು ದಾರಿಗೆಳೆಯಲು ಮುಂದಾಗಿರುವ ಕಾಂಗ್ರೆಸ್…